ಕೋಟಿ ಕೋಟಿ ಆಸ್ತಿ ಇದ್ದರೂ ರೋಡ್ ರೋಮಿಯೋಗೆ ಮನಸ್ಸು ನೀಡಿದ ಹುಡುಗಿ, ನಂತರ ನಡೆದದ್ದು ಮಾತ್ರ ಊಹಿಸಲಾಗದ್ದು.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅದರಲ್ಲೂ ಕೂಡ ಇತ್ತೀಚಿನ ಹುಡುಗಿಯರು ಸುಸಂಸ್ಕೃತ ಹುಡುಗರನ್ನು ಆಯ್ಕೆ ಮಾಡುತ್ತಿಲ್ಲ ಬದಲಾಗಿ ಯಾವುದೇ ಜವಾಬ್ದಾರಿ ಇಲ್ಲದೆ ರೋಡ್ ರೋಮಿಯೋಗಳಂತೆ ತಿರುಗುತ್ತಿರುವ ಹುಡುಗರನ್ನು ಆಯ್ಕೆ ಮಾಡುತ್ತಾರೆ. ಆದರೆ ಇದಾದ ನಂತರ ಅವರು ಎದುರಿಸುವ ಪರಿಣಾಮ ನಿಜಕ್ಕೂ ಕೂಡ ಶೋಚನೀಯ ವಾಗಿರುತ್ತದೆ. ಈ ವಿಚಾರಕ್ಕೆ ಉದಾಹರಣೆಯೆಂಬಂತೆ ನಡೆದ ಘಟನೆಯೊಂದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ಸ್ನೇಹಿತರೇ. ತಪ್ಪದೆ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಒಡಿಶಾದ ಭುವನೇಶ್ವರದಲ್ಲಿ. ರಾಕೇಶ್ ಎಂಬ ಬೇಜಾವಾಬ್ದಾರಿ ರೋಡ್ ರೋಮಿಯೋ ತರದ ಹುಡುಗ ಒಬ್ಬ ಇರುತ್ತಾನೆ. ಈತನಿಗೆ ಯಾವುದೇ ಕೆಲಸ ಕಾರ್ಯಗಳು ಇರುವುದಿಲ್ಲ ಕೇವಲ ಉಂಡಾಡಿಗುಂಡ ನಂತೆ ತಿರುಗಾಡಿಕೊಂಡು ಶೋಕಿ ಮಾಡಿಕೊಂಡಿರುತ್ತಾನೆ. ಇನ್ನು ಈತ ಚಾರ ಎಂಬ ಹುಡುಗಿಯನ್ನು ನೋಡುತ್ತಾನೆ. ಹಾಗೆ ಕಾಲೇಜಿನಲ್ಲಿ ಓದುತ್ತಿರುವ ಹುಡುಗಿ ಆಗಿರುತ್ತಾಳೆ. ನಿಮ್ಮ ಕಾಲೇಜಿನಲ್ಲಿ ಕೂಡ ಆಕೆ ಸಾಕಷ್ಟು ಓದುವುದರಲ್ಲಿ ಮುಂದಿರುವ ಹುಡುಗಿಯಾಗಿದ್ದಳು.

