ರೈತ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ತ್ರಿಕಾಲ ಜ್ಞಾನಿ ಪಂಡಿತ; ಪಂಡಿತನಿಗೆ ಉತ್ತರ ಸಿಕ್ಕಿದ್ದು ವೇಶ್ಯೆಯ ಮನೆಯಲ್ಲಿ. ಅಷ್ಟಕ್ಕೂ ಆ ಉತ್ತರ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಅತ್ಯಂತ ದೊಡ್ಡ ಕೆಟ್ಟ ಅಭ್ಯಾಸ ಎಂದರೆ ಅದು ದುರಾಸೆ ಎಂದರೆ ತಪ್ಪಾಗಲಾರದು. ದುರಾಸೆ ಅನ್ನುವುದು ಪ್ರತಿಯೊಬ್ಬನ ಜೀವನದಲ್ಲಿ ಕೂಡ ಆತ ಅದೋಗತಿ ಹೊಂದಲು ಪ್ರಮುಖ ಕಾರಣವಾಗಿರುವ ಅಂಶ ಎಂದರೆ ತಪ್ಪಾಗಲಾರದು. ಇನ್ನು ಇದೇ ವಿಚಾರದ ಕುರಿತಂತೆ ಒಂದು ಕಥೆಯ ಮೂಲಕ ನಿಮಗೆ ವಿವರಿಸಲು ಹೊರಟಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಒಬ್ಬ ಪಂಡಿತ ಹಲವಾರು ವರ್ಷಗಳ ನಂತರ ಕಾಶಿಯಿಂದ ಜ್ಞಾನಾರ್ಜನೆ ಮಾಡಿಕೊಂಡು ತನ್ನ ಊರಿಗೆ ಬಂದಿರುತ್ತಾನೆ. ಆ ಸಂದರ್ಭದಲ್ಲಿ ಊರಿನವರೆಲ್ಲರೂ ಕೂಡ ಪಂಡಿತರನ್ನು ನೋಡಲು ಸೇರಿ ಬರುತ್ತಾರೆ. ಎಲ್ಲರೂ ಕೂಡ ಧರ್ಮದ ಕುರಿತಂತೆ ಪಂಡಿತರಲ್ಲಿ ಕೇಳುವಂತಹ ಉತ್ಸಾಹವನ್ನು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಪಂಡಿತರಿಗೆ ಒಬ್ಬ ರೈತ ಪಾಪ ಕರ್ಮದ ಗುರು ಯಾರು ಎನ್ನುವುದಾಗಿ ಪ್ರಶ್ನೆ ಕೇಳುತ್ತಾನೆ. ಈ ಪ್ರಶ್ನೆಯನ್ನು ಕೇಳಿ ಪಂಡಿತರು ಕೂಡ ಗೊಂದಲದಲ್ಲಿ ಮುಳುಗುತ್ತಾರೆ. ಯಾಕೆಂದರೆ ಆತ ಧರ್ಮದ ಕುರಿತಂತೆ ಆಧ್ಯಾತ್ಮಿಕದ ಕುರಿತಂತೆ ಕೇಳುತ್ತಾರೆ ಎಂಬುದಾಗಿ ಅಂದುಕೊಂಡಿದ್ದರು. ಆದರೆ ಈ ಪ್ರಶ್ನೆಗೆ ಉತ್ತರ ಆತನ ಬಳಿಯು ಕೂಡ ಇರಲಿಲ್ಲ. ನಂತರ ಮತ್ತೆ ಕಾಶಿಗೆ ಹೋಗಿ ಅಲ್ಲಿನ ಗುರುಗಳ ಬಳಿ ಪ್ರಶ್ನೆ ಕುರಿತಂತೆ ಉತ್ತರವನ್ನು ಕೇಳುತ್ತಾರೆ ಆದರೆ ಎಲ್ಲೂ ಕೂಡ ಸಿಗುವುದಿಲ್ಲ.

