Hero Karizma xmr 210: ಮತ್ತೆ ಮಾರುಕಟ್ಟೆಗೆ ಹೊಸ ಅವತಾರದಲ್ಲಿ ಕಾಲಿಟ್ಟ Hero Karizma. ಜನರು ಮುಗಿ ಬೀಳುತ್ತಿರುವ ಬೈಕ್ ಬಗ್ಗೆ ಸಂಪೂರ್ಣ ಮಾಹಿತಿ.

Hero Karizma xmr 210:ನಮಸ್ಕಾರ ಸ್ನೇಹಿತರೆ ಬೈಕುಗಳ ಹೃತಿಕ್ ರೋಷನ್(Hrithik Roshan) ಎಂದು ಕರೆಯಲ್ಪಡುವ Hero Karizma ಈಗ ಮಾರುಕಟ್ಟೆಗೆ ಮತ್ತೆ ಹೊಸ ಅವತಾರದಲ್ಲಿ ಕಾಲಿಟ್ಟಿದ್ದು ಈ ಬೈಕಿನ ಅಭಿಮಾನಿಗಳಿಗೆ ಸಂತೋಷ ನೀಡುವ ಸುದ್ದಿಯಾಗಿದೆ ಎಂದು ಹೇಳಬಹುದಾಗಿದೆ. ಭಾರತದಲ್ಲಿ ವಿವಿಧ ಮೋಟರ್ ಸೈಕಲ್ ವಿಭಾಗಗಳಿವೆ ಅದರಲ್ಲಿ ಪ್ರೀಮಿಯಂ ಬೈಕುಗಳ ವಿಭಾಗದಲ್ಲಿ ಮತ್ತೆ ಭಾರತೀಯರ ನೆಚ್ಚಿನ ಬೈಕ್ ಆಗಿರುವಂತಹ Hero Karizma ಮೂಲಕ ತನ್ನ ಮಾರುಕಟ್ಟೆಯನ್ನು ಬಲಪಡಿಸಿಕೊಳ್ಳಲು ಹೀರೋ ಮೋಟೋ ಕಾರ್ಪ್ ಸಂಸ್ಥೆ ನಿರ್ಧಾರ ಮಾಡಿದ್ದು ಹೊಸ ಅವತಾರದಲ್ಲಿ Hero Karizma ಬೈಕ್ ಅನ್ನು ಲಾಂಚ್ ಮಾಡಿದೆ. ವಿಶೇಷ ಎನ್ನುವಂತೆ ಬಾಲಿವುಡ್ ನಟ ಆಗಿರುವಂತಹ ಹೃತಿಕ್ ರೋಷನ್ ಅವರನ್ನೇ ಬ್ರಾಂಡ್ ಅಂಬಾಸಿಡರ್ ಅನ್ನಾಗಿ ಕೂಡ ಆಯ್ಕೆ ಮಾಡಲಾಗಿದೆ.

ಹೀರೋ ಮೋಟೋ ಕಾರ್ಪ್( Hero Motocorp) ಸಂಸ್ಥೆ Hero Karizma XMR 210 ಬೈಕಿನ ಲಾಂಚಿಂಗ್ ಕಾರ್ಯಕ್ರಮವನ್ನು ಕೂಡ ಆ ಯೋಜನೆ ಮಾಡಿದ್ದು ಈ ಸಂದರ್ಭದಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿರುವಂತಹ ಹೃತಿಕ್ ರೋಷನ್ ಸೇರಿದಂತೆ ಕಂಪನಿಯ ಮುಖ್ಯಸ್ಥರು ಕೂಡ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಸ್ಥರು Hero Karizma ಬೈಕ್ ಅನ್ನು ಬೈಕುಗಳ ಹೃತಿಕ್ ರೋಷನ್ ಎಂಬುದಾಗಿ ಕರೆಯುತ್ತಾರೆ. ಇನ್ನು ಈ ಸಂದರ್ಭದಲ್ಲಿ ಬೈಕಿನ ಬೆಲೆಯನ್ನು ಕೂಡ ನಿರ್ಧರಿಸಲಾಗಿದ್ದು 1.72 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಈ ಬೈಕ್ ಅನ್ನು ಲಾಂಚ್ ಮಾಡಲಾಗಿದೆ ಎಂಬುದಾಗಿ ಕೂಡ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

Hero Karizma xmr 210 bike features, specification and other details explained in Kannada- By Automobile news team.

