ಹೆಣ್ಣು ಮಗು ಬೇಡವೆಂದು ದುರ್ಗಮ್ಮನ ಗುಡಿಯಲ್ಲಿ ಬಿಟ್ಟಳು. ಆದರೆ ಇನ್ನೂ ಹಾಲು ಕುಡಿಯದ ಕಂದನಿಗೆ ಆ ತಾಯಿ ದುರ್ಗಮ್ಮ ಮಾಡಿದ್ದೇನು ಗೊತ್ತಾ.. ನಿಜಕ್ಕೂ ಮೈ ಜುಮ್ಮೆನ್ನುತ್ತದೆ.

ನಮಸ್ಕಾರ ಸ್ನೇಹಿತರೇ ಹೆಣ್ಣು ಹುಟ್ಟಿದರೆ ಇಡೀ ಕುಟುಂಬಕ್ಕೆ ಶುಭವಾಗುತ್ತದೆ ಎಂಬ ಮಾತುಗಳನ್ನು ಕೂಡ ಕೇಳಿದ್ದೇವೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತುಗಳನ್ನು ಕೂಡ ನಾವು ಗಾದೆ ಮಾತುಗಳಲ್ಲಿ ಕೇಳಿರುತ್ತೇವೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೂಡ ಹೆಣ್ಣುಮಕ್ಕಳು ಪುರುಷರಿಗಿಂತ ತಾವೇನು ಕಮ್ಮಿ ಇಲ್ಲ ಎಂಬಂತೆ ಸಾಧನೆ ಮಾಡುತ್ತಿದ್ದಾರೆ. ಆದರೂ ಕೂಡ ಇತ್ತೀಚಿನ ದಿನಗಳಲ್ಲಿ ನಡೆದಿರುವ ಘಟನೆಯನ್ನು ನೋಡಿದರೆ ಖಂಡಿತವಾಗಿಯೂ ಬೇಸರವಾಗುತ್ತಿದೆ.

ಏನೆಂದರೆ ಹೆಣ್ಣು ಮಗು ಹುಟ್ಟಿದ ತಕ್ಷಣವೇ ಅದನ್ನು ದೇವರ ಬಳಿ ಇಟ್ಟು ಹೋಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹೆಣ್ಣು ಮಗು ಹುಟ್ಟಿದಾಕ್ಷಣ ಹೂವಿನ ಹಾದಿಯ ಮೂಲಕ ಸ್ವಾಗತಿಸಿರುವ ವಿಡಿಯೋವನ್ನು ನೋಡಿ ಸಂತೋಷಪಟ್ಟಿದ್ದೆವು. ಆದರೆ ಈಗ ಈ ವಿಡಿಯೋಗಳನ್ನು ನೋಡಿ ನಿಜಕ್ಕೂ ಬೇಸರವಾಗುತ್ತಿದೆ. ನಾವು ಈಗ ಹೇಳ ಹೊರಟಿರುವ ಕಥೆ ನಡೆದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಯ ದುರ್ಗಮ್ಮ ದೇವಾಲಯದಲ್ಲಿ. ಕಲ್ಲು ಮನಸ್ಸಿನ ತಾಯಿಯೊಬ್ಬಳು ಆಗಷ್ಟೇ ಹುಟ್ಟಿ ಹಾಲು ಕುಡಿಯಬೇಕಾಗಿದೆ ಹಸುಗೂಸನ್ನು ಬಟ್ಟೆಯಲ್ಲಿ ಸುತ್ತಿದ ದುರ್ಗಮ್ಮ ಗುಡಿ ಮುಂದೆ ಬುಟ್ಟಿಯಲ್ಲಿಟ್ಟು ಹೋಗಿದ್ದಾಳೆ.

