Jobs: ಬೆಸ್ಕಾಂ ನಲ್ಲಿ ಇದಾವೆ ಭರ್ಜರಿ ಹುದ್ದೆಗಳು- ಅರ್ಜಿ ಹಾಕಿ, ಕೆಲಸ ಪಡೆಯಿರಿ.

ನಮಸ್ಕಾರ ಸ್ನೇಹಿತರೆ ಡಿಪ್ಲೋಮೋ ಹಾಗು ಬಿಇ ಪಾಸಾದವರಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ಉದ್ಯೋಗ ಅವಕಾಶ ಸಿಗಲಿದೆ ಎನ್ನುವಂತಹ ಮಾಹಿತಿ ಈಗ ಕೇಳಿಬಂದಿದೆ. ಒಂದು ವರ್ಷದ ಸಮಯಕ್ಕೆ ಕಾಲಿ ಇರುವಂತಹ 400 ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತಹ ಪ್ರಕ್ರಿಯೆ ನಡೆಯಲಿದ್ದು ಈ ಸಂದರ್ಭದಲ್ಲಿ ತಿಂಗಳಿಗೆ ಸ್ತೈಪೆಂಡ್ ಗಳನ್ನು ಕೂಡ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಹಾಗಿದ್ರೆ ಬನ್ನಿ ವಿದ್ಯುತ್ ನಿಗಮದಲ್ಲಿ ಖಾಲಿ ಇರುವಂತಹ ಈ ಹುದ್ದೆಗಳ ಬಗ್ಗೆ ಹಾಗೂ ಅಭ್ಯರ್ಥಿಗಳ ಭರ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಹುದ್ದೆಗಳ ಸಂಖ್ಯೆ

  1. Electronics and communication ಇಂಜಿನಿಯರಿಂಗ್ ಹುದ್ದೆಯಲ್ಲಿ 116 ಖಾಲಿ ಸ್ಥಾನ.
  2. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ 143 ಖಾಲಿ ಸ್ಥಾನ.
  3. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ 36 ಖಾಲಿಸ್ಥಾನ.
  4. ಇಂಜಿನಿಯರಿಂಗ್ ಮತ್ತು ಇನ್ಫಾರ್ಮೇಷನ್ ಸೈನ್ಸ್ ನಲ್ಲಿ 20 ಖಾಲಿ ಸ್ಥಾನ.
  5. ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ ಎಂಜಿನಿಯರಿಂಗ್ ಹಾಗೂ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಒಟ್ಟು 10 ಸ್ಥಾನಗಳ ಅವಕಾಶ ಇದ್ದು ಒಟ್ಟಾರೆಯಾಗಿ 325 ಸ್ಥಾನಗಳು ಖಾಲಿ ಇದ್ದಾವೆ.

ಇದರ ಜೊತೆಗೆ ಉಳಿದ 75 ಸ್ಥಾನಗಳು ಅಂದರೆ ಅಪ್ರೆಂಟಿಸ್ ಹುದ್ದೆಗಳು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ನಲ್ಲಿ ಹತ್ತು ಸ್ಥಾನಗಳು, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಹತ್ತು ಸ್ಥಾನಗಳು ಮತ್ತು ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ 55 ಸ್ಥಾನಗಳು ಅಂದರೆ ಒಟ್ಟಾರೆ 75 ಸ್ಥಾನಗಳು ಇಲ್ಲಿ ಬಾಕಿ ಇದ್ದಾವೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಡಿಸೆಂಬರ್ 11 2023 ಆಗಿದ್ದು, ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ ಇದೇ ಡಿಸೆಂಬರ್ 31 2023 ಆಗಿದೆ. 2024ರ ಜನವರಿ 8ರಂದು ಶಾರ್ಟ್ ಲಿಸ್ಟ್ ಆಗಿರುವಂತಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ.

ಎಜುಕೇಶನ್ ಕ್ವಾಲಿಫಿಕೇಷನ್

ಗ್ರಾಜುಯೇಷನ್ ಅಪ್ರೆಂಟಿಸ್ ಗಾಗಿ ಅದಕ್ಕೆ ಸಂಬಂಧಪಟ್ಟಂತಹ ಕ್ಯಾಟಗರಿಯಲ್ಲಿ ಬಿಇ ಪದವಿ ಪಾಸ್ ಆಗಿರಬೇಕು. ಟೆಕ್ನಿಷಿಯನ್ ಅಪ್ರೆಂಟಿಸ್ ವಿಭಾಗದಲ್ಲಿ ಅದಕ್ಕೆ ಸಂಬಂಧಪಟ್ಟಂತಹ ವಿಭಾಗದ ಡಿಪ್ಲೋಮಾ ಎಂಜಿನಿಯರಿಂಗ್ ಅನ್ನು ಪಾಸ್ ಮಾಡಿರಬೇಕು.

ಸ್ಟೈಲ್ಪೆಂಡ್ ವಿವರದ ಬಗ್ಗೆ ಮಾತನಾಡುವುದಾದರೆ ಗ್ರಾಜುಯೇಟ್ ಅಪ್ರೆಂಟಿಸ್ ಗಳಿಗೆ ತಿಂಗಳಿಗೆ 9008 ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್ ಗಳಿಗೆ ತಿಂಗಳಿಗೆ 8,000 ರೂಪಾಯಿ ಆಗಿದೆ.

ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. https://nats.education.gov.in/ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ನೀವು ಕೂಡ ಅರ್ಹ ಅಭ್ಯರ್ಥಿ ಆಗಿದ್ದರೆ ಈ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸುವ ಮೂಲಕ ಈ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಹುದ್ದೆಯ ಅವಧಿ ಒಂದು ವರ್ಷ ಆಗಿರುತ್ತದೆ ಎಂಬುದನ್ನು ಕೂಡ ನೀವು ಈ ಮೂಲಕ ತಿಳಿದುಕೊಳ್ಳಬಹುದು.