ತಬ್ಲಿಘಿ ವಿಚಾರದಲ್ಲಿ ಸುವರ್ಣ ನ್ಯೂಸ್ ಗೆ ಶಾಕ್, ಕೊರೊನ ವಿಚಾರದಲ್ಲಿ ತಬ್ಲಿಘಿ ಜಮಾತ್ ವರದಿಗೆ ಬಿಗ್ ಟ್ವಿಸ್ಟ್. NBSA ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ಬಹುಶಃ ನೆನಪಿರಬಹುದು, ಕಳೆದ ವರ್ಷ ದೇಶದಲ್ಲಿ ಮೊದಲನೇ ಅಲೆ ಕಂಡು ಬಂದಾಗ ದೇಶದ ಮೂಲೆ ಮೂಲೆಯಲ್ಲಿಯೂ ತಬ್ಲಿಘಿ ಜಮಾತ್ ಬಾರಿ ಸದ್ದು ಮಾಡಿತ್ತು. ಕೊರೊನ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕರೆದರೂ ಕೂಡ ಬಹುತೇಕ ಜನರು ಕಣ್ಮರೆಯಾಗಿದ್ದರು ಎಂದು ವರದಿಗಳು ಕೇಳಿ ಬಂದಿದ್ದವು. ಇದರ ಕುರಿತು ದೇಶದ ಬಹುತೇಕ ಮಾಧ್ಯಮಗಳು ಬಹಳ ವರದಿಗಳನ್ನು ನೀಡಿದ್ದವು.

ಒಟ್ಟಿನಲ್ಲಿ ಒಂದು ವಾಕ್ಯದಲ್ಲಿ ಹೇಳಬೇಕು ಎಂದರೇ, ತಬ್ಲಿಘಿ ಜಮಾತ್ ವಿಚಾರ ದೇಶದ ಮೂಲೆ ಮೂಲೆಯಲ್ಲಿಯೂ ಕೂಡ ಹೆಚ್ಚಿನ ಚರ್ಚೆಯನ್ನು ಸೃಷ್ಟಿ ಮಾಡಿತ್ತು. ಪ್ರತಿಯೊಂದು ಚಾನೆಲ್ ಗಳು ಡಿಬೇಟ್ ಮೂಲಕ ಗಂಟೆಗಟ್ಟಲೆ ಚರ್ಚೆಯನ್ನು ನಡೆಸಿದ್ದರು. ಕನ್ನಡದ ಖಾಸಗಿ ವಾಹಿನಿಗಳಾದ ಸುವರ್ಣ ನ್ಯೂಸ್ ಹಾಗೂ ನ್ಯೂಸ್ 18 ಕನ್ನಡ, ಇಂಗ್ಲಿಷ್​ನ ಟೈಮ್ಸ್ ನೌ ವಾಹಿನಿಗಳು ಕೂಡ ಇದಕ್ಕೆ ಹೊರತಲ್ಲ. ಅದರಲ್ಲಿಯೂ ಅಜಿತ್ ಅನುಮಕ್ಕನವರ್ ರವರು ಡಿಬೇಟ್ ಗಳು ಎಲ್ಲರ ಬೆವರಿಳಿಸಿತ್ತು.

ಆದರೆ ಇದೀಗ ಈ ಮೂರು ಸುವರ್ಣ ನ್ಯೂಸ್ ಹಾಗೂ ನ್ಯೂಸ್ 18 ಕನ್ನಡ, ಇಂಗ್ಲಿಷ್​ನ ಟೈಮ್ಸ್ ನೌ ವಾಹನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಲಲು ನಿರ್ಧಾರ ಮಾಡಲಾಗಿದೆ ಎಂದುದು ತಿಳಿದು ಬಂದಿದೆ. ಯಾಕೆಂದರೆ ಈ ಮೂರು ಸುವರ್ಣ ನ್ಯೂಸ್ ಹಾಗೂ ನ್ಯೂಸ್ 18 ಕನ್ನಡ, ಇಂಗ್ಲಿಷ್​ನ ಟೈಮ್ಸ್ ನೌ ವಾಹಿನಿಗಳು ಪ್ರಸಾರ ಮಾಡಿದ ಕೆಲವೊಂದು ದಿನಗಳ ವರದಿಗಳಲ್ಲಿ ನೇರವಾಗಿ ಒಂದು ಸಮುದಾಯನ್ನವನ್ನು ಗುರಿಯಾಗಿ ವರದಿಗಳನ್ನು ಮಾಡಲಾಗಿದೆ ಎಂದು ನೇಷನಲ್ ಬ್ರಾಡ್​ಕ್ಯಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (NBSA) ಕ್ರಮ ಕೈಗೊಳ್ಲಲು ಮುಂದಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.