ಮೈಸೂರು ರಾಜಮನೆತನದವರ ವಿರುದ್ಧ ಮುಖಭಂಗ ಅನುಭವಿಸಿದ ರಾಜ್ಯ ಸರ್ಕಾರ ಏನಿದು ವಿಷಯ ಗೊತ್ತಾ??

ನಮಸ್ಕಾರ ಸ್ನೇಹಿತರೇ ಮೈಸೂರು ಎನ್ನುವುದು ನಮ್ಮ ರಾಜ್ಯದ ಸಾಂಸ್ಕೃತಿಕ ರಾಜಧಾನಿಯಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ರಾಜಮನೆತನದ ಆಳ್ವಿಕೆ ಈಗ ಇಲ್ಲದಿದ್ದರೂ ಕೂಡ ಇಂದಿಗೂ ಕೂಡ ರಾಜ ಕುಟುಂಬಸ್ಥರನ್ನು ಜನರು ಗೌರವಿಸುತ್ತಾರೆ. ಇನ್ನೂ ಹಲವಾರು ವರ್ಷಗಳ ಕಾಲ ಮೈಸೂರಿನ ಬೆಟ್ಟದ ಬಳಿಯಿರುವ ಜಾಗದ ಕುರಿತಂತೆ ಮೈಸೂರಿನ ರಾಜವಂಶಸ್ಥರಿಗೆ ಹಾಗೂ ಸರ್ಕಾರಕ್ಕೂ ಹಗ್ಗಜಗ್ಗಾಟ ನಡೆಯುತ್ತಲೇ ಬಂದಿತ್ತು.

ಮೈಸೂರಿನ ಚಾಮುಂಡಿ ಬೆಟ್ಟದ ಪಾದ ದಲ್ಲಿದ್ದ ಕುರುಬರಹಳ್ಳಿ ಆಲನಹಳ್ಳಿ ಹಾಗೂ ಚೌಡಳ್ಳಿಯ 1536 ಎಕರೆ ಭೂಮಿಯನ್ನು ಮೈಸೂರಿನ ರಾಜ ಮನೆತನದವರು ಇದು ನಮಗೆ ಸೇರಿರುವ ಭೂಮಿ ಎಂದು ವಾದಿಸಿದರೆ ರಾಜ್ಯ ಸರ್ಕಾರ ಇದು ನಮಗೆ ಸೇರಿರುವ ಭೂಮಿ ಎಂಬುದಾಗಿ ವಾದಿಸುತ್ತಾ ಬಂದಿತ್ತು. ಈ ವಿಷಯದ ಕುರಿತಾಗಿ ಎರಡು ಕಡೆಯವರೆಗೂ ಕೂಡ ಹತ್ತು ವರ್ಷಗಳಿಂದ ಹೆಚ್ಚು ಹಗ್ಗಜಗ್ಗಾಟ ನಡೆಯುತ್ತದೆ ಬಂದಿತ್ತು. ಇನ್ನು ಈ ಹಿಂದೆ ಹೈಕೋರ್ಟ್ ಈ ವ್ಯಾಜ್ಯದ ತೀರ್ಪನ್ನು ರಾಜ ಮನೆತನದವರ ಪರವಾಗಿ ಎತ್ತಿಹಿಡಿದಿತ್ತು ಹಾಗೂ ರಾಜ ಮನೆತನದವರವರಿಗೆ ಖಾತೆ ಕಂದಾಯ ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು.

ಆದರೆ ಈ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸಿದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಮೊರೆ ಹೋಗಿತ್ತು. ಆದರೆ ಈಗ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿಂದಲೂ ಕೂಡ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಹೌದು ಗೆಳೆಯರೇ ಸುಪ್ರೀಂಕೋರ್ಟ್ ಕೂಡ ರಾಜ್ಯಸರ್ಕಾರದ ಕೋರಿಕೆಗೆ ಮನ್ನಣೆ ನೀಡದೆ ಹೈಕೋರ್ಟ್ ನೀಡಿರುವ ತೀರ್ಪನ್ನು ಎತ್ತಿಹಿಡಿದಿದೆ ಹಾಗೂ ರಾಜಮನೆತನದವರಿಗೆ ಖಾತೆ ಕಂದಾಯ ಮಾಡಿಕೊಡುವಂತೆ ಆದೇಶ ನೀಡಿದೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ರಾಜಮನೆತನದವರು ನ್ಯಾಯಾಲಯ ಹೇಳಿರುವ ಕಂದಾಯ ಖಾತೆ ಮಾಡಿಕೊಡದೆ ನ್ಯಾಯಾಂಗದ ತೀರ್ಪನ್ನು ಉಲ್ಲಂಘನೆ ಮಾಡಿರುವ ಕುರಿತಂತೆ ಮೊಕದ್ದಮೆ ಹೂಡಿದೆ. ಇದರ ವಿಚಾರಣೆ ಡಿಸೆಂಬರ್ 7 ರಂದು ನಡೆಯಲಿದೆ. ಒಂದು ವೇಳೆ ತೀರ್ಪನ್ನು ಪಾಲಿಸದಿದ್ದರೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಹಾಗೂ ಹಲವರಿಗೆ ಸಾಕಷ್ಟು ತೊಂದರೆ ಎದುರಾಗಲಿದೆ. ರಾಜ್ಯ ಸರ್ಕಾರದ ಮುಂದಿನ ನಡೆ ಏನೆಂಬುದು ಈಗಾಗಲೇ ಎಲ್ಲರಿಗೂ ಕೂಡ ಕುತೂಹಲಕರವಾಗಿದೆ.