35 ವರ್ಷಗಳ ಹಿಂದೆ ತೆಗೆದುಕೊಂಡಿದ್ದ 200 ರೂಪಾಯಿ ಸಾಲ ತೀರಿಸಲು ಬಂದ, ಆದರೆ ಈತನನ್ನು ನೋಡಿ ಅಂಗಡಿಯವನೇ ದಂಗಾಗಿ ಹೋಗಿದ್ದ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಾವು ಜೀವನದಲ್ಲಿ ಅದೆಷ್ಟೋ ಬಾರಿ ಇತರರಿಂದ ಸಾಕಷ್ಟು ಸಹಾಯವನ್ನು ಪಡೆದಿರುತ್ತೇವೆ. ಹಾಗೆಯೇ ಇತರರಿಗೆ ಸಹಾಯವನ್ನೂ ಕೂಡ ಮಾಡಿರುತ್ತೇವೆ. ಆದರೆ ನಮ್ಮಲ್ಲಿ ಅದೆಷ್ಟು ಜನ ಪಡೆದ ಸಹಾಯಕ್ಕೆ ಪ್ರತಿಯಾಗಿ ಸಹಾಯವನ್ನು ಮಾಡುತ್ತಾರೆ? ಅಥವಾ ಪಡೆದ ಸಹಾಯವನ್ನು ಅಂದರೆ ಹಣ ರೂಪದ ಸಹಾಯವನ್ನು ಎಷ್ಟು ಜನ ಹಿಂತಿರುಗಿಸುತ್ತಾರೆ. ತಮ್ಮ ಕಷ್ಟ ಕಾಲದಲ್ಲಿ ಯಾರಾದರೂ ಧನ ಸಹಾಯ ಮಾಡಿದ್ದರೆ, ತಮ್ಮ ಕೈಲಾದಾಗ ಅದನ್ನು ಹಿಂತಿರುಗಿಸುವುದು ನಮ್ಮ ಉತ್ತಮ ವ್ಯಕ್ತಿತ್ವವನ್ನು ತೋರಿಸುತ್ತದೆ.

ಇಂಥ ಉತ್ತಮ ಮನಸ್ಸು ಹೊಂದಿರುವವರು ತುಂಬಾನೇ ಕಮ್ಮಿ. ಅಂಥ ಒಬ್ಬ ವ್ಯಕ್ತಿಯ ಬಗ್ಗೆ ನಾವಿಲ್ಲಿ ಹೇಳಲು ಹೊರಟಿದ್ದೇವೆ. ಏನಿದು ಇಂಟರೆಸ್ಟಿಂಗ್ ಸ್ಟೋರಿ .. ಮುಂದೆ ಓದಿ.. ಸ್ನೇಹಿತರೆ, ಇದು ಕೀನ್ಯಾದ ಎಪಿ ಯಾಗಿರುವ ರೀಚರ್ಡ್ ಟೊಂಗಿಯವರ ಕಥೆ. ಕೀನ್ಯಾದ ಸಭಾದ್ಯಕ್ಷರಾದ ರಿಚರ್ಡ್ ಒಮ್ಮೆ ಭಾರತಕ್ಕೆ ಬರುತ್ತಾರೆ. ದೆಹಲಿಯಲ್ಲಿ ತಮ್ಮ ವೃತ್ತಿ ಕಾರಯ್ವನ್ನು ಮುಗಿಸಿಕೊಂಡು ನಂತರ ತಮ್ಮ ವಯಕ್ತಿಕ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಬರುತ್ತಾರೆ. ಇಲ್ಲಿಗೆ ಬಂದಿದ್ದು ಕೇವಲ 200 ರೂಪಾಯಿ ಸಾಲ ತೀರಿಸುವುದಕ್ಕೆ! ಅರೇ, ಕೀನ್ಯಾ ರಾಜಕಾರಣಿಯೊಬ್ಬ ಭಾರತದಲ್ಲಿ ಸಾಲ ಮಾಡಲು ಹೇಗೆ ಸಾಧ್ಯ ಅದೂ 200 ರೂಪಾಯಿ ಎಂಬ ಕುತೂಹಲವಿದ್ಯಾ? ಬನ್ನಿ ಈ ಒಂದು ರೋಚಕ ಕಥೆಯನ್ನ ನಿಮ್ಮ ಮುಂದೆ ಅನಾವರಣ ಮಾಡ್ತಿವಿ.

