ಸ್ನಾನ ಮಾಡಲು ಬಾತ್ ರೂಮ್ ಗೆ ಹೋದ ವಿದ್ಯಾರ್ಥಿನಿ, 2 ಗಂಟೆ ಕಳೆದರು ಹೊರಗೆ ಬರಲೇ ಇಲ್ಲ, ಅಲ್ಲಿ ನಡೆದ್ದಡೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾವು ನಮ್ಮನ್ನ ಯಾವ ರೀತಿಯಲ್ಲಿ ಹುಡುಕಿಕೊಂಡು ಬರುತ್ತೆ ಅನ್ನೋದಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಎಷ್ಟೋ ಸಾರಿ ನಮ್ಮ ಬೇಜವಾಬ್ದಾರಿತನವೇ ನಮಗೆ ಆಪತ್ತನ್ನ ತಂದೊಡ್ಡಬಹುದು. ನಮ್ಮ ಸಣ್ಣ ತಪ್ಪುಗಳು ಒಂದು ಜೀವವನ್ನೇ ತೆಗೆದುಕೊಳ್ಳಬಹುದು. ಕಾಲ ಮೈ ಮೀರಿ ಹೋದ್ರೆ ನಾವು ಮಾಡಿದ ತಪ್ಪನ್ನು ಎಂದಿಗೂ ಸರಿ ಮಾಡಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಇಷ್ಟೇಲ್ಲಾ ಯಾಕೆ ಹೇಳ್ತಾ ಇದ್ದೇವೆ ಅಂದ್ರೆ ಕೆಲವೊಮ್ಮೆ ನಾವು ಸ್ವಲ್ಪ ಯಾಮಾರಿದ್ರೂ ಕೂಡ ನಮ್ಮ ಸಾವನ್ನು ನಾವೇ ತಂದುಕೊಳ್ಳುತ್ತೇವೆ.

ಸ್ನೇಹಿತರೇ, ಇದು ಸಂಪದಾ ಎನ್ನುವ ಎಂಬಿಬಿಎಸ್ ವಿದ್ಯಾರ್ಥಿನಿಯ ಪ್ರಾಣ ಹೋದ ಕಥೆ. ಮಹಾಲಕ್ಷ್ಮೆ ಲೇಔಟ್ ನಲ್ಲಿ ಒಂದು ಅಪಾರ್ಟ್ಮೆಂಟ್ ನಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದ ಸಂಪದಾ ಒಂದು ದಿನ ಸ್ನಾನಕ್ಕೆಂದು ಬಾತ್ ರೂಮ್ ಗೆ ಹೋಗುತ್ತಾಳೆ. ಆದರೆ ಸುಮಾರು 2 ಗಂಟೆಯಾದ್ರೂ ಕೂಡ ಹೊರಗೆ ಬಾರದ್ದನ್ನು ನೋಡಿ ಪೋಷಕರು ಗಾಬರಿಗೊಳ್ಳುತ್ತಾರೆ. ನಂತರ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ರೆ ಈ ಹುಡುಗಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿರುತ್ತಾಳೆ. ನಂತರ ಆಕೆಯನ್ನು ಆಸ್ಪತ್ರೆ ಕರೆದುಕೊಂಡು ಹೋದರೂ ಕೂಡ ಯಾವುದೇ ಪ್ರಯೋಜನವಾಗುವುದಿಲ್ಲ.

ಮರಣೋತ್ತರ ಪ್ರರೀಕ್ಷೆಯಲ್ಲಿ ಆಕೆ ವಿಷಾನಿಲವನ್ನು ಸೇವಿಸಿ ಉಸಿರು ನಿಲ್ಲಿಸಿರುವುದಾಗಿ ಗೊತ್ತಾಗುತ್ತೆ ಈ ಅನಿಲ ಮತ್ಯಾವುದೂ ಅಲ್ಲ, ಬಾತ್ ರೂಮ್ ನಲ್ಲಿ ಇದ್ದ ಗ್ಯಾಸ್ ಗೀಸರ್ ನಿಂದ ಹೊರಹೊಮ್ಮಿದ್ದು. ಹೌದು ಸ್ನೇಹಿತರೆ, ನೀರು ಹಾಗೂ ಗ್ಯಾಸ್ ಸೇರಿ ಕಾರ್ಬೊಮೊನಾಕ್ಸೈಡ್ ಎಂಬ ವಿಷಾನಿಲ ಉತ್ಪತ್ತಿಯಾಗತ್ತೆ. ಇದರಿಂದ ಪ್ರಾಣ ಹೋಗೋ ಸಾಧ್ಯತೆಗಳು ಹೆಚ್ಚು. ಸಂಪದಾಳ ವಿಷಯದಲ್ಲಿ ನಡೆದದ್ದೂ ಕೂಡ ಇದೆ. ಹಾಗಾಗಿ ಸ್ನೇಹಿತರೆ ಗ್ಯಾಸ್ ಗೀಜರ್ ಅಥವಾ ಎಲೆಕ್ಟ್ರಿಕ್ ಗೀಜರ್ ಗಳನ್ನು ಬಳಾಸುವಾಗ ಎಚ್ಚರವಿರಲಿ, ಸಾಧ್ಯವಾದರೆ ಬಾತ್ ರೂಮ್ ನ ಹೊರಭಾಗದಲ್ಲಿ ಇವುಗಳನ್ನು ಫೀಟ್ ಮಾಡಿ ಪೈಪ್ ಮೂಲಕ ಬಿಸಿ ನೀರು ಬರುವ ಹಾಗೆ ವ್ಯವಸ್ಥೆ ಮಾಡಿಕೊಂಡರೆ ಇಂಥ ಘಟನೆಗಳನ್ನು ಸ್ಪಲ್ವ ಮಟ್ಟಿಗಾದರೂ ತಪ್ಪಿಸಬಹುದು.