ನಾವು ಹಲವಾರು ಸುದ್ದಿಗಳಲ್ಲಿ ಇಂತಹ ವಿಚಾರಗಳನ್ನು ಕೇಳಿರುತ್ತೇವೆ. ಮಕ್ಕಳನ್ನು ಕೆರೆಗೆ ಬಿಸಾಕುವುದು ಚರಂಡಿಗೆ ಎಸೆಯುವುದು ಕಸದಬುಟ್ಟಿಯಲ್ಲಿ ಇಡುವುದು ಹೇಗೆ ಹಲವಾರು ವಿಚಾರಗಳನ್ನು ನೀವು ಸುದ್ದಿಮಾಧ್ಯಮಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿರುತ್ತೀರಿ. ಆದರೆ ಅಂತಹ ಸಮಯದಲ್ಲಿ ಮಕ್ಕಳು ಉಳಿದಿರುವ ಉದಾಹರಣೆ ವಿರಳ. ಆದರೆ ಇಲ್ಲಿ ಸಮಾಧಾನಪಡುವ ವಿಷಯವೇನೆಂದರೆ ಮಗು ಉಳಿಯುವಂತೆ ಮಾಡಿದ್ದು ದುರ್ಗಮ್ಮ ದೇವಿಯ ಕೃಪೆಯಿಂದ ಹೇಳಬಹುದು. ಹಸಿವಿನಿಂದ ಅಳುತ್ತಿದ್ದ ಮಗುವನ್ನು ಉಳಿಸಲು ಆ ದೇವಸ್ಥಾನದ ಹಾದಿಯಿಂದ ಹೋಗುತ್ತಿದ್ದ ಒಬ್ಬ ವ್ಯಕ್ತಿಯನ್ನು ದುರ್ಗಮ್ಮ ದೇವಿಯೇ ಕರೆದಂತೆ ಆಗಿದೆ.

ಅದೇ ದೇವಸ್ಥಾನದ ದಾರಿಯಿಂದ ಹೋಗುತ್ತಿದ್ದ ಕೃಷ್ಣಮೂರ್ತಿ ಎಂಬವರ ಮೂಲಕ ಮಗುವನ್ನು ಕಾಪಾಡಿದ್ದಾರೆ ಆ ದುರ್ಗಮ್ಮದೇವಿ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಎಲ್ಲೋ ಹೋಗುತ್ತಿದ್ದವರು ಮಗುವಿನ ಅಳು ಕೇಳಿ ಅಲ್ಲಿಗೆ ಬಂದಿದ್ದೇನೆ ಎಂಬುದಾಗಿ ಕೃಷ್ಣಮೂರ್ತಿ ಅವರು ಹೇಳಿದ್ದಾರೆ. ಇನ್ನು ಹತ್ತಿರದಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಗುವಿಗೆ ಚಿಕಿತ್ಸೆಯನ್ನು ಮಾಡಿಸಿದ್ದಾರೆ.

ಸದ್ಯಕ್ಕೆ ಮಗುವನ್ನು ದತ್ತು ಪಡೆಯಲು ಹಲವಾರು ಜನರು ಮುಂದೆ ಬಂದಿದ್ದಾರೆ. ಈ ವಿಚಾರಗಳನ್ನು ಬಿಡಿ ಅನಾಥವಾಗಿ ದುರ್ಗಮ್ಮನ ಗುಡಿಯಲ್ಲಿ ಇದ್ದಂತಹ ಈ ಮಗುವಿಗೆ ದುರ್ಗಮ್ಮನೇ ಒಂದೊಳ್ಳೆ ಜೀವನ ಪಡೆಯಲು ಈಗ ದಾರಿ ತೋರಿಸಿದ್ದಾರೆ. ಆದರೆ ಆ ಹೆತ್ತತಾಯಿಯ ಕುರಿತಂತೆ ಮಾತನಾಡುವುದಕ್ಕೆ ಈಗಲೂ ಕೂಡ ಅಸಹ್ಯವಾಗುತ್ತದೆ.

ಯಾಕೆಂದರೆ ಮಗುವನ್ನು ಹುಟ್ಟಿಸಿ ಈಗ ಅನಾಥವಾಗಿ ಎಸೆದು ಹೋಗುವಂತಹ ಪರಿಸ್ಥಿತಿಯಾದರೂ ಏನಿತ್ತು. ಏನೇ ಇದ್ದರೂ ಕೂಡ ಮಗುವನ್ನು ಹುಟ್ಟಿಸಿದ ಮೇಲೆ ಅದಕ್ಕಾಗಿ ಜೀವನವನ್ನು ರೂಪಿಸುವುದು ಕೂಡ ಅವರ ಆದ್ಯ ಕರ್ತವ್ಯವಾಗಿದೆ. ಇದನ್ನು ಮಾಡದೇ ಹೀಗೆ ಮಾಡಿರುವುದು ನಿಜಕ್ಕೂ ಕೂಡ ವಿಷಾದನೀಯ ಮಾತು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹೆಚ್ಚಿಕೊಳ್ಳಿ.