ಮಹಾರಾಷ್ಟ್ರದ ಔರಂಗಾಬಾದ್ ನ ವಾಂಖೆಡೆ ಪ್ರದೇಶದಲ್ಲಿ ಗವಾಲಿ ಎಂಬ ವ್ಯಕ್ತಿಯನ್ನು ಅರಸಿ ಬಂದಿದ್ದರು ರಿಚರ್ಡ್. 200 ರೂಪಾಯಿ ಸಾಲವನ್ನು ಈ ವ್ಯಕ್ತಿಗೆ ಮರು ಪಾವತಿ ಮಾಡಬೇಕಿದ್ದಿದ್ದು ರಿಚರ್ಡ್ ಅವರಿಗೆ. ಹಾಗಾದರೆ ಸಾಲ ಮರುಪಾವತಿ ಮಾಡಿದ್ರಾ? ಗವಾಲಿ ಸಿಕ್ಕಿದ್ರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಾಂದ್ರೆ ನಾವು 36 ವರ್ಷ ಹಿಂದೆ ಹೋಗಬೇಕು. ಹೌದು 1985 ನೇ ಇಸವಿ. ಆ ಸಮಯದಲ್ಲಿ ಔರಂಗಾಬಾದ್ ನ ಕಾಲೇಜೊಂದರಲ್ಲಿ ದೇಶ ವಿದೇಶದಿಂದ ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡುತ್ತಿದ್ದರು. ಅದರಲ್ಲಿ ಈ ರಿಚರ್ಡ್ ಕೂಡ ಒಬ್ಬರು. ರಿಚರ್ಡ್ ಕಾಲೇಜಿನ ಪಕ್ಕ ಕಾಲೋನಿಯಲ್ಲಿಯೇ ವಾಸವಾಗಿದ್ರು. ರಿಚರ್ಡ್ ಓದಿಗೆ ಅವರ ಪೋಷಕರು ಹಣವನ್ನು ಕಳುಹಿಸ್ತಾ ಇದ್ರು.

ಆದ್ರೆ ಕಿನ್ಯಾ ಬಹಳ ದೂರ ಇರುವ ಕಾರಣ, ಸರಿಯಾದ ಸಮಯಕ್ಕೆ ಹಣ ಬಂದು ಸೇರ್ತಾ ಇರಲಿಲ್ಲ. ಆಗೆಲ್ಲ ರಿಚರ್ಡ್ ಅವರ ಸಹಾಯಕ್ಕೆ ನಿಂತಿದ್ದು ಮತ್ಯಾರು ಅಲ್ಲ ರೀಚರ್ಡ್ ಈಗ ಬಂದು ಹುಡುಕುತ್ತಿದ್ದ ಗವಾಲಿ. ಇವರ ಪೂರ್ತಿ ಹೆಸರು ಕಾಶಿನಾಥ್ ಮಾರ್ತಾಂಡ ಗವಾಲಿ. ಅಲ್ಲಿಯೇ ಪುಟ್ಟ ಕಿರಾಣಿ ಅಂಗಡಿಯನ್ನು ಇಟ್ಟುಕೊಂಡಿದ್ದ ಗವಾಲಿ, ರಿಚರ್ಡ್ ಅವರಿಗೆ ನಿತ್ಯದ ಸಾಮಾನುಗಳನ್ನೇಲ್ಲಾ ನೀಡುತ್ತಾ ಇದ್ರು. ರಿಚರ್ಡ್ ಹಾಗೂ ಗವಾಲಿ ನಡುವೆ ಉತ್ತಮ ಸ್ನೇಹವೇರ್ಪಟ್ಟಿತ್ತು. ಹೀಗೆ ನಾಲ್ಕಾರು ವರ್ಷಗಳು ಕಳೆದ್ವು. ನಂತರ ವಿದ್ಯಾಭ್ಯಾಸ ಮುಗಿಸಿ ರಿಚರ್ಡ್ ಕೀನ್ಯಾಕ್ಕೆ ವಾಪಾಸ್ ಆಗುವ ದಿನ ಬಂದೇ ಬಿಡ್ತು.

