ಅದೆಂಥ ದುರದೃಷ್ಟಕರ ಜೋಡಿ ನೋಡಿ; ಲಾಟರಿ ಗೆದ್ದಿದ್ದರೂ 31 ಕೋಟಿ ಜೊತೆಗೆ ಇವರು ಕಳೆದುಕೊಂಡದ್ದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅದೃಷ್ಟ ಖುಲಾಯಿಸೋಸು ಅಂತಾರಲ್ಲ ಸ್ನೇಹಿತರೆ ಅದು ಕೆಲವರ ಜೀವನದಲ್ಲಿ ನಡೇದೇ ಇರುತ್ತೆ. ಕೆಲವು ಅತ್ಯಂತ ಬಡವರೂ ಒಮ್ಮೆಂದೊಮ್ಮೆಲೆ ಶ್ರೀಮಂತರಾಗಿ ಬಿಡುತ್ತಾರೆ. ಮದುವೆಯೇ ಆಗಲ್ಲ ಅಂತಿದ್ದವರು, ಯಾರಿಗೂ ಗೊತ್ತಾಗದ ರೀತಿಯಲ್ಲಿ ಮದುವೆಯಾಗಿ ಬಿಡುತ್ತಾರೆ. ಹೀಗೆ ಇನ್ನು ಏನೇನೂ ಅದೃಷ್ಟ ನಮ್ಮ ಬೆನ್ನುಹತ್ತಿದ್ರೆ ನಮಗೆ ಯಶಸ್ಸು ಪಕ್ಕಾ.ಆದರೆ ಇನ್ನೂ ಕೆಲವು ದುರದೃಷ್ಟಕರ ಸಂಗತಿಗಳಿಗೂ ನಮ್ಮ ಜೀವನ ಸಾಕ್ಷಿಯಾಗಬೇಕಾಗುತ್ತೆ. ಅತ್ಯಂತ ಪ್ರೀತಿಯಿಂದ ಇದ್ದ ಜೋಡಿ ಅನಿರೀಕ್ಷಿತವಾಗಿ ಬೇರೆಯಾಗುವುದಿರಬಹುದು. ಅಥವಾ ಒಬ್ಬ ಕರೋಡ್ ಪತಿ ಪಾಪರ್ ಎನಿಸಿಕೊಳ್ಳುವುದಿರಬಹುದು ಹೀಗೆ. ಇಂಥ ಒಂದು ಇಂಟರೆಸ್ಟಿಂಗ್ ವಿಷಯ ಹೊತ್ತು ಬಂದಿದ್ದೇವೆ ಮುಂದೆ ಓದಿ.

ಸ್ನೇಹಿತರೆ ಜೀವನದಲ್ಲಿ ಲಾಟರಿ ಹೊಡೆಯೋದು ಅನ್ನೋ ಮಾತನ್ನ ನೀವು ಕೇಳಿಯೇ ಇರ್ತಿರಾ. ಯಾರದ್ದಾದ್ರೂ ಜೀವನದಲ್ಲಿ ಅಕಸ್ಮಾತ್ ಆಗಿ ಏನಾದ್ರೂ ಸಿಕ್ಕಿದ್ರೆ ನಾವು ಈ ಮಾತನ್ನ ಬಳಸ್ತೇವೆ. ಆದರೆ ಈ ಲಾಟರಿ ಹೊಡೆಯೋದು ಎನ್ನುವುದಕ್ಕೆ ಅಕ್ಷರಶಃ ಅರ್ಥ ಕೂಡ ಇದೆ. ಲಾಟರಿ ಟಿಕೆಟ್ ಖರೀದಿಸಿ ಅದರಲ್ಲಿ ಹಣ ಅಥವಾ ಇತರ ವಸ್ತುಗಳು ಬರುವುದು. ಲಾಟರಿ ಈ ಮೊದಲು ತುಂಬಾನೇ ಜಾರಿಯಲ್ಲಿತ್ತು. ಲಾಟರಿ ತೆಗೆದುಕೊಂಡು ಅದೃಶ್ಟದ ಸಂಖ್ಯೆ ಪತ್ರಿಕೆಗಳಲ್ಲಿ ಕೂಡ ಭಿತ್ತರವಾಗ್ತಾ ಇತ್ತು. ಆದ್ರೆ ಇದೀಗ ಭಾರತದಲ್ಲಿ ಆಫಿಶಿಯಲ್ ಆಗಿ ಲಾಟರಿ ಮಾರುವಂತಿಲ್ಲ. ಆದರೆ ವಿದೇಶದ ಕತೆಯೇ ಬೇರೆ ಬಿಡಿ.