ಪರೀಕ್ಷೆಯಲ್ಲಿ ಕೂಡ ಎಲ್ಲರಿಗಿಂತ ಹೆಚ್ಚಿನ ಅಂಕವನ್ನು ಪಡೆಯುತ್ತಿದ್ದಳು. ರಾಕೇಶ್ ಈಕೆಯನ್ನು ನೋಡಿ ಮರುಳಾಗಿ ಈಕೆಯ ಹಿಂದೆ ಸುತ್ತಾಡಲು ಪ್ರಾರಂಭಿಸುತ್ತಾನೆ. ಇನ್ನು ರಾಕೇಶ್ ಚಾರಳ ಹಿಂದೆ ಓಡಾಡುತ್ತಿರುವುದು ಆಕೆಯ ಬುದ್ಧಿವಂತಿಕೆ ವಿದ್ಯೆ ಹಾಗೂ ಗುಣಗಳನ್ನು ನೋಡಿ ಅಲ್ಲ ಬದಲಾಗಿ ಆಕೆಯ ಬಳಿ ಸಾಕಷ್ಟು ಹಣವಿತ್ತು ಹಾಗೂ ಶ್ರೀಮಂತ ಕುಟುಂಬದ ಮೂಲದವಳಾಗಿದ್ದಳು. ಅವಳನ್ನು ಪಟಾಯಿಸಿ ದರೆ ಆಕೆಯ ದುಡ್ಡಿನಿಂದ ತಾನು ಮೋಜು-ಮಸ್ತಿ ಮಾಡಿಕೊಂಡು ಇರಬಹುದು ಎಂಬುದು ರಾಕೇಶನ ಲೆಕ್ಕಾಚಾರವಾಗಿತ್ತು. ಇನ್ನು ನೋಡಲು ಸಾಧಾರಣವಾಗಿ ಇದ್ದರೂ ಕೂಡ ರಾಕೇಶನ ಬುಟ್ಟಿಗೆ ಬೀಳುತ್ತಾಳೆ ಚಾರ. ಮೊದಮೊದಲಿಗೆ ರಾಕೇಶ್ ಚಾರ ಗೆ ವಾಟ್ಸಪ್ ನಲ್ಲಿ ಹಾಯ್ ಬಾಯ್ ಎನ್ನುವಷ್ಟರಮಟ್ಟಿಗೆ ಮೆಸೇಜ್ ಮಾಡುತ್ತಿದ್ದ.

ನಂತರ ಕೂಡಲೇ ಇನ್ನಷ್ಟು ಕ್ಲೋಸ್ ಆಗಿ ಮೆಸೇಜ್ ಮಾಡಲು ಪ್ರಾರಂಭಿಸಿ ಬರಬರುತ್ತಾ ಆಕೆಯೊಂದಿಗೆ ಎಲ್ಲವನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ನಂತರ ಒಮ್ಮೆಲೆ ರಾಕೇಶ್ ಚಾರಾ ಬಳಿ ನನಗೆ ಗಾಡಿ ತೆಗೆದುಕೊಳ್ಳಲು ದುಡ್ಡಿಲ್ಲ ಎಂದು ಕೇಳುತ್ತಾನೆ. ನಂತರ ಚಾರ ಆತನಿಗೆ 30000 ನೀಡುತ್ತಾಳಗ. ಆದರೆ ರಾಕೇಶ್ ಅದರಿಂದ ಬೈಕನ್ನು ತೆಗೆದುಕೊಳ್ಳದೆ ಬರಿ ಆತನ ಮೋಜು ಮಸ್ತಿಗಾಗಿ ಆ ಹಣವನ್ನು ಖರ್ಚು ಮಾಡುತ್ತಾನೆ. ಇದು ಚಾರಾಗೆ ತಿಳಿಯುತ್ತದೆ ಹಾಗೂ ರಾಕೇಶ್ ಕುರಿತಂತೆ ಇದ್ದ ನಂಬಿಕೆ ಕೂಡ ಕಳೆದು ಹೋಗುತ್ತದೆ. ಇನ್ನು ಇಷ್ಟು ಮಾತ್ರವಲ್ಲದೆ ಆಗಾಗ ರಾಕೇಶ್ ಚಾರಾ ಬಳಿ ಸಾವಿರ ರೂಪಾಯಿಗಳನ್ನು ಕೇಳುತ್ತಲೇ ಇರುತ್ತಿದ್ದಳು ಕೊಡುತ್ತಲೇ ಇದ್ದಳು.