ರಿಚರ್ಡ್ ಗವಾಲಿ ಬಳಿ ತನ್ನ ಬಾಕಿ ಮೊತ್ತದ ಬಗ್ಗೆ ವಿಚಾರಿಸಿದಾಗ 200 ರೂಪಾಯಿ ಬಾಕಿ ಕೊಡಬೇಕಿತ್ತು. ಆದರೆ ಆ ಸಮಯದಲ್ಲಿ ರಿಚರ್ಶ್ ಬಳಿ ಇದ್ದಿದ್ದು ಕೇವಲ ಕೀನ್ಯಾಕ್ಕೆ ಹೋಗುವ ಮೊತ್ತವಷ್ಟೇ. ಹಾಗಾಗಿ ತಾನು ಕೀನ್ಯಾದಿಂದ ವಾಪಸ್ ಬಂದು ಸಾಲ ತೀರಿಸುವ ಬಗ್ಗೆ ಯೋಚಿಸಿದ್ರು. ಆದರೆ ಕಾಲ ಸರಿದ ಹಾಗೆ ಎಲ್ಲವೂ ಬದಲಾಗಿ ಹೋಯ್ತು. ಹೌದು ರಿಚರ್ಡ್ ಗೆ ಕೀನ್ಯಾದಲ್ಲಿ ಸರ್ಕಾರಿ ಹುದ್ದೆ ಸಿಕ್ತು. ಹಾಗೆಯೇ ರಾಜಕೀಯದಲ್ಲಿ ಕೂಡ ಸಾಕಷ್ಟು ಸಕ್ರಿಯರಾದ ರಿಚರ್ಡ್ ಉತ್ತಮ ಸ್ಥಿತಿಗೆ ತಲುಪಿದ್ರು.

ಆದರೆ 35ವರ್ಷ ಕಳೆದ್ರೂ ಭಾರತಕ್ಕೆ ಬರಲು ಸಾಧ್ಯವೇ ಆಗಲಿಲ್ಲ. ಗವಾಲಿಯವರ ವಿಳಾಸವೂ ಇರದ ಕಾರಣ ಹಣವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಅದೇ ಕೊರಗಿನಲ್ಲಿ ಇರುತ್ತಾರೆ ರಿಚರ್ಡ್. ಆದರೆ ಅದೃಷ್ಟವಶಾತ್ ತನನ್ ದೇಶದ ಕೆಲಸದ ಮೇರೆಗೆ ಭಾರತಕ್ಕೆ ಬರುವ ಕಾಲಾವಕಾಶ ಒದಗಿರುತ್ತದೆ ರಿಚರ್ಡ್ ಗೆ. ಹಾಗೆ ಬಂದ ರಿಚರ್ಡ್ ಮಾಡಿದ್ದೇನು ಗೊತ್ತಾ? ರಿಚರ್ಡ್ ತನ್ನ ವೃತ್ತಿಗೆ ಸಂಬಂಧಿಸಿದ ಕೆಲಸವನ್ನು ಹೆದಲಿಯಲ್ಲಿ ಮುಗಿಸಿ, ಔರಂಗಾಬಾದ್ ಗೆ ಬರುತ್ತಾರೆ. ಗವಾಲಿ ಇದ್ದ ಬೀದಿಯಲ್ಲಿ ಅವರ ಕಿರಾಣಿ ಅಂಗಡಿಯನ್ನು ಹುಡುಕುತ್ತಾರೆ. ಆದರೆ ಸರಿಯಾದ ವಿಳಾಸ ಇರದ ಕಾರಣ ಅವರನ್ನು ಹುಡುಕುವುದು ಕಷ್ಟವಾಗುತ್ತದೆ.

