ಫ್ರಿಡ್ಜ್ ನಲ್ಲಿ ಇಡದೇ ಹೀಗೆ ಮಾಡಿ 1 ವರ್ಷವಾದ್ರು ಕೊತ್ತಂಬರಿಸೊಪ್ಪು ಸೂಪರ್​ ಇರುತ್ತೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಫ್ರಿಡ್ಜ್ ನಲ್ಲಿ ಇಡದೆ 1 ವರ್ಷಗಳ ಕಾಲ ಕೊತ್ತಂಬರಿ ಸೊಪ್ಪನ್ನು ಸ್ಟೋರ್ ಮಾಡುವ ವಿಧಾನವನ್ನು ಇಂದು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಈಗಿನ ಬಿಸಿಲಿಗೆ ಕೊತ್ತಂಬರಿ ಸೊಪ್ಪನ್ನು ಹೊರಗಡೆ ಇಟ್ಟರೆ ಬೇಗನೆ ಹಾಳಾಗುತ್ತದೆ. ಇನ್ನು ಫ್ರಿಡ್ಜ್ ನಲ್ಲಿ ಇಟ್ಟರೂ ಸಹ ಸ್ವಲ್ಪ ದಿನಗಳವರೆಗೆ ಫ್ರೆಶ್ ಆಗಿ ಇರುತ್ತದೆ. ನಂತರ ಕೆಡಲು ಪ್ರಾರಂಭವಾಗುತ್ತದೆ. ನಾವು ಹೇಳುವ ವಿಧಾನವನ್ನು ಫಾಲೋ ಮಾಡಿದರೆ ಹೊರಗಡೆ 1 ವರ್ಷಗಳ ಕಾಲ ಕೊತ್ತಂಬರಿ ಸೊಪ್ಪನ್ನು ಸ್ಟೋರ್ ಮಾಡಬಹುದು.

ಕೊತ್ತಂಬರಿ ಸೊಪ್ಪನ್ನು ಫ್ರೆಶ್ ಆಗಿ ಸ್ಟೋರ್ ಮಾಡುವ ವಿಧಾನ: ಮೊದಲಿಗೆ ಕೊತ್ತಂಬರಿಸೊಪ್ಪಿನ ಜೊತೆ ಇರುವ ಬೇರೆ ರೀತಿಯ ಸೊಪ್ಪು ಬೇರ್ಪಡಿಸಿ ಹಾಗೂ ಕೊಳೆತಿರುವ ಸೊಪ್ಪನ್ನು ಬಿಡಿಸಿಕೊಳ್ಳಿ. ನಂತರ ಬೇರುಗಳನ್ನು ಕತ್ತರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಒಂದೇ ಒಂದು ಬೇರು ಸಹ ಇರಬಾರದು. ನಂತರ ಬಿಡಿಸಿಕೊಂಡ ಸೊಪ್ಪನ್ನು ನೀರಿಗೆ ಹಾಕಿ 2 ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಸ್ವಲ್ಪ ನೀರಿನ ಅಂಶ ಸೊಪ್ಪಿನಲ್ಲಿ ಕಡಿಮೆಯಾಗುವವರೆಗೂ ಬಿಡಿ. ನಂತರ ದಂಟಿನಿಂದ ಸೊಪ್ಪನ್ನು ಮಾತ್ರ ಬಿಡಿಸಿಕೊಳ್ಳಿ. ದಂಟನ್ನು ಬಿಸಾಡುವ ಬದಲು ಅದನ್ನು ಸಾಂಬಾರಿಗೆ ಅಥವಾ ಬೇರೆ ಅಡಿಗೆಗೆ ಉಪಯೋಗಿಸಿಕೊಳ್ಳಿ. ನಂತರ ಬಿಡಿಸಿದ ಸೊಪ್ಪನ್ನು ಒಂದು ಸ್ವಚ್ಛವಾಗಿರುವ ಟವಲ್ ಮೇಲೆ ಹರಡಿಕೊಳ್ಳಿ.

ನಂತರ ಅದರ ಮೇಲೆ ಒಂದು ಟವಲನ್ನು ಹಾಕಿ ಮೃದುವಾಗಿ ಒತ್ತಿಕೊಳ್ಳಿ. ಈ ರೀತಿ ಮಾಡುವುದರಿಂದ ಸೊಪ್ಪಿನಲ್ಲಿರುವ ನೀರಿನಂಶ ಬಹುತೇಕ ಕಡಿಮೆಯಾಗುತ್ತದೆ. ನಂತರ ಒಂದು ತಟ್ಟೆ ಅಥವಾ ಟ್ರೆ ಮೇಲೆ ಬಿಡಿಬಿಡಿಯಾಗಿ ಸೊಪ್ಪನ್ನು ಹಾಕಿ ಮನೆಯ ತಾಪಮಾನದಲ್ಲಿ ಒಣಗಲು ಬಿಡಿ. ಯಾವುದೇ ಕಾರಣಕ್ಕೂ ಸೂರ್ಯನ ಬೆಳಕು ಬೀಳುವ ಹಾಗೆ ಒಣಗಿಸಿಕೊಳ್ಳಿ. 2 -3 ದಿನ ಹಾಗೆ ಇಟ್ಟರೆ ಸೊಪ್ಪು ಒಣಗುತ್ತದೆ. ನಂತರ ಕೈಯಿಂದ ಸೊಪ್ಪನ್ನು ಪುಡಿಮಾಡಿಕೊಳ್ಳಿ. ನಂತರ ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಂಡರೆ 1 ವರ್ಷಗಳ ಕಾಲ ಹೊರಗಡೆ ಸ್ಟೋರ್ ಮಾಡಬಹುದು.