ಕೇವಲ ಹತ್ತು ರೂಪಾಯಿಗೆ ಹೆಂಡತಿಯನ್ನು ಬಾಡಿಗೆ ನೀಡುತ್ತಾರೆ, ಬೇರೆ ದೇಶ ಅಲ್ಲ ಸ್ವಾಮಿ, ಭಾರತದಲ್ಲೇ. ಯಾಕೆ ಈ ವಿಚಿತ್ರ ನಿರ್ಧಾರ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಹಾಗೂ ಇಡೀ ಪ್ರಪಂಚದಲ್ಲಿ ಹಲವಾರು ಚಿತ್ರ ವಿಚಿತ್ರ ಪದ್ಧತಿಗಳನ್ನು ನೀವು ಕೇಳಿರಬಹುದು ಆದರೆ ಇಂದು ನಾವು ಹೇಳಲು ಹೊರಟಿರುವ ಪದ್ಧತಿಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೆ ನೀವು ಮನೆ ಹಾಗೂ ಇತರ ವಸ್ತುಗಳನ್ನು ಬಾಡಿಗೆಗೆ ಕೊಡುವುದನ್ನು ಕೇಳಿರುತ್ತೀರಿ. ಆದರೆ ಇಂದು ನಾವು ಹೇಳಲು ಹೊರಟಿರುವುದು ಹೆಂಡತಿಯರನ್ನು ಬಾಡಿಗೆ ನೀಡುವ ವಿಚಿತ್ರ ಪದ್ಧತಿಯ ಕುರಿತಂತೆ.

ಇದು ನಡೆಯುತ್ತಿರುವುದು ಹಾಗೂ ನಡೆದಿರುವುದು ಬೇರೆ ಯಾವ ದೇಶಗಳಲ್ಲು ಅಲ್ಲ ಗೆಳೆಯರೇ ಬದಲಾಗಿ ನಮ್ಮ ದೇಶದಲ್ಲಿ. ಮಧ್ಯಪ್ರದೇಶದಲ್ಲಿ ನಡೆಯುವ ಈ ಪದ್ಧತಿಗೆ ವಿಚಿತ್ರವಾದ ಹೆಸರು ಕೂಡ ಇದೆ. ಈ ಪದ್ಧತಿಗೆ ದಾಧಿಚಾ ಪೃತ ಎಂಬ ಹೆಸರಿದೆ. ಮಧ್ಯಪ್ರದೇಶದ ಈ ಭಾಗಗಳಲ್ಲಿ ಹೆಣ್ಣು ಸಂತಾನವನ್ನು ಕ್ಷೀಣಿಸುವ ಕಾರ್ಯಗಳು ನಡೆದಿರುವುದರಿಂದ ಆಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಂಡುಬರುವುದಿಲ್ಲ. ಹೀಗಾಗಿಯೇ ಮದುವೆಯ ಸಾಧ್ಯತೆಗಳು ಕೂಡ ಕಡಿಮೆ ಇರುತ್ತದೆ. ಇದಕ್ಕಾಗಿಯೇ ಹತ್ತರಿಂದ ನೂರು ರೂಪಾಯಿ ಸ್ಟ್ಯಾಂಪ್ ಪೇಪರ್ನಲ್ಲಿ ಹೆಂಡತಿಯರನ್ನು ಬಾಡಿಗೆಯಾಗಿ ನೀಡುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ.

ಮಧ್ಯಪ್ರದೇಶದ ಶಿವಪುರ ಜಿಲ್ಲೆಯಲ್ಲಿ ಇಂದಿಗೂ ಕೂಡ ಇಂತಹ ಪದ್ಧತಿಗಳು ಜಾರಿಯಲ್ಲಿವೆ. 10 ರಿಂದ ಹಿಡಿದು ಐವತ್ತು ಸಾವಿರ ರೂಪಾಯಿವರೆಗೂ ಕೂಡ ಇಲ್ಲಿ ಹೆಂಡತಿಯರನ್ನು ಬಾಡಿಗೆಗಾಗಿ ಮಾರಲಾಗುತ್ತದೆ. ಒಪ್ಪಂದ ಮಾಡಿಕೊಂಡಿರುವ ಅವಧಿಯವರೆಗೂ ಕೂಡ ಆತ ಅವನ ಹೆಂಡತಿಯ ಮೇಲೆ ಹಕ್ಕನ್ನು ಸಾಧಿಸುವ ಹಾಗಿಲ್ಲ. ಒಪ್ಪಂದ ಮುಗಿದ ನಂತರ ಇನ್ನೊಬ್ಬರಿಗೆ ಅವನು ತನ್ನ ಹೆಂಡತಿಯನ್ನು ಬಾಡಿಗೆಗಾಗಿ ನೀಡಬಹುದಾಗಿದೆ. ಇನ್ನು ಈ ಪದ್ಧತಿಯಲ್ಲಿ ಹೆಣ್ಣುಮಕ್ಕಳನ್ನು ಬಾಡಿಗೆ ನೀಡಲು ಕೆಲವು ಮಧ್ಯವರ್ತಿಗಳು ಕೂಡ ಇರುತ್ತಾರೆ ಇಷ್ಟೊಂದು ದೊಡ್ಡ ಮಟ್ಟಿಗೆ ಈ ಪದ್ಧತಿ ಬೆಳೆದು ನಿಂತಿದೆ. ಈ ಪದ್ಧತಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.