ಮದುವೆಯಾಗಿ 11 ವರ್ಷ ಸಂಸಾರ ಮಾಡಿಲ್ಲ, ಮೊದಲನೇ ರಾತ್ರಿ ಕೂಡ ನಡೆದಿಲ್ಲ. ಕೊನೆಗೆ ಏನಾಗಿದೆ ಗೊತ್ತೇ ಈ ಜೋಡಿಯ ಕಥೆ??

ನಮಸ್ಕಾರ ಸ್ನೇಹಿತರೇ ಹಿರಿಯರು ಹೇಳಿರುವಂತೆ ಗಾದೆ ಮಾತೊಂದಿದೆ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು. ಆದರೆ ಇಂದು ನಾವು ಹೇಳಲು ಹೊರಟಿರುವ ಗಂಡ-ಹೆಂಡಿರ ಜಗಳ ಎನ್ನುವುದು ವಿವಾಹ ವಿಷಯದಲ್ಲಿ ಅಂತ್ಯ ಗೊಂಡಿದೆ. ಈ ವಿಚಾರವನ್ನು ಹೇಳಿದರೆ ಖಂಡಿತವಾಗಿ ನೀವು ಕೂಡ ಹೊಟ್ಟೆ ಹುಣ್ಣಾಗುವಂತೆ ನಗುತ್ತಿರಿ. ಹೌದು ಗೆಳೆಯರೇ ಸಂತೋಷ ಸಿಂಗ್ ಎನ್ನುವಾತ ತನ್ನ ಹೆಂಡತಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದು ಅವರಿಬ್ಬರು 11 ವರ್ಷಗಳಿಂದ ಸಂಸಾರ ಮಾಡಿಲ್ಲ ಎನ್ನುವ ಕಾರಣಕ್ಕಾಗಿ.

ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಹೇಗೆ ಮುಹೂರ್ತ ವನ್ನು ನೋಡುತ್ತಾರೋ ಹಾಗೆ ಪ್ರಸ್ತಕ್ಕೂ ಕೂಡ ಮುಹೂರ್ತವನ್ನು ನೋಡುತ್ತಾರೆ. ಹನ್ನೊಂದು ವರ್ಷ ಕಳೆದರೂ ಕೂಡ ಹೆಂಡತಿಯ ಮನೆಯವರು ಹೆಂಡತಿಯನ್ನು ಸಂತೋಷ ಸಿಂಗ್ ಮನೆಗೆ ಕಳಿಸಿ ಕೊಡಲೇ ಇಲ್ಲ. ಇದರಿಂದಾಗಿ ಬೇಸತ್ತು ಸಂತೋಷ್ ಸಿಂಗ್ ಹೈಕೋರ್ಟ್ನಲ್ಲಿ ವಿವಾಹ ವಿಚ್ಛೇದನವನ್ನು ಕೋರಿ ಅರ್ಜಿಯನ್ನು ಹಾಕಿದ್ದಾರೆ. ಇಷ್ಟೊಂದು ವರ್ಷಗಳು ಜೊತೆಯಲ್ಲಿ ಇಲ್ಲ ಎಂಬುದಾಗಿ ತಿಳಿದ ನ್ಯಾಯಾಧೀಶರು ಕೂಡ ತಬ್ಬಿಬ್ಬಾಗಿದ್ದರು. ಹೀಗಾಗಿ ಕೂಡಲೇ ಇಬ್ಬರಿಗೂ ವಿಚ್ಛೇದನವನ್ನು ನೀಡಿದ್ದಾರೆ. ಹಾಗಿದ್ದರೆ ನಿಜವಾಗಿ ನಡೆದಿದ್ದೇನು ಎಂಬುದನ್ನು ನಿಮಗೆ ತಿಳಿಸುತ್ತೇವೆ ಬನ್ನಿ.

2010 ರಲ್ಲಿ ಸಂತೋಷ್ ಸಿಂಗ್ ಮದುವೆಯಾಗುತ್ತಾನೆ. ಮದುವೆಯಾದ ಮೊದಲ ವಾರ ಆತನ ಹೆಂಡತಿ ಆತನ ಮನೆಯಲ್ಲಿ ಇರುತ್ತಾಳೆ ಆದರೆ ಪ್ರಸ್ತಕ್ಕೆ ಸರಿಯಾದ ಮುಹೂರ್ತ ಇಲ್ಲ ಎಂದು ಆತನ ಜೊತೆ ಮಲಗುವುದಿಲ್ಲ. ಅದಾದ ನಂತರ ಆಕೆಯನ್ನು ಆಕೆಯ ಮನೆಯವರು ಒಟ್ಟಿಗೆ ಇರಲು ಪ್ರಶಸ್ತವಾದ ಸಮಯ ಇಲ್ಲ ಎಂದು ಹೇಳಿ ಕರೆದುಕೊಂಡು ಹೋಗುತ್ತಾರೆ. ಆಗಾಗ ಸಂತೋಷ ಸಿಂಗ್ ಆಕೆಯ ಮನೆಗೆ ಹೋಗಿ ಬರುತ್ತಿದ್ದ ಆದರೂ ಕೂಡ ಒಟ್ಟಿಗೆ ಸಂಸಾರ ಮಾಡುವ ಅವಕಾಶ ಈಗಲೂ ಕೂಡ ಇರಲಿಲ್ಲ. ಅತ್ತ ಪತ್ನಿಗೂ ಕೂಡ ಗಂಡನ ಮೇಲೆ ಇಂಟರೆಸ್ಟ್ ಹೋಗಿತ್ತು. ಇತ್ತ ಗಂಡನಿಗೂ ಕೂಡ ಹೆಂಡತಿಯ ಜೊತೆಗೆ ಸಂಸಾರ ಮಾಡಲು ಅವಕಾಶ ಸಿಗುತ್ತಿಲ್ಲ ಎಂಬುದಾಗಿ ಬೇಸರಮೂಡಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಕೌಟುಂಬಿಕ ನ್ಯಾಯಾಲಯ ಇದು ಚಿಕ್ಕ ಸಮಸ್ಯೆ ನೀವು ಪರಿಹರಿಸಿಕೊಳ್ಳಿ ಎಂದು ವಿವಾಹ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಹೈಕೋರ್ಟ್ಗೆ ಹೋದಾಗ ಇದು ಗಂಭೀರ ಸಮಸ್ಯೆ ಎಂದು ಪರಿಗಣಿಸಿ ನ್ಯಾಯಾಲಯ ಇಬ್ಬರಿಗೂ ಅದರಲ್ಲೂ ಮುಖ್ಯವಾಗಿ ಗಂಡನಿಗೆ ಹೆಂಡತಿಯಿಂದ ಮುಕ್ತಿಯನ್ನು ದೊರಕಿಸಿದ್ದಾರೆ.