ಈ ಮಧ್ಯದಲ್ಲಿ ಒಬ್ಬ ವೇಶ್ಯೆ ಪಂಡಿತರಿಗೆ ಸಿಗುತ್ತಾಳೆ. ಯಾಕೆ ನೀವು ಇಷ್ಟೊಂದು ಮಂಕಾಗಿ ಕುಳಿತಿದ್ದೀರಿ ಎನ್ನುವುದಾಗಿ ವೇಶ್ಯೆ ಪಂಡಿತರಲ್ಲಿ ಕೇಳುತ್ತಾಳೆ. ಆಗ ನಡೆದಿರುವಂತಹ ವಿಚಾರವನ್ನು ಪಂಡಿತರು ವೇಶ್ಯೆ ಬಳಿ ಹೇಳುತ್ತಾರೆ. ಆಗ ಆಕೆ ಇಷ್ಟು ಚಿಕ್ಕ ವಿಚಾರಕ್ಕೆ ಇಷ್ಟೊಂದು ಚಿಂತೆ ಪಡಬೇಕೇ ಅದಕ್ಕೆ ನಾನು ಉತ್ತರ ಹೇಳುತ್ತೇನೆ ಆದರೆ ನೀವು ನನ್ನ ಜೊತೆ ಕೆಲವು ದಿನಗಳ ಕಾಲ ಇರಬೇಕಾಗುತ್ತದೆ ಎಂಬುದಾಗಿ ಹೇಳುತ್ತಾರೆ. ಪಂಡಿತರು ಹಲವಾರು ಸಮಯ ಯೋಚಿಸಿದ ನಂತರ ಕೆಲವೊಂದು ನಿಯಮಗಳನ್ನು ವಿಧಿಸಿದ ನಂತರ ಇರುವುದಕ್ಕೆ ಒಪ್ಪಿಕೊಳ್ಳುತ್ತಾರೆ.

ಆ ಶರತ್ತುಗಳಲ್ಲಿ ಒಂದು ಏನೆಂದರೆ ಪಂಡಿತರು ಬೇರೆ ಯಾರ ಕೈಯಿಂದಲೂ ಕೂಡ ಆಹಾರವನ್ನಾಗಲಿ ನೀರನ್ನಾಗಲೀ ಸೇವಿಸುವುದಿಲ್ಲ ಬದಲಾಗಿ ಎಲ್ಲಾ ಆಹಾರವಸ್ತುಗಳನ್ನು ತಮ್ಮ ಕೈಯಿಂದ ತಾವೇ ತಂದು ತಿನ್ನುತ್ತಿದ್ದರು. ನೀರನ್ನು ಕೂಡ ತಾವೇ ತಮ್ಮ ಕೈಯ್ಯಾರೆ ತಂದುಕೊಡುತ್ತಿದ್ದರು. ಇಷ್ಟೆಲ್ಲಾ ನಡೆಯುವಾಗ ಪಂಡಿತರು ಉತ್ತರವನ್ನು ತಿಳಿದುಕೊಳ್ಳಲು ಸಾಕಷ್ಟು ಕಾತರರಾಗಿದ್ದರು.

ಇದೇ ಸಂದರ್ಭದಲ್ಲಿ ಆ ವೇಶ್ಯೆ ಕೂಡ ಪಂಡಿತರಿಗೆ ಯಾಕೆ ನೀವು ಅಡುಗೆ ಮಾಡುವಂತಹ ಕಷ್ಟವನ್ನು ತೆಗೆದುಕೊಳ್ಳುತ್ತೇವೆ ನಾನೇ ದಿನಾಲು ಮಡಿಯಾಗಿ ಬಂದು ಸ್ವಚ್ಛವಾಗಿ ಊಟವನ್ನು ಸಿದ್ಧಪಡಿಸಿ ನಿಮಗೆ ಕೊಡುತ್ತೇನೆ ಇದರಿಂದ ನನಗೆ ಪುಣ್ಯ ಕೂಡ ದೊರಕುತ್ತದೆ. ಇಲ್ಲಿ ಮನೆಯ ಒಳಗಡೆ ಬಂದು ನೀವು ಹೇಗೆ ಊಟ ಮಾಡುತ್ತಿದ್ದೀರಿ ಎಂಬುದನ್ನು ಯಾರು ತಾನೇ ನೋಡುತ್ತಿದ್ದಾರೆ. ನಾನು ನಿಮಗೆ ಊಟ ಮಾಡಿಬಡಿಸುತ್ತೇನೆ ಎಂಬುದಾಗಿ ಹೇಳಿ ಅದರ ಬದಲಾಗಿ ದಿನಕ್ಕೆ 5 ಚಿನ್ನದ ನಾಣ್ಯಗಳನ್ನು ಕೂಡ ತಾನೇ ನಿಮಗೆ ನೀಡುತ್ತೇನೆ ಎಂಬುದಾಗಿ ಕೂಡ ಹೇಳುತ್ತಾಳೆ.

