ಸುನಾಮಿ ಭೂಕಂಪವನ್ನು ತಡೆದುಕೊಂಡು ಬೆಳೆದಿರುವ ಜಪಾನ್ ನಲ್ಲಿ ಹೊಸ ಸವಾಲು, ಆಲೂಗಡ್ಡೆಯೇ ಈಗ ಜಪಾನಿಗರಿಗೆ ದೊಡ್ಡ ಸವಾಲು. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜಪಾನ್ ದೇಶವೆಂದರೇ ಅದು ಸಾಹಸಿಗಳ ನಾಡು. ಏರಡನೇ ಜಾಗತಿಕ ಸಮರದಲ್ಲಿ ಹಿರೋಶಿಮಾ ಹಾಗೂ ನಾಗಾಸಾಕಿಯಲ್ಲಿ ನಡೆದ ದಾಳಿಯಿಂದಾಗಿ ಸಂಪೂರ್ಣ ದೇಶವೇ ಮುಳುಗಿ ಹೋಯಿತು ಎಂದಾಗ, ಪ್ರಪಂಚದ ಆರ್ಥಿಕತೆಗೆ ಕೊಡುಗೆ ನೀಡುವ ಮೂಲಕ ಜಪಾನೀಯರು ಎದ್ದು ನಿಂತದ್ದು ನಿಮ್ಮ ಕಣ್ಣ ಮುಂದೆಯೇ ಇದೆ.

ಪದೇ ಪದೇ ಭೂಕಂಪದಂತಹ ಪ್ರಾಕೃತಿಕ ವಿಕೋಪಕ್ಕೆ ಒಳಗಾದರೂ, ಆಟೋಮೊಬೈಲ್ಸ್ ನಿಂದ ಹಿಡಿದು ಎಲ್ಲಾ ತಂತ್ರಜ್ಞಾನಗಳಲ್ಲಿ ಮುಂದುವರೆದಿರುವ ದೇಶ ಜಪಾನ್ ನಲ್ಲಿ ಈಗ ಹೊಸ ಸಮಸ್ಯೆಯೊಂದು ಶುರುವಾಗಿದೆ.ಹೌದು ಕೇಳಲಿಕ್ಕೆ ಹಾಸ್ಯ ಅನಿಸಿದರೂ, ಜಪಾನನಲ್ಲಿ ಈಗ ಆಲೂಗಡ್ಡೆಯ ಸಮಸ್ಯೆ ತೀವ್ರವಾಗಿದೆಯಂತೆ.

ಅತ್ಯಂತ ಶ್ರೀಮಂತ ರಾಷ್ಟ್ರವಾದ ಜಪಾನ್ ನಲ್ಲಿ ಎಲ್ಲರೂ ಸಹ ಆಲೂಗಡ್ಡೆಯ ಖಾದ್ಯವನ್ನು ಪ್ರತಿದಿನ ತಿನ್ನುತ್ತಾರಂತೆ. ಹಾಗಾಗಿ ಇಲ್ಲಿ ಆಲೂಗಡ್ಡೆಗೆ ಹೆಚ್ಚು ಬೇಡಿಕೆ ಇದೆ. ಆದರೇ ಅಲ್ಲಿ ಈಗ ಆಲೂಗಡ್ಡೆಗೆ ಬಹಳ ಬೇಡಿಕೆಯಿದ್ದು, ಬೇಡಿಕೆ ಪ್ರಮಾಣದಲ್ಲಿ ಆಲೂಗಡ್ಡೆ ಪೂರೈಸಲು ಸರ್ಕಾರ ವಿಫಲವಾಗಿದೆ. ಅದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಆಲೂಗಡ್ಡೆಯ ಆಮದು ಕಡಿಮೆಯಾದ ಕಾರಣ, ಅಲ್ಲಿ ಈಗ ಆಲೂಗಡ್ಡೆಯ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಜನ ಇಷ್ಟಪಟ್ಟು ತಿನ್ನುವ ಫ್ರೆಂಚ್ ಫ್ರೈಸ್ ಹಾಗೂ ಫಿಂಗರ್ ಫ್ರೈಸ್ ಬಲು ದುಬಾರಿಯಾಗಿವೆ. ಚಿಪ್ಸ್ ಕಂಪನಿಯಾದ ಮೆಕ್ ಡೋನಾಲ್ಡ್ ಸಹ ಸಣ್ಣ ಚಿಪ್ಸ್ ಮಾತ್ರ ಮಾರುತ್ತಿದೆ. ಜನರ ಸಂಕಷ್ಟವನ್ನ ಅರಿತಿರುವ ಸರ್ಕಾರ, ಶೀಘ್ರದಲ್ಲಿಯೇ ವಿಮಾನದ ಮೂಲಕ ಒಂದು ಸಾವಿರ ಟನ್ ಆಲೂಗಡ್ಡೆಯನ್ನು ತರಲು ಕ್ರಮವಹಿಸಿದೆ. ಆಗಲಾದರೂ ಜಪಾನೀಯರ ಆಲೂಗಡ್ಡೆ ದಾಹ ಕೊನೆಯಾಗಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.