ಬೇಡವೇ ಬೇಡ ಎಂದರು ನಾಯಿಯ ಜೊತೆ ಮದುವೆಯಾದ 18 ವರ್ಷದ ಹುಡುಗಿ, ಕಾರಣ ತಿಳಿದಾಗ ಭೇಶ್ ಎಂದ ನೆಟ್ಟಿಗರು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೋಶಿಯಲ್ ಮೀಡಿಯಾದಲ್ಲಿ ನೀವು ಚಿತ್ರವಿಚಿತ್ರವಾದ ವಿಚಾರಗಳನ್ನು ನೋಡುತ್ತಲೇ ಇರುತ್ತೀರಿ ಹಾಗೂ ಕೇಳುತ್ತಲೇ ಇರುತ್ತೀರಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಘಟನೆಗಳು ಹೀಗೂ ಕೂಡ ನಡೆಯಬಲ್ಲ ಎಂಬ ಆಶ್ಚರ್ಯವನ್ನು ಮೂಡಿಸಲು ಪ್ರಾರಂಭಿಸಿದೆ. ಇಂದು ನಾವು ಹೇಳುವ ವಿಚಾರವೂ ಕೂಡ ಇದಕ್ಕೆ ಹೊರತಾಗಿಲ್ಲ. ಗಂಡು-ಹೆಣ್ಣನ್ನು ಮದುವೆಯಾಗುವುದನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಸಲಿಂಗಿಗಳು ಗಂಡು ಗಂಡನ್ನು ಹಾಗೂ ಹೆಣ್ಣು ಹೆಣ್ಣನ್ನು ಮದುವೆಯಾಗುವುದನ್ನು ಕೂಡ ಕೇಳಿರುತ್ತೀರಿ ನೋಡಿರುತ್ತೀರಿ

ಆದರೆ ಇಂದು ನಾವು ಹೇಳು ಹೊರಟಿರುವ ವಿಚಾರದಲ್ಲಿ ಒಬ್ಬ ಸುರಸುಂದರಿ ಹುಡುಗಿ ನಾಯಿಯನ್ನು ಮದುವೆಯಾಗಿದ್ದಾಳೆ. ನಮ್ಮ ಭಾರತ ದೇಶದಲ್ಲಿ ಹಲವಾರು ಹಳ್ಳಿ ಪ್ರದೇಶದಲ್ಲಿ ಇಂತಹ ಆಚಾರಗಳು ನಡೆಯುವುದನ್ನು ನೀವು ಕೇಳಿರುತ್ತೀರಿ. ಇಂದಿನ ಲೇಖನಿಯಲ್ಲಿ ಕೂಡ ಇಂತಹದೇ ವಿಚಿತ್ರ ಸಂಪ್ರದಾಯದ ಆಚರಣೆಗೊಂದು ನಡೆದಿದ್ದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇಂತಹ ವಿಚಿತ್ರ ಸಂಪ್ರದಾಯದ ನಿಜವಾದ ಹಿನ್ನೆಲೆ ಏನು ಎಂಬುದನ್ನು ನಾವು ತಿಳಿಸುತ್ತೇವೆ ಬನ್ನಿ. ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಹೌದು ಇಂತಹ ವಿಚಿತ್ರ ಘಟನೆ ನಡೆದಿರುವುದು ಜಾರ್ಖಂಡ್ ನಲ್ಲಿ. ಇಂತಹ ವಿಚಿತ್ರ ಘಟನೆಯನ್ನು ಕೇಳಿ ನಿಮ್ಮಲ್ಲಿ ಕೂಡ ಈ ಘಟನೆ ಕುರಿತಂತೆ ವಿಚಿತ್ರ ಭಾವನೆ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಿಯನ್ನು ಈಗ ಮದುವೆಯಾಗಿರುವುದು ಮಂಗಲಿ ಮುಂಡ ಎನ್ನುವ 18 ವರ್ಷದ ಯುವತಿ. ಆ ನಾಯಿಯ ಮೇಲಿನ ಪ್ರೀತಿಗಾಗಿ ನಾಯಿಯನ್ನು ಮದುವೆ ಆಗಲಿಲ್ಲ. ಬದಲಾಗಿ ನಾಯಿಯನ್ನು ಮದುವೆಯಾಗಲು ಬೇರೆಯದೇ ಕಾರಣವಿದೆ. ಈ ಸುರಸುಂದರ ಯುವತಿ ನಾಯಿಯನ್ನು ಮದುವೆಯಾಗಲು ಇರುವ ಕಾರಣವಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಬೇರೆ ಎಲ್ಲ ಸಾಮಾನ್ಯ ಮದುವೆ ಗಳಂತೆ ಮಂಗಲಿ ಮುಂಡ ಹಾಗೂ ನಾಯಿಯ ಮದುವೆ ಕೂಡ ಜಾರ್ಖಂಡ್ ಗ್ರಾಮದಲ್ಲಿ ಸಾಕಷ್ಟು ಅದ್ದೂರಿಯಾಗಿಯೇ ನೆರವೇರಿದೆ. ಇಷ್ಟಕ್ಕೂ ಆಕೆ ನಾಯಿ ಜೊತೆಗೆ ಮದುವೆ ಆಗೋದಕ್ಕೆ ಕಾರಣವಾದರೂ ಏನು ಎಂಬುದನ್ನು ನೀವು ಯೋಚಿಸುತ್ತಿರಬಹುದು. ಜ್ಯೋತಿಷ್ಯದ ಪ್ರಕಾರ ಆಕೆಯ ಜಾತಕದಲ್ಲಿ ಒಂದು ದೊಡ್ಡ ಗಂಡಾಂತರವಿತ್ತು. ಈ ಕಾರಣದಿಂದಾಗಿ ಜ್ಯೋತಿಷ್ಯಿಯ ಸಲಹೆಯಿಂದ ಈ ನಾಯಿಯನ್ನು ಮಂಗಲಿ ಮುಂಡ ಮೊದಲ ಮದುವೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಹೌದು ನಾಯಿಯನ್ನು ಜ್ಯೋತಿಷ್ಯದಲ್ಲಿ ಇರುವಂತಹ ಕಂಟಕದ ಕಾರಣದಿಂದಾಗಿಯೇ ಮೊದಲ ಮದುವೆಯಾಗಿದ್ದಾಳೆ ಆ ಯುವತಿ. ಇದು ಕೇಳುವುದಕ್ಕೆ ವಿಚಿತ್ರ ಎಂದು ಅನಿಸಿದರೂ ಕೂಡ ಜ್ಯೋತಿಷ್ಯವನ್ನು ನಂಬುವ ಎಲ್ಲಾ ಜನರು ಕೂಡ ಇಂತಹ ವಿಚಾರಗಳನ್ನು ಕೇಳಿದಾಗ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪರಿಹಾರವನ್ನು ಹುಡುಕಲು ಹೋಗುತ್ತಾರೆ. ಜ್ಯೋತಿಷ್ಯ ನಂಬುವವರಿಗೆ ಇಂತಹ ಹಲವಾರು ವಿಚಾರಗಳನ್ನು ನೋಡಿರುವುದರಿಂದ ಆಗಿ ಇದು ಹೊಸತೇನೂ ಎಂದು ಅನಿಸುವುದಿಲ್ಲ. ಯಾಕೆಂದರೆ ಈಗಾಗಲೇ ಇಂತಹ ಸಮಸ್ಯೆ ಇರುವವರಿಗೆ ಹಲವಾರು ಪ್ರಾಣಿಗಳ ಜೊತೆಗೆ ಮದುವೆ ಮಾಡಿಸಿರುವುದು ನಾವು ಈ ಹಿಂದೆ ಹಲವಾರು ಬಾರಿ ಕೇಳಿದ್ದೇವೆ. ಹೀಗಾಗಿ ಈ ಸಮಸ್ಯೆಗೆ ಇದೇ ಪರಿಹಾರವಾಗಿತ್ತು. ನಾಯಿಯನ್ನು ಮದುವೆಯಾದ ಮೇಲೂ ಕೂಡ ಇವರು ಸುಮ್ಮನಿರಲಿಲ್ಲ.

ಮೊದಲ ಮದುವೆಯಾಗಿ ನಾಯಿಯನ್ನು ಮದುವೆಯಾದ ನಂತರ ಮಂಗಲಿ ಮುಂಡ ಅವರ ಪೋಷಕರು ಅದೇ ಗ್ರಾಮದ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಎರಡನೇ ಮದುವೆ ಮಾಡಿಸುತ್ತಾರೆ. ಅಲ್ಲಿಗೆ ಅವಳಿಗೆ ಇದ್ದಂತಹ ಜಾತಕ ದೋಷ ಮುಗಿಯಿತು ಎಂಬುದು ಅವರ ಭಾವನೆಯಾಗಿದೆ. ಈ ಸುದ್ದಿ ಈಗಾಗಲೇ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿದ್ದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಡೆದಿರುವುದರಿಂದ ಅದನ್ನು ಸರಿ ಎಂದು ವಾದಿಸಿದರೆ. ಇನ್ನು ಕೆಲವರು ಈ ವಿಚಾರವನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡಿದ್ದಾರೆ. ಈ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.