ಬ್ರಿಟನ್ ನ ಮಾರ್ಟಿನ್ ಹಾಗೂ ಕೆ ಟಾಟ್ ದಂಪತಿಗಳು ಲಾಟರಿ ಟಿಕೆಟ್ ಒಂದನ್ನು ಖರೀದಿಸುತ್ತಾರೆ. ಆರು ತಿಂಗಳ ನಂತರ ಅವರಿಗೆ ಲಾಟರಿಯಲ್ಲಿ ಬರೋಬ್ಬರು ೩೧ ಕೋಟಿ ರೂಪಾಯಿ ಹೊಡೆದದ್ದು ಗೊತ್ತಾಗುತ್ತದೆ. ನಂತರ ಈ ಹಣ ಪಡೆಯಲು ಲಾಟರಿ ಕಂಪನಿಯನ್ನು ಕೇಳಿದಾಗ ಹಣ ಕೊಡಲು ನಿರಾಕರಿಸುತ್ತಾರೆ. ಕಾರಣ ಅವರು ಯಾವುದೇ ಮಾಹಿತಿಯನ್ನು ಕೊಟ್ಟಿದ್ರೂ ಖರೀದಿಸಿದ ಲಾಟರಿ ಟಿಕೆಟ್ ಮಾತ್ರ ಕಳೆದುಕೊಂಡಿರುತ್ತಾರೆ. ಅದನ್ನ ಕೊಡದೇ ಇದ್ರೆ ಹಣ ಸಿಗುವುದಿಲ್ಲ. ಜೊತೆಗೆ ಲಾಟರಿ ಟಿಕೇಟ್ ಖರೀದಿಸಿದ ಒಂದು ತಿಂಗಳ ಒಳಗೆ ಮಾಹಿತಿ ನೀಡಬೇಕು. ಈಗ ಸಮಯ ಮೀರಿದ್ದರಿಂದ ಹಾಗೂ ಮಾಹಿತಿಯನ್ನ ಒದಗಿಸದೇ ಇದ್ದಿದ್ದರಿಂದ ಹಣ ಅವರ ಕೈಸೇರಲಿಲ್ಲ. ಇನ್ನು ಕೋರ್ಟ್ಗೆ ಹೋದ್ರು ಈ ದಂಪತಿಗಳ ಕೇಸ್ ನಿಲ್ಲಲಿಲ್ಲ. ನಂತರ ಇದೇ ಕಾರಣಕ್ಕೆ ಗಂಡ ಹೆಂಡತಿ ಜಗಳವಾಡಿ ವಿಚ್ಛೇಧನ ಕೂಡ ಪಡೆದುಕೊಂಡ್ರು. ನೋಡಿ, ಒಂದು ಲಾಟರಿ ಟಿಕೆಟ್ ಇಬ್ಬರ ಜೀವನದಲ್ಲಿ ಎಂತೆಲ್ಲ ಸಮಸ್ಯೆಯನ್ನು ತಂದೊಡ್ಡಿತ್ತು ಅಂತ. ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನುವಂತಾಗಿತ್ತು ಬ್ರಿಟನ್ ನ ಈ ಜೋಡಿ ಕಥೆ.