ಹೀಗೆ ಮಾಡಿ ಸಾಕು1 ವಾರದ ಗ್ಯಾಸ್ 2 ವಾರಕ್ಕೆ ಬರುತ್ತೆ ! ಉಪಯುಕ್ತ ಟಿಪ್ಸ್ ಗಳು. ಯಾವ್ಯಾವು ಗೊತ್ತೇ?

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಅಡುಗೆ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ತುಂಬಾನೇ ಮುಖ್ಯವಾಗಿರುತ್ತದೆ ಅದರಲ್ಲಿಯೂ ಗ್ಯಾಸ್. ನಾವು ಹೇಳುವ ರೀತಿ ಗ್ಯಾಸ್ ಸ್ಟವ್ ನನ್ನು ಮನೆಯಲ್ಲಿಯೇ ಸರ್ವಿಸ್ ಮಾಡಿಕೊಂಡರೆ 1 ವಾರ ಬರುವ ಗ್ಯಾಸ್ 2 ವಾರ ಬಳಸಬಹುದು.ಕೆಲವರು ಗ್ಯಾಸ್ ಸ್ಟವ್ ನನ್ನು ಹಣ ನೀಡಿ ರಿಪೇರಿ ಮಾಡಿಸುತ್ತಾರೆ. ಇಂದು ಈ ಲೇಖನದಲ್ಲಿ ಹೇಗೆ ಮನೆಯಲ್ಲಿಯೇ ಸುಲಭವಾಗಿ ಗ್ಯಾಸ್ ಸ್ಟವ್ ರಿಪೇರಿ ಮಾಡಬಹುದು ಎಂಬ ಮಾಹಿತಿಯನ್ನು ತಿಳಿಸಲಾಗಿದೆ.

ಗ್ಯಾಸ್ ಸ್ಟವ್ ನನ್ನು ಉಪಯೋಗಿಸಿಕೊಂಡು ಅಡುಗೆ ಮಾಡುವಾಗ ಹಾಲು ಉಕ್ಕಿಸುವುದು ಅಥವಾ ಬೇರೆ ಬೇರೆ ಸಾಮಾನುಗಳು ಗ್ಯಾಸ್ ಸ್ಟವ್ ಮೇಲೆ ಬೀಳುವುದು ಸರ್ವೇ ಸಾಮಾನ್ಯ.ಈ ಸಾಮಾನುಗಳು, ಧೂಳು ಹಾಗೂ ಹಾಲು ಬರ್ನಲ್ ಒಳಗೆ ಸೇರಿಕೊಳ್ಳುತ್ತದೆ. ಈ ರೀತಿಯ ಧೂಳು ತುಂಬಿಕೊಂಡಾಗ ಗ್ಯಾಸ್ ಉರಿಯುವುದು ಕಡಿಮೆಯಾಗುವುದರ ಜೊತೆಗೆ ಹೆಚ್ಚು ಗ್ಯಾಸ್ ಖರ್ಚಾಗುತ್ತದೆ.

ಗ್ಯಾಸ್ ಸ್ಟವ್ ಸರ್ವಿಸ್ ಮಾಡುವ ಸುಲಭ ವಿಧಾನ: ಮೊದಲಿಗೆ ಒಂದು ವೇಸ್ಟ್ ಪ್ಲಾಸ್ಟಿಕ್ ಬಟ್ಟಲು ಅಥವಾ ಡಬ್ಬವನ್ನು ತೆಗೆದುಕೊಳ್ಳಿ. ಅದರ ಒಳಗೆ ಬರ್ನಲ್ ನನ್ನು ಇಟ್ಟುಕೊಳ್ಳಿ. ನಂತರ ಟಾಯ್ಲೆಟ್ ಕ್ಲೀನರ್ ಹಾರ್ಪಿಕ್ ನನ್ನು ಅದರಮೇಲೆ ಹಾಕಿಕೊಳ್ಳಿ. ನಂತರ ಅದರ ಮೇಲೆ ಇನ್ನೊಂದು ಬರ್ನಲ್ ನನ್ನು ಇಟ್ಟುಕೊಂಡು ಅದೇ ರೀತಿಯಾಗಿ ಹಾರ್ಪಿಕ್ ನನ್ನು ಹಾಕಿಕೊಂಡು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಮತ್ತೊಂದು ಕಡೆ ಬರ್ನಲ್ ಹೋಲ್ಡರ್ ನನ್ನು ಗ್ಯಾಸ್ ಸ್ಟವ್ ನಿಂದ ಬಿಚ್ಚುಕೊಳ್ಳಿ.

ನಂತರ ಹಲ್ಲು ಉಜ್ಜುವ ಬ್ರಷ್ ನಿಂದ ಬರ್ನಲ್ ಹೋಲ್ಡರ್ ನನ್ನು ಉಜ್ಜಿ ಕ್ಲೀನ್ ಮಾಡಿಕೊಳ್ಳಿ. ನಂತರ ಅದೇ ಬ್ರಷ್ ಸಹಾಯದಿಂದ ಗ್ಯಾಸ್ ಸ್ಟವ್ ನ ಪೈಪ್ ನ ಮೇಲ್ಭಾಗವನ್ನುಕ್ಲೀನ್ ಮಾಡಿಕೊಳ್ಳಿ. ತದನಂತರ ಒಂದು ತಾಮ್ರದ ಕಡ್ಡಿ ಅಥವಾ ಯಾವುದಾದರೂ ಸಣ್ಣ ವಯರ್ ನನ್ನು ತೂತಿಗೆ ತೂರಿಸಿ ಹೊರಗೆ ಎಳೆಯುವುದನ್ನು 2 – 3 ಬಾರಿ ಮಾಡಿ. ನಂತರ ಪೈಪ್ ನ ಮೇಲೆ ಬೆರಳಿನ ಸಹಾಯದಿಂದ ಹೊಡೆದರೆ ಅದರಲ್ಲಿರುವ ಸಣ್ಣ ಧೂಳು ಹೊರಗಡೆ ಬರುತ್ತದೆ. ನಂತರ ಬರ್ನಲ್ ಹೋಲ್ಡರ್ ನನ್ನ ಫಿಕ್ಸ್ ಮಾಡಿಕೊಳ್ಳಿ.