ಪ್ರತಿಯೊಬ್ಬರೂ ಸಂತೋಷವಾಗಿ ಬಾಳಲು ಯೋಗ್ಯವಾಗಿರುವ ಭಾರತದ ಟಾಪ್ 7 ರಾಜ್ಯಗಳು ಯಾವ್ಯಾವು ಗೊತ್ತೇ?? ಸೂಚ್ಯಂಕ ಏನು ಹೇಳುತ್ತದೆ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಆಗಲೇ ಎಲ್ಲೇ ಆಗಲಿ ಮನುಷ್ಯ ಮೊದಲಾಗಿ ಹುಡುಕುವುದು ನೆಮ್ಮದಿಯನ್ನು. ದುಡ್ಡು ನಮ್ಮ ನೆಮ್ಮದಿಯನ್ನು ಕೊಳ್ಳಲಾಗದು. ನಮಗೆ ಇಷ್ಟ ಪಡುವಂತಹ ಕೆಲಸ ಹಾಗೂ ಜೀವನಶೈಲಿ ನಮ್ಮೊಂದಿಗಿದ್ದಾರೆ ನೆಮ್ಮದಿ ತಾನಾಗಿ ನಮ್ಮೊಂದಿಗೆ ಬರುತ್ತದೆ. ಹಾಗಾಗಿ ಜೀವನ ಸುಖಕರವಾಗಿರಲಿ ಯಲು ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸಂಬಳಕ್ಕಿಂತ ಹೆಚ್ಚಾಗಿ ಎಲ್ಲ ಚಿಂತೆ ಮರೆತು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಇನ್ನು ನಾವು ಹೇಳಲು ಹೊರಟಿರುವ ವಿಷಯದಲ್ಲಿ ನಮ್ಮ ದೇಶದಲ್ಲಿ ಸಂತೋಷವಾಗಿ ಬಾಳಲು ಇರುವ 7 ರಾಜ್ಯಗಳು ಯಾವುದು ಎಂಬುದರ ಬಗ್ಗೆ ನಿಮಗೆ ವಿವರವಾಗಿ ತಿಳಿಸುತ್ತೇವೆ ಬನ್ನಿ.

ಮಿಜೋರಾಂ ಮಿಜೋರಾಂ ಗೆ ನೆಮ್ಮದಿಯ ರಾಜ್ಯದ ಮಾಪನದಲ್ಲಿ 3.57 ಅಂಕಗಳು ದೊರೆತಿವೆ. ಇದು ಈಗಾಗಲೇ ಪ್ರವಾಸಿಗರ ಆಕರ್ಷಣೀಯ ತಾಣಗಳಲ್ಲಿ ಅಗ್ರವಾಗಿದ್ದು ಲಕ್ಷಾಂತರ ಪ್ರವಾಸಿಗರು ಈ ಪ್ರದೇಶವನ್ನು ನೋಡಲು ಪ್ರತಿವರ್ಷ ಬರುತ್ತಾರೆ. ಈ ಪರ್ವತ ಹಾಗೂ ಹಸಿರಿಂದ ಕೂಡಿರುವ ಪ್ರದೇಶದಲ್ಲಿ ಯಾವುದೇ ಕುಟುಂಬ ಆರಾಮವಾಗಿ ಜೀವಿಸಲು ಸಾಧ್ಯವಿದೆ.

ಪಂಜಾಬ್ ಐದು ನದಿಗಳ ರಾಜ್ಯವೆಂದು ಖ್ಯಾತಿಯಾಗಿರುವ ಪಂಜಾಬ್ ನಮ್ಮ ದೇಶದ ರಾಜಧಾನಿ ದಿಲ್ಲಿ ಗೆ ಹತ್ತಿರವಿರುವ ರಾಜ್ಯವೆಂದು ಹೇಳಬಹುದು. ಇಲ್ಲಿ ನೆಮ್ಮದಿಯ ಮಾಪನ 3.52 ಆಗಿದೆ. ಈ ರಾಜ್ಯದಲ್ಲಿ ಕಂಡು ಬರುವ ಕೃಷಿಕ್ಷೇತ್ರ ಹಾಗೂ ನದಿ ಇತ್ಯಾದಿ ಸಮೃದ್ಧಿ ಹೊಂದಿರುವ ಪ್ರದೇಶ ನಿಮ್ಮನ್ನು ಇಲ್ಲೇ ಇರುವಂತೆ ಮನಸ್ಸು ಮಾಡುವುದು ಖಂಡಿತ.

