ತಂದೆ ಇಲ್ಲ ಎಂದು ಕೂಲಿ ಮಾಡಿ ಮಗನನ್ನು ಬೆಳೆಸಿದ ತಾಯಿಗೆ ಮಗ ವಕೀಲನಾದ ಮೇಲೆ ಮಾಡಲು ಹೊರಟಿದ್ದು ಏನು ಗೊತ್ತೇ?? ಕೊನೆಗೆ ಪೊಲೀಸರು ಏನು ಮಾಡಿದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ವಿದ್ಯೆ ಓದಿದ್ರೆ ವಿನಯ ಬರುತ್ತೇ ಅನ್ನೋದು ಹಳೆಯಕಾಲದ ನಂಬಿಕೆ. ಈಗ ಹಾಗೆಲ್ಲ ಸ್ನೇಹಿತರೆ ವಿದ್ಯೆ ಓದಿದವರಿಗೆ ಅಹಂಕಾರ ಅಷ್ಟೇ ಬರೋದು ವಿದ್ಯೆಯಿಲ್ಲದ ರೈತರು ವಿನಯ ಹಾಗೂ ಹೃದಯ ವೈಶಾಲ್ಯತೆಯನ್ನು ಹೊಂದಿರುತ್ತಾರೆ ಎಂಬುದು ಹಲವಾರು ಬಾರಿ ಸಾಬೀತಾಗಿರುವ ಅಂಶವಾಗಿದೆ. ಹೌದು ಸ್ನೇಹಿತರೇ ನಗರದಲ್ಲಿರುವ ಜನರಿಗಿಂತ ಹಳ್ಳಿಯಲ್ಲಿರುವ ಮುಗ್ಧಜನರೇ ಎಷ್ಟೋ ಮೇಲು.

ಹೌದು ಸ್ನೇಹಿತರೇ ಈ ಘಟನೆ ನಡೆದಿರುವುದು ಅಥಣಿಯಲ್ಲಿ. ಶ್ರೀಧರ್ ಎನ್ನುವಾತ ನನ್ನು ಆತನ ತಾಯಿ ಚಿಕ್ಕಂದಿನಿಂದಲೂ ಕೊಡಗು ಒಬ್ಬರೇ ಸಾಕಿ ಸಲುಹಿ ಈತನನ್ನು ಒಬ್ಬ ಒಳ್ಳೆಯ ಕೆಲಸ ಸಿಗುವಂತೆ ಮಾಡಿ ಬೆಳೆಸಿದ್ದಳು. ತಂದೆ ಇಲ್ಲದಿದ್ದರೂ ಕೂಡ ತಂದೆ ಇಲ್ಲ ಎನ್ನುವ ಕೊರತೆ ಬಾರದಂತೆ ಶ್ರೀಧರನನ್ನು ಅವರ ತಾಯಿ ಸಾಕಿದ್ದರು. ಇನ್ನು ಶ್ರೀಧರ್ ಮಹಾರಾಷ್ಟ್ರದ ಪುಣೆಯಲ್ಲಿ ವಕೀಲ ಕೆಲಸ ಅಭ್ಯಾಸ ಮಾಡುತ್ತಿದ್ದ ಇದಕ್ಕಾಗಿಯೇ ತನ್ನ ತಾಯಿಯನ್ನು ಕೂಡ ತನ್ನ ಜೊತೆಯೇ ಪುಣೆಯಲ್ಲಿ ಇರಿಸಿಕೊಂಡಿದ್ದ. ಇತ್ತೀಚಿಗೆ ಇವರಿಬ್ಬರೂ ಕೂಡ ಅಥಣಿಯಲ್ಲಿ ಬಂದು ನೆಲೆಸಿದ್ದರು.

ವಯಸ್ಸಾಗುತ್ತಾ ಬಂದಂತೆ ಶ್ರೀಧರ್ ತಾಯಿಗೆ ಆರೋಗ್ಯ ಕೊಂಚಮಟ್ಟಿಗೆ ಹದಗೆಡುತ್ತಾ ಬಂದಿದೆ. ಹೀಗಾಗಿ ತಾಯಿಯ ಕುರಿತಂತೆ ಮಗ ಶ್ರೀಧರ್ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಇದನ್ನು ಕೇಳಿದರೆ ನೀವು ಕೂಡ ಇಂತಹ ಮಗ ಇರುತ್ತಾನಾ ಎಂದು ಕೊಳ್ಳುತ್ತೀರಿ. ಹೌದು ಸ್ನೇಹಿತರೆ ಶ್ರೀಧರ್ ಅವರು ತಮ್ಮ ತಾಯಿಯನ್ನು ಅಥಣಿ ಆಸ್ಪತ್ರೆಯಲ್ಲಿ ಗಂಟುಮೂಟೆ ಸಮೇತ ಅಲ್ಲಿಯೇ ಬಿಟ್ಟು ಬರಬೇಕು ಎಂಬ ಪ್ಲಾನನ್ನು ಮಾಡಿದ್ದರು. ಆದರೆ ಇವನ ವರ್ತನೆಯ ವಿಚಿತ್ರ ನಡವಳಿಕೆಯನ್ನು ಕಂಡಂತಹ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಸ್ಥಳಕ್ಕೆ ಧಾವಿಸುವಂತೆ ಮಾಡಿದ್ದಾರೆ‌. ಪೊಲೀಸರು ಬರುವ ಮೊದಲೇ ಶ್ರೀಧರನಿಗೆ ತಾಯಿಯನ್ನು ಬಿಟ್ಟುಹೋಗುವ ಕೆಲಸಮಾಡುತ್ತೀಯಾ ಎಂಬುದಾಗಿ ಸ್ಥಳೀಯರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಇದಾದ ನಂತರ ಪೊಲೀಸರು ಕೂಡ ಬುದ್ಧಿಹೇಳಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ತಾಯಿಯನ್ನು ಶ್ರೀಧರ ನೊಂದಿಗೆ ಕಳಿಸಿಕೊಟ್ಟಿದ್ದಾರೆ.