Royal Enfield Bullet 350: ಮಾರುಕಟ್ಟೆಗೆ ಲಾಂಚ್ ಆಯಿತು ಹೊಸ ಅವತಾರದಲ್ಲಿ ತಯಾರಾದ Royal Enfield Bullet 350. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.

Royal Enfield Bullet 350: ನಮಸ್ಕಾರ ಸ್ನೇಹಿತರೇ ದ್ವಿಚಕ್ರ ವಾಹನ ಪ್ರಿಯರಿಗೆ ಅದರಲ್ಲೂ ವಿಶೇಷವಾಗಿ ರಾಯಲ್ ಎನ್ಫೀಲ್ಡ್ ಬೈಕುಗಳನ್ನು ಇಷ್ಟಪಡುವಂತಹ ಗ್ರಾಹಕರಿಗೆ ಒಂದೊಳ್ಳೆ ಸುದ್ದಿ ಸಿಕ್ಕಿದೆ. Royal Enfield Bullet 350 ಹೊಸ ಅವತಾರದಲ್ಲಿ ಅಪ್ಡೇಟೆಡ್ ವರ್ಷನ್ ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದ್ದು ಮೂರು ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗುತ್ತಿದೆ. ಮಿಲಿಟರಿ ರೆಡ್ ಹಾಗೂ ಬ್ಲಾಕ್ ಕಲರ್ ಬೈಕುಗಳು 1.73 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಸಿಗುತ್ತಿವೆ. ಸ್ಟ್ಯಾಂಡರ್ಡ್ ಮರೂನ್ ಹಾಗೂ ಬ್ಲಾಕ್ ಕಲರ್ ಬೈಕುಗಳು 1.97 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಬ್ಲಾಕ್ ಗೋಲ್ಡ್ ಕಲರ್ ವೆರಿಯಂಟ್ ಬೈಕು 2.16 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಸಿಕ್ತಾ ಇದೆ. New-Gen Royal Enfield Bullet 350 ಬೈಕಿನ ಬುಕಿಂಗ್ ಕೂಡ ಈಗಾಗಲೇ ಭಾರತದಲ್ಲಿ ಪ್ರಾರಂಭವಾಗಿದೆ.

ಅಪ್ಡೇಟೆಡ್ Royal Enfield Bullet 350 ಬೈಕ್ ನೋಡೋದಕ್ಕೆ ಹಿಂದಿನ UCE ವರ್ಷನ್ ನಂತೆ ಕಾಣಬಹುದು ಆದರೂ ಕೂಡ ಕೆಲವೊಂದು ಬದಲಾವಣೆಗಳೊಂದಿಗೆ ಈ ಬೈಕು ಈ ಬಾರಿ ಮಾರುಕಟ್ಟೆಗೆ ಕಾಲಿಟ್ಟಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಜೆ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ ಈ ಬಾರಿ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ಲುಕ್ ಬೇರೆ ಬೈಕುಗಳಿಗೆ ಹೋಲಿಸಿದರೆ ಸೇಮ್ ಆಗಿದ್ದರೂ ಕೂಡ ಸಾಕಷ್ಟು ವಿಶೇಷತೆಗಳನ್ನು ಬೇರೆ ಬೈಕುಗಳಿಗಿಂತ ವಿಭಿನ್ನವಾಗಿ ಈ ಬಾರಿ ವಿನ್ಯಾಸಗೊಳಿಸಲಾಗಿದೆ.

Royal Enfield Bullet 350 Price – Mileage, Images, Colors explained clearly in Kannada by Kannada Automobile news team.