ಅಂಡಮಾನ್ ನಿಕೋಬಾರ್ ಭಾರತದ ಕೇಂದ್ರೀಯ ರಾಜ್ಯವಾಗಿರುವ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳು ಕೂಡ ಈ ಸಾಲಿನಲ್ಲಿ ಬರುತ್ತದೆ‌. ಇದರ ನೆಮ್ಮದಿಯ ಮಾಪನ 3.47 ಇದೆ. ನೂರಾರು ದ್ವೀಪ ಸಮೂಹವನ್ನು ಒಳಗೊಂಡಿರುವ ಅಂಡಮಾನ್-ನಿಕೋಬಾರ್ ನೆಮ್ಮದಿಯಿಂದ ಜೀವಿಸಲು ಮನುಷ್ಯ ಇಷ್ಟಪಡುವ ಜಾಗಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಖಂಡಿತ. ಸುತ್ತಲೂ ನೀರಿನಿಂದ ತುಂಬಿಕೊಂಡಿರುವ ಈ ಪ್ರದೇಶದಲ್ಲಿ ಎಂಥದೇ ಮನಸ್ಥಿತಿಯ ಮನುಷ್ಯನು ನೆಮ್ಮದಿಯಿಂದ ಇರಲು ಉತ್ತಮ ಜಾಗ ಎಂದು ಹೇಳಬಹುದು. ಈ ಪ್ರದೇಶಕ್ಕೆ ವಿಶ್ವಾದ್ಯಂತ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಈ ಪ್ರವಾಸಿ ತಾಣವನ್ನು ಭೇಟಿನೀಡಲು ಬರುತ್ತಾರೆ.

ಪುದುಚೇರಿ ಬೆಂಗಳೂರು ಹಾಗೂ ಹೈದರಾಬಾದಿಗೆ ಹತ್ತಿರವಿರುವ ಈ ಪ್ರದೇಶ ನೆಮ್ಮದಿಯ ಮಾಪನದಲ್ಲಿ 3.44 ಅಂಕವನ್ನು ಪಡೆದಿದೆ. ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ನೀವು ಪುದುಚರಿ ಗೆ ಲಾಂಗ್ ಡ್ರೈವ್ ಹೋಗಿ ನಿಮ್ಮ ಚಿಂತೆಯನ್ನು ಕಳೆದುಕೊಂಡು ಮತ್ತೊಮ್ಮೆ ನಿಮ್ಮ ಜೀವನದಲ್ಲಿ ಉತ್ಸಾಹವನ್ನು ತಂದುಕೊಳ್ಳಬಹುದು. ಇಲ್ಲಿನ ಬೀಚ್ ಪ್ರದೇಶಗಳು ನಿಮ್ಮನ್ನು ಖಂಡಿತವಾಗಿಯೂ ಆಕರ್ಷಿಸುತ್ತದೆ ಹಾಗೂ ನಿಮ್ಮ ಮನದಲ್ಲಿ ಉಲ್ಲಾಸವನ್ನು ಉಂಟುಮಾಡುತ್ತದೆ.

ಸಿಕ್ಕಿಂ ಇದರ ನೆಮ್ಮದಿಯ ಮಾಪನ 3.43 ಅಂಕಗಳು. ಇದು ಟಿಬೆಟ್ ಹಾಗು ಚೀನಾಕ್ಕೆ ಹಾಕಿಕೊಂಡಿರುವಂತೆ ಹೊಂದಿರುವ ಭಾರತದ ಒಂದು ರಾಜ್ಯ. ಅತ್ಯಂತ ಶಾಂತ ಹಾಗೂ ಸ್ವಾಭಾವಿಕ ಪರಿಸರವನ್ನು ಹೊಂದಿರುವ ಈ ರಾಜ್ಯ ಖಂಡಿತವಾಗಿಯೂ ನೀವು ಭೇಟಿ ಕೊಡಲೇಬೇಕು. ಇಲ್ಲಿನ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳು ಖಂಡಿತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕಾಡು ಹಾಗೂ ಬೆಟ್ಟಗುಡ್ಡಗಳನ್ನು ಹೊಂದಿರುವ ಈ ಪ್ರಕೃತಿಯ ಮಡಿಲಿನಲ್ಲಿ ಎಲ್ಲಾ ಪ್ರವಾಸಿಗರಿಗೆ ಮನಸ್ಸಿನಲ್ಲಿ ಹರ್ಷವನ್ನುಂಟು ಮಾಡುವುದು ಖಂಡಿತ.

