ಬುರ್ಜ್ ಖಲೀಫಾ ಮೇಲೆ ಸುದೀಪ್ ಕಟೌಟ್ ಹಾಕಲು 3 ನಿಮಿಷಕ್ಕೆ ನೀಡಿದ ಹಣ ಎಷ್ಟು ಗೊತ್ತಾ??

ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಸುದೀಪ್ ರವರು ಸಿನಿಮಾರಂಗಕ್ಕೆ ಇದೀಗ ಎಂಟ್ರಿಕೊಟ್ಟು 25 ವರ್ಷ ಕಳೆದ ಸಂಭ್ರಮದಲ್ಲಿದ್ದಾರೆ. ಅದೇ ಕಾರಣಕ್ಕಾಗಿ ಮುಂಬರುವ ಸುದೀಪ್ ರವರ ಸಿನಿಮಾ ವಿಕ್ರಾಂತ ರೋಣ ಸಿನಿಮಾ ಅನ್ನು ವಿಶೇಷವಾಗಿ ಟೈಟಲ್ ಲಾಂಚ್ ಮಾಡಬೇಕು ಎಂಬ ಕಾರಣಕ್ಕಾಗಿ ಮೂರು ನಿಮಿಷಗಳ ಕಾಲ ದುಬೈ ಬುರ್ಜ್ ಖಲೀಫಾ ದ ಮೇಲೆ ಫೋಟೋ ಹಾಕಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿದೆ ಆದರೆ ಅದೇ ಸಮಯದಲ್ಲಿ ಕೇವಲ ಮೂರು ನಿಮಿಷದ ಫೋಟೋ ಹಾಕಲು ಬುರ್ಜ್ ಖಲೀಫಾ ಗೆ ನೀಡಿದ ಹಣವೆಷ್ಟು ಎಂದು ತಿಳಿದರೆ ಕಂಡಿತ ನಿಮಗೊಂದು ಕ್ಷಣ ಆಶ್ಚರ್ಯವಾಗುತ್ತದೆ

ಇಷ್ಟು ದಿವಸ ಬುರ್ಜ್ ಖಲೀಫಾ ಮೇಲೆ ಸೆಲೆಬ್ರೆಟಿಗಳ ಹುಟ್ಟುಹಬ್ಬದ ಅಂಗವಾಗಿ ಹಾಗೂ ಇತರ ದೇಶಗಳ ವಿವಿಧ ಆಚರಣೆಗಳ ಕುರಿತು ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಆದರೆ ಇದೇ ಮೊಟ್ಟಮೊದಲ ಬಾರಿಗೆ ಕನ್ನಡ ಸಿನಿಮಾ ಪೋಸ್ಟರ್ ಅಂದಮೇಲೆ ತೋರಿಸುವ ಮೂಲಕ ಬಿಡುಗಡೆ ಮಾಡಲಾಗಿದ್ದು, ಬಹಳ ವಿಶೇಷವೆನಿಸಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಖ್ಯಾತಿ ಪಡೆದುಕೊಂಡಿರುವ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಪೋಸ್ಟರ್ಗಳು ರಾರಾಜಿಸಿದೇ.

2000 ಅಡಿ ಎತ್ತರದ ಕಟ್ಟಡನ ಮೇಲೆ ಸುದೀಪ್ ಅವರ ಫೋಟೋವನ್ನು ತೋರಿಸಲಾಗಿದೆ. ಇನ್ನು ಹೀಗೆ 2000 ಅಡಿಯ ಕಟ್ಟಡದ ಮೇಲೆ ಕೇವಲ ಮೂರೇ ಮೂರು ನಿಮಿಷಗಳ ಕಾಲ ಸುದೀಪ್ ರವರ ಫೋಟೋ ತೋರಿಸಲು ಬರೋಬ್ಬರಿ 70 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಈ ರೀತಿಯ ವಿಶೇಷ ಕ್ಷಣವನ್ನು ಸುದೀಪ್ ರವರ ಅಭಿಮಾನಿಗಳ ತಂಡ ಬರೋಬ್ಬರಿ ಒಂದೂವರೆ ಕಿಲೋಮೀಟರ್ ದೂರದಿಂದ ಒಟ್ಟು ಆರು ವಿವಿಧ ರೀತಿಯ ಕ್ಯಾಮೆರಾಗಳನ್ನು ಬಳಸಿಕೊಂಡು ಚಿತ್ರೀಕರಣ ಮಾಡಿ ಬಿಡುಗಡೆ ಮಾಡಿದೆ.