Royal Enfield Bullet 350 ಅಪ್ಡೇಟ್ ವರ್ಷನ್ ನ ಇಂಜಿನ್ ಬಗ್ಗೆ ಮಾತನಾಡುವುದಾದರೆ 349.9cc ಏರ್ ಆಯಿಲ್ ಕೂಲ್ಡ್ ಇಂಜಿನ್ ಅನ್ನು ಇದರಲ್ಲಿ ಬಳಸಲಾಗಿದೆ. 20Bhp ಮ್ಯಾಕ್ಸಿಮಮ್ ಪವರ್ ಹಾಗೂ 27Nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. ಇದರ ಜೊತೆಗೆ 5 ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಕೂಡ ಅಳವಡಿಸಲಾಗಿದೆ. ಬೈಕಿನ ಪರ್ಸನಾಲಿಟಿಗೆ ತಕ್ಕಂತೆ ಎಂಜಿನ್ ಅನ್ನು ಅಳವಡಿಸಲಾಗಿದೆ ಎಂದು ಹೇಳಬಹುದಾಗಿದೆ.

Royal Enfield Bullet 350 ಬೈಕಿನ ಸಸ್ಪೆನ್ಷನ್ ಬಗ್ಗೆ ಮಾತನಾಡುವುದಾದರೆ, ಟೆಲಿಸ್ಕೋಪಿಕ್ ಫೋರ್ಕ್(Telescopic Forks) ಅನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ ಹಾಗೂ ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಚಾರ್ಜ್ ಆಗಿರುವಂತಹ ಅಬ್ಸರ್ವರ್ ಗಳನ್ನು ಬಳಸಲಾಗಿದೆ. ವೇರಿಯಂಟ್ ಆಧಾರದಲ್ಲಿ ಈ ಬೈಕಿನಲ್ಲಿ ಡಿಸ್ಕ್ ಹಾಗೂ ಡ್ರಮ್ ಬ್ರೇಕ್ ಗಳನ್ನು ನಿರ್ಧರಿಸಲಾಗುತ್ತದೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಸ್ಪೆನ್ಷನ್ ಹಾಗೂ ಬ್ರೇಕಿಂಗ್ ಸಿಸ್ಟಮ್ ನಲ್ಲಿ ಈ ಬೈಕಿನಲ್ಲಿ ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ಳಲಾಗಿದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.. Next iPad Pro

New-Gen Royal Enfield Bullet 350 ಡಿಸೈನ್ ನಲ್ಲಿ ಯಾವುದೇ ಬದಲಾವಣೆ ಮಾಡಲ ಎಂಬುದನ್ನು ಕೂಡ ನೀವು ಮೊದಲ ನೋಟದಲ್ಲಿ ಡಿಸೈಡ್ ಮಾಡಬಹುದಾಗಿದೆ. ಹ್ಯಾಲೊಜೆನ್ ಹೆಡ್ ಲೈಟ್ ಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಫ್ಯುಯಲ್ ಟ್ಯಾಂಕ್ ನಲ್ಲಿ ಮದ್ರಾಸ್ ಸ್ಟ್ರೈಪ್‌ಗಳನ್ನು ಕೂಡ ನೀವು ಕಾಣಬಹುದಾಗಿದೆ. ನೇಮ್ ಬ್ಯಾಡ್ಜ್ ಅನ್ನು ಮೆಟಲ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿಕ್ಕದಾದ ಡಿಜಿಟಲ್ ಮೀಟರ್ ಅನ್ನು ಕೂಡ ಕಾಣಬಹುದಾಗಿತ್ತು ಅದು ನಿಮಗೆ ಸರ್ವಿಸ್ ಅನ್ನು ನೆನಪು ಮಾಡುತ್ತದೆ. ಓಡೋಮೀಟರ್(Odometer), ಇಂಡಿಕೇಟರ್ ಹಾಗೂ Fuel Gaze ಅನ್ನು ಕೂಡ ನೀವು Royal Enfield Bullet 350 ನಲ್ಲಿ ಕಾಣಬಹುದಾಗಿದೆ.

automobile news in kannadabullet 350 standardKannada automobile newskannada live newskannada newsroyal enfield bullet 350 on road priceroyal enfield bullet 350 priceroyal enfield bullet priceroyal enfield classic 350royal enfield classic 350 on road priceroyal enfield classic 350 price