ಆದರೆ ಒಮ್ಮೆ ಚಾರಾಗೆ ಈತನ ಜೊತೆಗೆ ಇರುವುದು ಸರಿಯಲ್ಲ ಎಂದು ತಿಳಿದು ತಾನು ಕೊಟ್ಟಿದ್ದ ಮೂವತ್ತು ಸಾವಿರ ರೂಪಾಯಿಯನ್ನು ವಾಪಸು ಕೊಡು ಎಂದು ಹೇಳಲು ಪ್ರಾರಂಭಿಸುತ್ತಾಳೆ. ಬಹಳಷ್ಟು ದಿನಗಳಿಂದ ಆಮೇಲೆ ಕೊಡುತ್ತೇನೆ ಎಂದು ತಳ್ಳಿಕೊಂಡು ಬರುತ್ತಿದ್ದ ರಾಕೇಶ್ ಈಗ ಸಿಕ್ಕಿಹಾಕಿಕೊಳ್ಳುತ್ತಾನೆ. ಇದೇ ವಿಚಾರವಾಗಿ ರಾಕೇಶ್ ಈಗ ಚಾರ ಳನ್ನು ಮುಗಿಸಬೇಕೆಂಬ ನಿರ್ಧಾರಕ್ಕೆ ಬರುತ್ತಾನೆ. ಹೌದು ಅಲ್ಲೇ ನಗರದಲ್ಲಿದ್ದ ಓಯೋ ರೂಮ್ ಗೆ ಚಾರಳನ್ನು ಬರಲು ಹೇಳಿ ನಿನ್ನ ದುಡ್ಡು ಅಲ್ಲೆ ನೀಡುತ್ತೇನೆ ಎಂದು ರಾಕೇಶ್ ಹೇಳುತ್ತಾನೆ.

ಅದಕ್ಕೆ ಒಪ್ಪಿ ಆತನ ಮಾತಿಗೆ ಮರುಳಾಗಿ ಚಾರ ರೂಮ್ ನಂಬರ್ 102 ಬರುತ್ತಾಳೆ. ಬಂದ ಕೂಡಲೇ ರಾಕೇಶ ಆಕೆಯನ್ನು ಮುಗಿಸುತ್ತಾನೆ. ನಂತರ ತನ್ನ ಸ್ನೇಹಿತನ ಸಹಾಯದೊಂದಿಗೆ ದ್ವಿಚಕ್ರ ವಾಹನದಲ್ಲಿ ಆಕೆಯ ಕಳೇಬರವನ್ನು ಯಾವುದೋ ಮೂಲೆಗೆ ಬಿಸಾಡುತ್ತಾನೆ. ಎಷ್ಟು ಹೊತ್ತಾದರೂ ಕೂಡ ಮಗಳು ಬಾರದೇ ಇದ್ದುದನ್ನು ನೋಡಿ ಆಕೆಯ ಪೋಷಕರು ಆಕೆಗೆ ಕರೆ ಮಾಡಲು ಪ್ರಯತ್ನಿಸುತ್ತಾರೆ ಆದರೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ ನಂತರ ಠಾಣೆಗೆ ಹೋಗಿ ದೂರನ್ನು ದಾಖಲಿಸುತ್ತಾರೆ. ತನಿಖೆ ಸಮಯದಲ್ಲಿ ಚಾರಳ ಫೋನ್ ಸಿಗುತ್ತದೆ ಹಾಗೂ ಅದರಲ್ಲಿ ಆಕೆ ಮಾತನಾಡಿದ್ದ ಹಾಗೂ ವಾಟ್ಸಪ್ ಚಾಟ್ ಎಲ್ಲವೂ ಕೂಡ ಸಿಕ್ಕಿ ತಲೆಮರೆಸಿಕೊಂಡಿದ್ದ ರಾಕೇಶನನ್ನು ಹಿಡಿದು ಜೀವಾವಧಿ ನೀಡುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ಇನ್ನಾದರೂ ಕೂಡ ಹುಡುಗಿಯರು ಗೊತ್ತುಗುರಿಯಿಲ್ಲದ ಹುಡುಗರನ್ನು ಪ್ರೀತಿಸುವುದನ್ನು ಬಿಡಬೇಕು.