ಚೆನ್ನೈ ತಂಡಕ್ಕೆ ಸೋಲಿನ ಬೆನ್ನಲ್ಲೇ ಮತ್ತೊಂದು ಶಾಕ್ ನೀಡಿದ ಬಿಸಿಸಿಐ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ತಂಡದ ವಿರುದ್ಧ ಹೀನಾಯ ಸೋಲನ್ನು ಕಂಡಿದೆ. ಈ ಮೂಲಕ ಡೆಲ್ಲಿ ತಂಡ ಟೂರ್ನಿಯನ್ನು ಶುಭಾರಂಭ ಮಾಡಿದರೇ ಮತ್ತೊಂದು ಕಡೆ ಚೆನ್ನೈ ತಂಡಕ್ಕೆ ಅಂದು ಕೊಂಡಂತೆ ಪಂದ್ಯದಲ್ಲಿ ಯಾವುದೂ ಕೂಡ ನಡೆದಿಲ್ಲ. ಒಂದೆಡೆ ಕೆಲವೊಂದು ಸ್ಟಾರ್ ಆಟಗಾರರು ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು, ಆದರೆ ರೈನಾ ರವರು ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಉತ್ತಮ ರನ್ ಕಡೆಗೆ ಕೊಂಡೊಯ್ದರು

ಆದರೆ ಪಂದ್ಯ ನಡೆದ ಕ್ರೀಡಾಂಗಣದಲ್ಲಿ 200 ರ ಗಡಿ ದಾಟಿಸಿದರೂ ಕೂಡ ಗೆಲ್ಲುವುದು ಸುಲಭವಲ್ಲ ಎಂಬುದು ಚೆನ್ನೈ ತಂಡಕ್ಕೆ ತಿಳಿದಿತ್ತು, ಈತನ್ಮಧ್ಯೆ ಬೋಲಿಂಗ್ ನಲ್ಲಿಯೂ ಕೂಡ ಕಳಪೆ ಪ್ರದರ್ಶನ ನೀಡಿ ಡೆಲ್ಲಿ ತಂಡದ ವಿರುದ್ಧ ಹೀನಾಯ ಸೋಲನ್ನು ಕಂಡಿದೆ, ಫೀಲ್ಡಿಂಗ್ ನಲ್ಲಿಯೂ ಕೂಡ ಹಲವಾರು ಕ್ಯಾಚ್ ಗಳನ್ನು ಬಿಟ್ಟ ಚೆನ್ನೈ ತಂಡ ಡೆಲ್ಲಿ ತಂಡಕ್ಕೆ ಸುಲಭ ತುತ್ತಾಗಿತ್ತು.

ಇನ್ನು ಹೀಗೆ ಮೊದಲ ಪಂದ್ಯದಲ್ಲಿಯೇ ಸೋಲನ್ನು ಅನುಭವಿಸಿದ ಬಳಿಕ ಚೆನ್ನೈ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ರವರಿಗೆ ಐಪಿಎಲ್ ನಿಯಮದ ಪ್ರಕಾರ ನಿಧಾನ ಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಬರೋಬ್ಬರಿ 12 ಲಕ್ಷ ರೂಪಾಯಿಗಳನ್ನು ದಂಡ ವಿಧಿಸಲಾಗಿದೆ. ಈ ತಂಡ ಕೇವಲ ಮೊದಲ ಪಂದ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಮತ್ತೆ ಮತ್ತೆ ಇದೇ ರೀತಿಯ ಕೆಲಸ ಮಾಡಿದರೆ ದೋನಿ ರವರು ನಾಯಕನಾಗಿರುವ ಕಾರಣ ಕೆಲವು ಪಂದ್ಯ ಗಳಿಂದ ಹೊರ ಹೋಗುವ ಸಾಧ್ಯತೆ ಕೂಡ ಬರಬಹುದು ಎಂಬ ಸಂದೇಶ ರವಾನೆ ನೀಡಲಾಗಿದೆ.