ಅಸ್ತವ್ಯಸ್ತಗೊಂಡ ವಾರ್ಡ್​ರೋಬ್ ಸರಿಪಡಿಸಿ ಕೈತುಂಬಾ ಸಂಪಾದನೆ ಮಾಡುತ್ತಿರುವ 19 ವರ್ಷದ ಯುವತಿ, ತಿಂಗಳಿಗೆ ಗಳಿಸುವ ಹಣವೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಮನಸ್ಸಿದ್ದರೆ ಮಾರ್ಗ ಎನ್ನುವ ಮಾತನ್ನು ನೀವು ಕೇಳೇ ಇರುತ್ತೀರಾ? ನಿಮ್ಮ ಮನಸ್ಸಿಗೆ ಯಾವುದಾದರೂ ಕೆಲಸ ಮಾಡಬೇಕು ಎನ್ನಿಸಿದರೆ ಅದನ್ನು ಮಾಡಿಯೇ ಬಿಡಬೇಕು. ಆಗ ಮಾತ್ರ ಆ ಕೆಲಸದ ಆಳ ಅರ್ಥವಾಗುವುದು. ಹಾಗೆಯೇ ಯಾವ ಕೆಲಸದಲ್ಲೂ ಚಿಕ್ಕದು ದೊಡ್ದದೆಂಬುದಿಲ್ಲ ಇಷ್ಟ ಪಟ್ಟು ಮಾಡಿದರೆ ಎಲ್ಲಾ ಕೆಲಸವೂ ಆಸಕ್ತಿದಾಯಕವಾಗಿಯೇ ಇರುತ್ತೆ. ಇಲ್ಲೊಬ್ಬ ಹುಡುಗಿ ಬೇರೆಯವರ ಮನೆಯ ಬಟ್ಟೆಗಳನ್ನು ನೀಟಾಗಿ ಜೋಡಿಸಿ ಹಣ ಸಂಪಾದಿಸುತ್ತಾಳೆ ನಂಬುತ್ತೀರಾ?

ಇದೂ ಒಂದು ಉದ್ಯೋಗವಾಯಿತಾ ಎಂದು ನೀವು ಉದ್ಗಾರತೆಗೆಯಬಹುದು. ಆದರೆ ಹೌದು,, ಇದು ಕೈತುಂಬ ಸಂಬಳ ಬರುವ ಉದ್ಯೋಗವೇ. ಆದರೆ ಸದ್ಯ ನಾವು ಹೇಳುತ್ತಿರುವುದು ಬ್ರಿಟನ್ ನ 19 ವರ್ಷದ ಯುವತಿ ಯಲ್ಲಾ ಮೆಕ್ ಮಾಹನ್ ಬಗ್ಗೆ. ಬ್ರಿಟನ್ನ ಡೈಲಿ ಮೇಲ್ ಈ ಬಗ್ಗೆ ವರದಿ ಮಾಡಿದ್ದು ಇದರಲ್ಲಿ ಯಲ್ಲಾ ತಮ್ಮ ಈ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತೀದಿನ ಮೂರರಿಂದ ಒಂಬತ್ತು ಗಂಟೆಗಳ ಕಾಲ ಈ ಕೆಲಸವನ್ನು ಮಾಡುತ್ತಾರಂತೆ. ಇನ್ನು ಗಂಟೆಗೆ ಇಷ್ಟು ಅಂತ ಚಾರ್ಜ್ ಮಾಡುತ್ತಾರೆ. ಈಗ ಅವರು ಚಾರ್ಜ್ ಮಾಡುತ್ತಿರುವುದು, ಪ್ರತೀ ಗಂಟೆಗೆ ಸುಮಾರು 15ರಿಂದ 20 ಯೂರೋ ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹ 1,500 ರಿಂದ ₹ 2,000 ರೂಪಾಯಿಗಳು.

ಅಂದಹಾಗೆ ಯಲ್ಲಾಗೆ ಈ ಉದ್ಯೋಗ ಮಾಡುವುದಕ್ಕೆ ಯಾಕೆ ಆಸಕ್ತಿ ಬಂತು ಎಂದು ಕ್ಳಿದರೆ, ಆಕೆಗೆ ಆಕೆಯ ಸ್ನೇಹಿತರು ಮತ್ತು ಕುಟುಂಬದವರು ಇದಕ್ಕೆ ಕಾರಣವಂತೆ. ಹಾಗೆಯೇ ವಸ್ತುಗಳನ್ನು ಜೋಡಿಸಿ ಒಪ್ಪ ಮಾಡುವ ಆಸಕ್ತಿ ಇರುವ ಯಲ್ಲಾ ದಿನವಿಡೀ ಬೇಕಿದ್ದರೂ ಇದೇ ಕೆಲಸ ಮಾಡಬಲ್ಲವರು. ಈಗಾಗಲೇ 20 ನಿರಂತರ ಗ್ರಾಹಕರಿದ್ದು ಎರಡು ವಾರಕ್ಕೊಮ್ಮೆ ಅವರ ಮನೆಗೆಗಳಿಗೆ ಹೋಗಿ ಬಟ್ಟೆಗಳನ್ನು ಜೋಡಿಸಿಟ್ಟು ಬರುತ್ತಾರೆ.

ಇನ್ನು ವಾರ್ಡ್ ರೋಬ್ ಆಧಾರ ಮೇಲೆ ಎಷ್ಟು ಗಂಟೆ ಬೇಕು ಬಟ್ಟೆಗಳನ್ನು ಜೋಡಿಸಲು ಎಂಬುದು ನಿರ್ಧಾರವಾಗುತ್ತೆ. ಇದುವರೆಗೇ ಅತೀ ಹೆಚ್ಚು ಅಂದರೆ 9 ಗಂಟೆಗಳ ಕಾಲ ಒಂದು ವಾರ್ಡ್ ರೋಬ್ ಸ್ವಚ್ಛಗೊಳಿಸಿದ್ದರಂತೆ ಯಲ್ಲಾ. ಯಲ್ಲಾ ಬೇಕಾದ ಬಟ್ಟೆಯನ್ನು ಇಟ್ಟು ಬೇಡವಾದ ಬಟ್ಟೆಯನ್ನು ಗ್ರಾಹಕರ ಅನುಮತಿಯ ಮೇರೆಗೆ ಅಗತ್ಯ ಇರುವವರಿಗೆ ತಲುಪಿಸುವ ಕಾರ್ಯವನ್ನೂ ಕೂಡ ಮಾಡುತ್ತಾರೆ. ಒಟ್ಟಿನಲ್ಲಿ ಯಲ್ಲಾ, ಮನಸ್ಸಿನ ಖುಷಿಗಾಗಿ ಜೊತೆಜೊತೆಯಲ್ಲಿ ಹಣವನ್ನೂ ಗಳಿಸುತ್ತಾ ಸ್ವ ಉದ್ಯೋಗವೊಂದನ್ನು ಕಂಡುಕೊಂಡಿದ್ದಾರೆ!