ಚಿನ್ನದ ನಾಣ್ಯಗಳ ವಿಚಾರ ಕೇಳುತ್ತದೆ ಪಂಡಿತರ ಮನಸ್ಸಿನಲ್ಲಿ ದುರಾಸೆಯನ್ನು ವುದು ಮೂಡಿಬರುತ್ತದೆ. ಚಿನ್ನದ ನಾಣ್ಯಗಳ ಕಾರಣದಿಂದಾಗಿ ವೇಶ್ಯೆಯ ಕೈಯಿಂದ ಸಿದ್ಧಪಡಿಸಲಾಗುವ ಊಟವನ್ನು ತಿನ್ನಲು ಒಪ್ಪಿಕೊಳ್ಳುತ್ತಾರೆ. ಇಷ್ಟು ಮಾತ್ರವಲ್ಲದೆ ಪಂಡಿತರು ನಾನು ಊಟ ಮಾಡುವಾಗ ಯಾರಾದರೂ ಮನೆಯಿಂದ ಹಾದು ಹೋಗುತ್ತಿದ್ದರೆ ನೋಡದಂತೆ ನಿಗಾವಹಿಸಬೇಕು ಎಂಬುದಾಗಿ ಕೂಡ ತಾಕೀತು ಮಾಡುತ್ತಾರೆ. ಅದಕ್ಕೂ ಕೂಡ ವೇಶ್ಯೆ ಒಪ್ಪಿಕೊಳ್ಳುತ್ತಾಳೆ. ನಂತರ ಮಡಿಯಾಗಿ ಬಂದು ಸ್ವಾದಿಷ್ಟಕರ ಊಟವನ್ನು ಕೂಡ ಪಂಡಿತರಿಗೆ ಬಡಿಸುತ್ತಾಳೆ. ಇನ್ನೇನು ಪಂಡಿತರು ಊಟವನ್ನು ಮಾಡಬೇಕು ಎನ್ನುವಷ್ಟರಲ್ಲಿ ವೇಶ್ಯೆ ಊಟದ ಬಟ್ಟಲನ್ನು ಕಸಿದುಕೊಳ್ಳುತ್ತಾಳೆ. ಆಗ ಪಂಡಿತರು ಕೆರಳಿ ಇದೇನಿದು ತಮಾಷೆಯನ್ನುವುದಾಗಿ ಕೋಪದಿಂದ ಹೇಳುತ್ತಾರೆ.

ಆಗ ವೇಶ್ಯೆ ಇದು ತಮಾಷೆಯಲ್ಲ ಪಂಡಿತರೆ ಬದಲಾಗಿ ನಿಮ್ಮ ಪ್ರಶ್ನೆಯ ಉತ್ತರ ಎನ್ನುವುದಾಗಿ ಹೇಳುತ್ತಾಳೆ. ಹೌದು ಇಲ್ಲಿ ನೀವು ಬಂದಾಗ ನೀವೇ ಸ್ವತಃ ಅಡುಗೆ ಮಾಡಿಕೊಂಡು ಮಡಿ ಹಾಗಿರಬೇಕು ಎನ್ನುವ ಕಾರಣಕ್ಕಾಗಿ ಊಟ ಮಾಡುತ್ತಿದ್ದಿರಿ. ಆದರೆ ಈಗ ಚಿನ್ನದ ನಾಣ್ಯಗಳು ಸಿಗುತ್ತಿವೆ ಎನ್ನುವ ದುರಾಸೆಗಾಗಿ ವೇಶ್ಯೆಯ ಕೈಯ್ಯ ಅಡುಗೆಯನ್ನು ತಿನ್ನಲು ಕೂಡ ನೀವು ಸಿದ್ಧರಾಗಿದ್ದೀರಿ. ದುರಾಸೆಯೇ ಪಾಪದ ಗುರು ಎನ್ನುವುದಾಗಿ ಪಂಡಿತರ ಪ್ರಶ್ನೆಗೆ ಉತ್ತರವನ್ನು ನೀಡುತ್ತಾಳೆ. ಪಂಡಿತರಿಗೂ ಕೂಡ ತಮ್ಮ ತಪ್ಪಿನ ಅರಿವಾಗಿ ತಮ್ಮ ಪ್ರಶ್ನೆಗೆ ಉತ್ತರ ಕೂಡ ಸಿಕ್ಕಿತು ಎನ್ನುವ ಅರಿವಾಗುತ್ತದೆ.

ಈ ಕಥೆಯಿಂದಾಗಿ ನಾವು ತಿಳಿದುಕೊಳ್ಳುವ ಅಂಶವೇನೆಂದರೆ ನೀವು ಸರಿದಾರಿಯಲ್ಲಿ ಚಲಿಸುತ್ತಿದ್ದರು ಕೂಡ ದುರಾಸೆಯನ್ನು ನಿಮ್ಮ ಜೀವನದಲ್ಲಿ ಸಾಕಷ್ಟು ಕೆಟ್ಟ ಪರಿಣಾಮಗಳನ್ನು ಉಂಟು ಮಾಡುವಲ್ಲಿ ಕಾರಣವಾಗುತ್ತದೆ. ಹೀಗಾಗಿ ದುರಾಸೆಯನ್ನು ನಿಮ್ಮ ಜೀವನದಲ್ಲಿ ಬರುವುದಕ್ಕೆ ಬಿಡಬಾರದು. ಈ ಕಥೆಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.