Hero Karizma XMR 210 ಬೈಕ್ ಅನ್ನು ಮೂರು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ 210cc ಸಿಂಗಲ್ ಸಿಲಿಂಡರ್ ಇಂಜಿನ್ ಅನ್ನು ಹೊಂದಿದೆ. 25Bhp ಪೀಕ್ ಪವರ್ ಹಾಗೂ 20Nm ಟಾರ್ಕ್ ಅನ್ನು ಈ ಇಂಜಿನ್ ಜನರೇಟ್ ಮಾಡುತ್ತದೆ. ಆರು ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಕೂಡ ನೀವು ಈ ಬೈಕಿನಲ್ಲಿ ಕಾಣಬಹುದಾಗಿದ್ದು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇರುವಂತಹ Bajaj Pulsar RS 200, Gixer SF250 ಹಾಗೂ ಯಮಹಾ R15 ಬೈಕುಗಳ ವಿರುದ್ಧ ಈ ಬೈಕ್ ಪೈಪೋಟಿಯನ್ನು ಮಾಡಬೇಕಾಗಿದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.. Next iPad Pro

Hero Karizma XMR210 ಕೆಲವೊಂದು ವಿಶೇಷಗಳ ಜೊತೆಗೆ ಕೂಡ ಮಾರುಕಟ್ಟೆಗೆ ಕಾಲಿಟ್ಟಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗಿದ್ದು ಬನ್ನಿ ಅದರ ಬಗ್ಗೆ ಕೂಡ ನಿಮಗೆ ಪರಿಚಯವನ್ನು ಮಾಡಲು ಹೊರಟಿದ್ದೇವೆ. ಇಂಜಿನ್ ನಲ್ಲಿ ಕಿಲ್ ಸ್ವಿಚ್ ಹಾಗೂ ಕ್ಲಿಪ್ ಹಾಗೂ ಅಸಿಸ್ಟ್ ಕ್ಲಚ್ ಗಳನ್ನು ಕೂಡ ಹೊಂದಿದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. LED ಸ್ಟೈಲಿಶ್ ಲೈಟ್ಸ್ ಗಳನ್ನು ಕೂಡ ಬೈಕಿನಲ್ಲಿ ಅಳವಡಿಸಲಾಗಿದೆ. Full Digital ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕೂಡ ಅಳವಡಿಸಲಾಗಿರುತ್ತದೆ. ಸಿಂಗಲ್ ಚಾನೆಲ್ ABS ಅನ್ನು ಕೂಡ Hero Karizma ಬೈಕಿನಲ್ಲಿ ನೀವು ಕಾಣಬಹುದಾಗಿದೆ.

Hero Karizma ಬೈಕಿನಲ್ಲಿ Anti-Glare Rear View ಮಿರರ್, ಮ್ಯಾಗ್ನೆಟಿಕ್ ಟ್ಯಾಂಕ್ ಬ್ಯಾಗ್, ಮೊಬೈಲ್ ಹೋಲ್ಡರ್ ಸೇರಿದಂತೆ ಇನ್ನೂ ಸಾಕಷ್ಟು ಫೀಚರ್ಗಳನ್ನು ಕೂಡ ನೀವು ಕಾಣಬಹುದಾಗಿದೆ. ಗ್ರಾಹಕರ ರುಚಿಗೆ ತಕ್ಕಂತೆ ಕಸ್ಟಮೈಸ್ ಮಾಡುವಂತಹ ಅವಕಾಶವನ್ನು ಕೂಡ ಹೀರೋ ಸಂಸ್ಥೆ ಈ ವಿಶೇಷ ಬೈಕಿನ ವಿಚಾರದಲ್ಲಿ ಗ್ರಾಹಕರಿಗೆ ನೀಡಿದೆ. ಸದ್ಯಕ್ಕೆ ಹೀರೋ ಮೋಟೋ ಕಾರ್ಪ್ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಬೈಕಿನ ಅಡ್ವಾನ್ಸ್ ಬುಕಿಂಗ್ ಕೂಡ ಪ್ರಾರಂಭವಾಗಿದ್ದು ನೀವು ಈ ಬೈಕ್ ಅನ್ನು ಇಷ್ಟಪಟ್ಟಿದ್ದೆ ಆದಲ್ಲಿ ನೀವು ಕೂಡ ಬುಕ್ ಮಾಡಬಹುದಾಗಿದೆ.

2023 hero karizma xmr 210automobile news in kannadahero karizma xmr 210 imageshero karizma xmr 210 launch datehero karizma xmr 210 mileagehero karizma xmr 210 pricehero karizma xmr 210 seat heighthero karizma xmr 210 specificationshero karizma xmr 210 top speedKannada automobile newskannada live newskannada news