ಆದರೆ ಒಬ್ಬ ವ್ಯಕ್ತಿಗೆ ರಿಚರ್ಡ್ ಹೇಳಿದ್ದು ಅರ್ಥವಾಗಿ ಗವಾಲಿಯ ವಿಳಾಸವನ್ನು ನೀಡಿತ್ತಾನೆ. ಗವಾಲಿ ಕೂಡ ಈಗ ಮುಂಚಿನಂತೆ ಇರುವುದಿಲ್ಲ. ಅವರ ಕಿರಾಣಿ ಅಂಅಗಡಿ ಈಗ ಪ್ರೊವಿಜನ್ ಸ್ಟೋರ್ ಆಗಿ ಬದಲಾಗಿದೆ. ನಾಲ್ಕು ಅಂತಸ್ತಿನ ಮನೆಯನ್ನು ಕಟ್ಟಿಸಿ ಮನೆಯವರೊಂದಿಗೆ ಕಾಲ ಕಳೆಯುತ್ತಿದ್ದಾರೆ ಗವಾಲಿ. ರಿಚರ್ಡ್ ಮೊದಲು ಗವಾಲಿ ಮನೆಗೆ ಹೋಗಿ ಅವರನ್ನು ಆಲಂಗಿಸುತ್ತಾರೆ. ಗವಾಲಿಗೆ ಮೊದಲು ಗುರುತು ಸಿಗದಿದ್ದರೂ ಆನಂತರ ಈತ ರಿಚರ್ಡ್ ಎಂದು ಗೊತ್ತಾಗಿ ಭಾವುಕರಾಗುತ್ತಾರೆ.

ಅದರಲ್ಲೂ ತನಗೆ ಬಾಕಿಕೊಡಬೇಕಿದ್ದ 200 ರೂಪಾಯಿ ಹಿಂತಿರುಗಿಸಲು ಬಂದಿದ್ದು ಕೇಳಿ ಶಾಕ್ ಆಗುತ್ತಾರೆ. ಜೊತೆಗೆ ಹಣ ಕೊಡುವುದು ಬೇಡ ಎಂದು ನಿರಾಕರಿಸುತ್ತಾರೆ. ಆದರೆ ರಿಚರ್ಡ್ ಇಷ್ಟು ದೂರ ಬಂದಿದ್ದೇ ಋಣ ಮುಕ್ತರಾಗಲು. ಹಾಗಾಗಿ ಹಣವನ್ನು ಪಡೆಯಲೇ ಬೇಕೆಂದು ಒತ್ತಾಯ ಮಾಡುತ್ತಾರೆ. ಕೊನೆಗೂ ಗವಾಲಿ ಮಣಿದು ಹಣವನ್ನು ತೆಗೆದುಕೊಳ್ಳುತ್ತಾರೆ. ಹೆಂಡತಿ ಜೊತೆಗೆ ಗವಾಲಿ ಮನೆಯಲ್ಲಿ ಸಂತೋಷವಾಗಿ ಕಾಲ ಕಳೆದು ಹಿಂತಿರುಗುತ್ತಾರೆ ರಿಚರ್ಡ್. ಸ್ನೇಹಿತರೆ, ಇನ್ನೊಬ್ಬರಿಗೆ ಮೋಸ ಮಾಡುವವರೇ ಇರುವ ಈ ಪ್ರಪಂಚದಲ್ಲಿ ಒಬ್ಬರ ಸಾಲ ತೀರಿಸುವುದಕ್ಕಾಗಿ ದೂರದ ಕೀನ್ಯಾ ದೇಶದಿಂದ ಬಂದ ರೀಚರ್ಡ್ ನಂತವರು ಖಂಡಿತವಾಗಿಯೂ ಎಲ್ಲರಿಗೂ ಮಾದರಿ.