ನಿಮಗೆ ಕೇವಲ 35 ಪೈಸೆಯಲ್ಲಿ ರೈಲ್ವೆ ಟ್ರಾವೆಲ್ ಇನ್ಸುರೆನ್ಸ್ ಸಿಗುತ್ತದೆ, ಏನಾದರು ತೊಂದರೆ ಆದರೆ ಲಕ್ಷ ಲಕ್ಷ ಪರಿಹಾರ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮುಂದಿನ ದಿನಗಳಲ್ಲಿ ಯಾರು ಎಷ್ಟು ದಿನಗಳವರೆಗೆ ಬರುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದರಲ್ಲಿಯೂ ಇಂದು ನಾವು ಮಾತನಾಡಲು ಹೊರಟಿರುವುದು ರೈಲ್ವೆ ಆ’ಘಾತದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಹೇಗೆ ಪರಿಹಾರವನ್ನು ಪಡೆದುಕೊಳ್ಳುವುದು ಎನ್ನುವುದರ ಕುರಿತಂತೆ.

ಹೌದು ನಮ್ಮ ದೇಶದ ರೈಲು ಸಂಚಾರ ವ್ಯವಸ್ಥೆ ಇಡೀ ವಿಶ್ವದಲ್ಲಿ ಅತಿ ದೊಡ್ಡದು. ಒಂದು ವೇಳೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದಾಗ ಅದರಲ್ಲಿ ಕೇವಲ 35 ಪೈಸೆಯಲ್ಲಿ ಟ್ರಾವೆಲ್ ವಿಮೆಯನ್ನು ಪಡೆಯುವಂತಹ ಅವಕಾಶವಿರುತ್ತದೆ. ಹೀಗಾಗಿ ಒಂದು ವೇಳೆ ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ಅವಗಡ ಸಂಭವಿಸಿದರೂ ಕೂಡ ಅದರಿಂದ ನಿಮಗೆ ಅಥವಾ ನಿಮ್ಮ ಮನೆಯವರೆಗೆ ಲಾಭಾಂಶ ಸಿಗುವ ಸಾಧ್ಯತೆ ಕೂಡ ಇದೆ. ನೀವು ಟಿಕೆಟ್ ಬುಕ್ ಮಾಡಿದಾಗ ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಬರುತ್ತದೆ. ಅಲ್ಲಿ ನೀವು ನಾಮಿನಿಯನ್ನು ಭರ್ತಿ ಮಾಡಲೇಬೇಕು ನಾಮಿನಿ ಇಲ್ಲದಿದ್ದರೆ ಆ ಇನ್ಸೂರೆನ್ಸ್ ಅರ್ಹ ಆಗುವುದಕ್ಕೆ ಸಾಧ್ಯವಿಲ್ಲ. ಇನ್ನು ವಿಮೆಯ ಹಣವನ್ನು ಪಡೆಯುವ ವಿಧಾನ ನಿಮಗೆ ಎಷ್ಟು ಕಷ್ಟ ಆಗಿದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.

ಒಂದು ವೇಳೆ ರೈಲ್ವೆ ಪ್ರಯಾಣದಲ್ಲಿ ಅವಘಡ ನಡೆದು ಮರಣವನ್ನು ಹೊಂದಿದರೆ 10 ಲಕ್ಷ ಪರಿಹಾರ ಒಂದು ವೇಳೆ ಸಂಪೂರ್ಣ ಅಂಗವಿಕಲನಾದರೆ 10 ಲಕ್ಷ ರೂಪಾಯಿ ಆಂಶಿಕ ಅಂಗವೈಕಲ್ಯ ಉಂಟಾದರೆ 7.5 ಲಕ್ಷ ರೂಪಾಯಿ ಪರಿಹಾರ ಕೊಂಚ ಪ್ರಮಾಣದ ಗಾ’ಯವಾದರೆ 2ಲಕ್ಷ ಪರಿಹಾರ. ಇಷ್ಟು ಮಾತ್ರವಲ್ಲದೆ ಮರಣವನ್ನು ಹೊಂದಿರುವ ಪ್ರಯಾಣಿಕನ ಕಳೆಬರವನ್ನು ಸಾಗಿಸಲು ಟ್ರಾನ್ಸ್ಪೋರ್ಟ್ ಚಾರ್ಜ್ ಆಗಿ ಹತ್ತು ಸಾವಿರ ರೂಪಾಯಿ ಕೂಡ ಸಿಗಲಿದೆ.

ಇನ್ನು ಈ ಪರಿಹಾರ ಹಣವನ್ನು ನಾಮಿನಿ ಗಳು ಪಡೆಯುವುದು ಹೇಗೆ ಎಂಬುದರ ಕುರಿತಂತೆ ಕೂಡ ಹೇಳುತ್ತೇವೆ. ಹೌದು ನಾಮಿನಿ ಗಳು ಈಗ ಘಟನೆಗಳು ನಡೆದ ಕೆಲವೇ ದಿನಗಳಲ್ಲಿ ವಿಮೆ ಕಂಪನಿಯ ಕಚೇರಿಗೆ ಭೇಟಿ ನೀಡಿ ಎಲ್ಲಾ ಗುರು ಗುರುತು ದಾಖಲೆಗಳಾದ ಪ್ಯಾನ್ ಕಾರ್ಡ್ ಆಧಾರ್ ಕಾರ್ಡನ್ನು ನೀಡಬೇಕಾಗುತ್ತದೆ. ನಾಲ್ಕು ತಿಂಗಳುಗಳಲ್ಲಿ ನಾಮಿನಿ ರವರಿಗೆ ಸಿಗಬೇಕಾದಂತಹ ಪರಿಹಾರ ಹಣ ಸಿಕ್ಕಿಬಿಡುತ್ತದೆ. ನೀವು ಮುಂದಿನ ದಿನಗಳಲ್ಲಿ ರೈಲು ಪ್ರಯಾಣ ಮಾಡುತ್ತಿರಬೇಕಾದರೆ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.