ಗುಜರಾತ್ ಕರಾವಳಿ ಪ್ರದೇಶವನ್ನು ತಾಗಿಕೊಂಡೇ ಇರುವ ಗುಜರಾತ್ ರಾಜ್ಯ ನೆಮ್ಮದಿಯ ಮಾಪನದಲ್ಲಿ 3.42 ಅಂಕಗಳನ್ನು ಹೊಂದಿದೆ. ಇಲ್ಲಿನ ಊಟದ ಶೈಲಿ ಹಾಗೂ ಇಲ್ಲಿನ ಬಟ್ಟೆ ಹಾಗೂ ಇತರ ವಸ್ತುಗಳು ಖಂಡಿತ ಪ್ರವಾಸಿಗರ ಫೇವರೇಟ್ ತಾಣವಾಗಿ ಮಾಡಲ್ಪಟ್ಟಿದೆ. ಇಂದಿನ ವ್ಯಾಪಾರ ವಹಿವಾಟುಗಳು ಕೂಡ ಭಾರತದ ಇತರ ರಾಜ್ಯಗಳನ್ನು ಸ್ಪೂರ್ತಿಯಿಂದ ಕಾಣುವಂತೆ ಮಾಡುತ್ತದೆ. ವೆಕೇಶನ್ ಗಾಗಿ ನೀವು ಇಲ್ಲಿ ಹೋದರೆ ಖಂಡಿತ ನಿಮಗೆ ಮನಸ್ಸಿಗೆ ಮುದ ಸಿಗುವುದು ಖಂಡಿತ.

ಅರುಣಾಚಲ ಪ್ರದೇಶ ಅರುಣಾಚಲ ಪ್ರದೇಶ ನೆಮ್ಮದಿಯ ಮಾಪನದಲ್ಲಿ 3.41 ಅಂಕಗಳನ್ನು ಹೊಂದಿದೆ. ಪೂರ್ಣ ಭಾಗವಾಗಿ ಕಾಡು ಹಾಗೂ ಹೆಸರಿನಿಂದ ಆವೃತವಾಗಿರುವ ಈ ಪ್ರದೇಶದ ಎಲ್ಲರ ಫೇವರೆಟ್ ಪ್ರವಾಸಿತಾಣವಾಗಿದೆ. ತನ್ನ ಮಳೆಕಾಡು ಪ್ರದೇಶ ವನ್ಯಜೀವಿ ವೈಶಿಷ್ಟತೆ ಹಾಗೂ ಇತರ ನೈಸರ್ಗಿಕ ವಿಶೇಷಗಳಿಂದ ಆಗಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಅರುಣಾಚಲ ಪ್ರದೇಶದ ರಾಜ್ಯ ನಿಮ್ಮ ಚಿಂತೆಯನ್ನು ದೂರ ಮಾಡಿ ಸ್ವಾಭಾವಿಕವಾಗಿ ನೆಮ್ಮದಿಯನ್ನು ಪಡೆಯಲು ಉತ್ತಮ ಸ್ಥಳವೆಂದೇ ನಾವು ಹೇಳಬಹುದು.

ನೋಡಿದ್ರಲ್ಲ ಸ್ನೇಹಿತರೇ ಇಲ್ಲಿರುವ ವಿಭಿನ್ನ ವಿಶೇಷವಾದ ವಿಶೇಷತೆಗಳು ನಿಮ್ಮನ್ನು ಖಂಡಿತವಾಗಿಯೂ ಕಾಂಕ್ರೀಟ್ ನಾಡಿನಿಂದ ದೂರ ಆಗಿ ನೈಸರ್ಗಿಕ ಹಾಗೂ ಸ್ವಾಭಾವಿಕ ನೆಮ್ಮದಿಯನ್ನು ನಿಮ್ಮ ಜೀವನದಲ್ಲಿ ಹಾಗೂ ಮನಸ್ಸಿನಲ್ಲಿ ಉಂಟು ಮಾಡುವುದು ಖಂಡಿತ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಹಾಗೂ ನಿಮ್ಮ ನೆಚ್ಚಿನ ಫೇವರಿಟ್ ರಾಜ್ಯ ಹಾಗೂ ಪ್ರದೇಶ ಯಾವುದು ಎಂಬುದನ್ನು ಖಂಡಿತವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ.