Lakshmi Baramma: ಮತ್ತೊಬ್ಬರು ಔಟ್- ಪ್ರಮುಖ ಪಾತ್ರದಾರಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ಔಟ್. ಇವರೇ ಹೋದ ಮೇಲೆ ಸೀರಿಯಲ್ ಬೋರ್ ಎಂದ ನೆಟ್ಟಿಗರು.

Lakshmi Baramma: ಈಗೆಲ್ಲಾ ಜನರಿಗೆ ಹೆಚ್ಚಿನ ಮನರಂಜನೆ ಕೊಡುತ್ತಿರುವುದು ಸೀರಿಯಲ್ ಗಳು ಎಂದರೆ ತಪ್ಪಲ್ಲ. ಈಗಿನ ಸೀರಿಯಲ್ ಗಳು ಯಾವುದೇ ಸಿನಿಮಾ ಗೆ ಕಡಿಮೆಯಿಲ್ಲ ಎನ್ನುವ ಹಾಗೆ ಬಹಳ ರಿಚ್ ಆಗಿ ಮೂಡಿಬರುತ್ತಿದೆ. ಮನೆಯಲ್ಲಿರುವ್ ಹೆಂಗಸರು ಮಾತ್ರವಲ್ಲ, ಗಂಡಸರು ಹುಡುಗ ಹುಡುಗಿಯರು ಕೂಡ ಸೀರಿಯಲ್ ಗಳನ್ನು ನೋಡುವುದಕ್ಕೆ ಶುರು ಮಾಡಿದ್ದಾರೆ..

ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್ ಗಳು ಜನರಿಗೆ ಮನರಂಜನೆ ಕೊಡುತ್ತಿದೆ. ಅದರಲ್ಲಿ ಒಂದು ಲಕ್ಷ್ಮಿ ಬಾರಮ್ಮ (Lakshmi Baramma) ಧಾರವಾಹಿ. ಈ ಧಾರವಾಹಿಯಲ್ಲಿ ವೈಷ್ಣವ್ ಆಗಿ ಬಿಗ್ ಬಾಸ್ ಖ್ಯಾತಿಯ ಶಮಂತ್, ಲಕ್ಷ್ಮಿಯಾಗಿ ಡ್ಯಾನ್ಸಿಂಗ್ ಸ್ಟಾರ್ ಖ್ಯಾತಿಯ ಭೂಮಿಕಾ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವೈಷ್ಣವ್ ಜೊತೆಗೆ ಲಕ್ಷ್ಮಿ ಮದುವೆ ನಡೆದಿದೆ. ಆರಂಭದಲ್ಲಿ ಇದು ವೈಷ್ಣವ್ ಗೆ ಇಷ್ಟವಿಲ್ಲದ ಮದುವೆ ಆಗಿತ್ತು. ಆದರೆ ಕೀರ್ತಿಯೇ ವಿಲ್ಲನ್ ಆಗುವ ಹಾಗೆ ಪರಿಸ್ಥಿತಿ ಸೃಷ್ಟಿಯಾಯಿತು. ಇದನ್ನು ಓದಿ..Samantha New Look: ಫುಲ್ ಗೆಟಪ್ ಬದಲಾಯಿಸಿದ ಸಮಂತಾ- ಹೊಸ ಲುಕ್ ಕಂಡು ಅಭಿಮಾನಿಗಳು ಮತ್ತೆ ಮನ ಸೋತರು. ಏನ್ ಅಂದ ಸ್ವಾಮಿ.

ವೈಷ್ಣವ್ ತಾಯಿ ಕಾವೇರಿ, ಏನೋ ಪ್ಲಾನ್ ಮಾಡಿ, ಕೀರ್ತಿಯನ್ನು ದೂರ ಮಾಡಿ, ಕೀರ್ತಿಯೇ ಮದುವೆ ಬೇಡ ಎನ್ನುವ ಹಾಗೆ ಮಾಡಿ, ವೈಷ್ಣವ್ ಮನಸ್ಸಿಗೆ ನೋವಾಗುವ ಹಾಗೆ ಮಾಡಿ, ಕೊನೆಗೆ ಲಕ್ಷ್ಮಿ ಜೊತೆಗೆ ವೈಷ್ಣವ್ ಮದುವೆ ನಡೆಯಿತು. ಈಗ ವೈಷ್ಣವ್ ಲಕ್ಷ್ಮಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ವೈಷ್ಣವ್ ಗೆ ಲಕ್ಷ್ಮಿ ಮೇಲೆ ಪ್ರೀತಿ ಕಾಳಜಿ ಶುರುವಾಗಿದೆ. ಇಬ್ಬರ ನಡುವೆ ಹೊಂದಾಣಿಕೆ ಶುರುವಾಗಿದೆ (Lakshmi Baramma).

ಇತ್ತ ಕೀರ್ತಿಗೆ ಇದೆಲ್ಲವನ್ನು ಸಹಿಸಲು ಆಗುತ್ತಿಲ್ಲ. ವೈಷ್ಣವ್ ಮೇಲೆ ಕೀರ್ತಿಗೆ ಪ್ರೀತಿ ಇದೆ. ಕಾವೇರಿಗೆ ಎಲ್ಲವನ್ನು ಸರಿ ಮಾಡಬೇಕು ಎಂದು ಕೀರ್ತಿ ಒತ್ತಡ ಹೇರುತ್ತಿದ್ದಾಳೆ. ಈ ರೀತಿ ಕಥೆ ಸಾಗುತ್ತಿರುವಾಗ ಲಕ್ಷ್ಮಿ ಬಾರಮ್ಮ ಧಾರವಾಹಿ ಇಂದ ಕೀರ್ತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ತನ್ವಿ ರಾವ್, ಧಾರವಾಹಿ ಇಂದ ಹೊರಬಂದಿದ್ದಾರೆ. ಹೌದು, ತನ್ವಿ ರಾವ್ ಅವರು ಹೊರಬಂದಿರುವುದರಿಂದ ಮತ್ತೊಬ್ಬ ಹೊಸ ನಟಿ ಈ ಪಾತ್ರಕ್ಕೆ ಬರಲಿದ್ದಾರೆ (Lakshmi Baramma). ಇದನ್ನು ಓದಿ..Shiva Rajkumar: ರಮ್ಯಾ ರವರಿಗೆ ಬಿಗ್ ಶಾಕ್ ಕೊಟ್ಟ ಹಾಸ್ಟೆಲ್ ಹುಡುಗರು- ಇದರ ಕುರಿತು ಖಡಕ್ ಆಗಿ ಶಿವಣ್ಣ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ.

ತನ್ವಿ ರಾವ್ ಅವರು ಈ ಪಾತ್ರದಿಂದ ಹೊರಬಂದಿರುವುದು ಯಾಕೆ ಎನ್ನುವ ಕಾರಣ ಇನ್ನು ಗೊತ್ತಾಗಿಲ್ಲ. ಆದರೆ ಕಿರುತೆರೆ ವೀಕ್ಷಕರು ಮಾತ್ರ, ಮುಖ್ಯ ಪಾತ್ರವೇ ಧಾರವಾಹಿ ಇಂದ ಹೊರಬಂದಿರುವಾಗ ಇನ್ಮೇಲೆ ಧಾರಾವಾಹಿ ನೋಡೋದಕ್ಕೆ ಬೋರ್ ಆಗುತ್ತದೆ ಎನ್ನುತ್ತಿದ್ದಾರೆ. ಇನ್ನು ತನ್ವಿ ರಾವ್ ಅವರು ಈ ಮೊದಲು ಆಕೃತಿ ಹಾಗೂ ಇನ್ನಿತರ ಧಾರವಾಹಿಗಳಲ್ಲಿ ನಟಿಸಿದ್ದರು (Lakshmi Baramma). ಇದನ್ನು ಓದಿ..Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.

Best News in Kannadabhumika rameshfilm newsFilm News in kannadafilm news kannadakannada filmkannada film newskannada livekannada newsKannada Trending Newslakshmi barammalatest film updateslatest updateslive newsLive News Kannadalive trending newsNews in Kannadashamanth gowdatop news kannadatv news kannada