ಜೂಜಿನ ಸಾಲಕ್ಕಾಗಿ ತನ್ನ ಮಗನನ್ನೇ ಮಾರಿದ ತಂದೆ, ಮೊದಲು ಒಪ್ಪಿಗೆ ಕೊಟ್ಟಿದ್ದ ತಾಯಿ ಆಮೇಲೆ ಮಾಡಿದ್ದೇನು ಗೊತ್ತೇ?? ಇದಪ್ಪ ಟ್ವಿಸ್ಟ್ ಅಂದ್ರೆ.

ನಮಸ್ಕಾರ ಸ್ನೇಹಿತರೇ ನಾವು ಇತ್ತೀಚಿನ ವರ್ಷಗಳಲ್ಲಿ ಎಂತೆಂತಹ ವಿಚಿತ್ರವಾದ ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಈಗ ನಾವು ಹೇಳಲು ಹೊರಟಿರುವ ಸುದ್ದಿ ಖಂಡಿತವಾಗಿ ನಿಮ್ಮ ಮನಸ್ಸಿನಲ್ಲಿ ಸದಾಕಾಲ ಉಳಿಯೋದಂತೂ ಗ್ಯಾರಂಟಿ. ಯಾಕೆಂದರೆ ಈ ಸುದ್ದಿ ಅಷ್ಟೊಂದು ವಿಚಿತ್ರವಾಗಿದೆ. ಎಷ್ಟೋ ಜನ ನಮ್ಮ ಭಾರತ ದೇಶದಲ್ಲಿ ಮಕ್ಕಳು ಹುಟ್ಟಿಲ್ಲ ಎಂಬ ಕಾರಣಕ್ಕಾಗಿ ದೇಶದ ಉದ್ದಗಲಕ್ಕೂ ಕೂಡ ದೇವಸ್ಥಾನಗಳ ತೀರ್ಥಯಾತ್ರೆ ಮಾಡಿ ದೇವರಿಗೆ ಹರಕೆಯನ್ನು ಹೊರುತ್ತಾರೆ. ಆದರೆ ಇಲ್ಲೊಬ್ಬ ಮಹಾನುಭಾವ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ಕೂಡ ಅಸಹ್ಯ ಎಂಬ ಭಾವನೆ ಮೂಡುತ್ತದೆ. ಈ ಪ್ರಕರಣ ನಡೆದಿರುವುದು ನಮ್ಮ ನೆರೆಯ ರಾಜ್ಯ ವಾಗಿರುವ ತಮಿಳು ನಾಡಿನ ತಿರುಚಿ ಜಿಲ್ಲೆಯಲ್ಲಿ.

ಅಬ್ದುಲ್ ಕಲಾಂ ಎನ್ನುವ ವ್ಯಕ್ತಿ ತನ್ನ ಪತ್ನಿಯಾಗಿರುವ ಕರುಣಿಶಾ ಜೊತೆಗೆ ಹಾಗೂ ಐದು ಮಕ್ಕಳ ಜೊತೆಗೆ ವಾಸಿಸುತ್ತಿದ್ದಾನೆ. ಐದನೇ ಮಗ ಇತ್ತೀಚಿಗಷ್ಟೇ ಕೆಲವು ತಿಂಗಳ ಹಿಂದೆ ಹುಟ್ಟಿದ್ದು. ಈತ ಕೂಲಿ ಕಾರ್ಮಿಕರಾಗಿದ್ದು ಜೂಜಾಟದ ಕೆಟ್ಟ ಚಟ ಕೂಡ ಈತನಲ್ಲಿದೆ. ಈತ ಕೂಲಿಕಾರ್ಮಿಕ ನಾಗಿದ್ದರೂ ಕೂಡ ಜೂಜಾಟ ಕ್ಕಾಗಿ ಸ್ನೇಹಿತರು ಹಾಗೂ ಸಂಬಂಧಿಕರಿಂದ ಹಾಗೂ ಇತರರಿಂದ ಸಾಲವನ್ನು ಪಡೆದು ಆಡುತ್ತಿದ್ದ. ಈತ ಒಮ್ಮೆ ಜೂಜಾಟ ಕ್ಕಾಗಿ ಆರೋಕಿರಾಜ್ ಎನ್ನುವಾತನ 80 ಸಾವಿರ ರೂಪಾಯಿ ಸಾಲವನ್ನು ಪಡೆದಿದ್ದ. ಅಬ್ದುಲ್ ಸಲಾಂ ಸರಿಯಾದ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಲು ವಿಫಲನಾಗುತ್ತಾನೆ. ಹೀಗಾಗಿ ಕೊನೆಯ ಮಗನನ್ನು ಮಾಡುವ ಡೀಲ್ ಇವರಿಬ್ಬರ ನಡುವೆ ನಡೆಯುತ್ತದೆ.

ಅಬ್ದುಲ್ ಸಲಾಂ ತನ್ನ ಪತ್ನಿಯನ್ನು ಕೂಡ ಒಪ್ಪಿಸಿ ಕೊನೆಯ ಮಗನನ್ನು ಅಲೋಕಿರಾಜ್ ಗೆ ಮಾರುತ್ತಾನೆ. ಇಷ್ಟು ಮಾತ್ರವಲ್ಲದೆ ಹೆಚ್ಚುವರಿಯಾಗಿ ಹಣವನ್ನು ಕೂಡ ಪಡೆದುಕೊಳ್ಳುತ್ತಾನೆ. ಆದರೆ ಕೆಲವೇ ದಿನಗಳ ನಂತರ ಮತ್ತೆ ಗಂಡ-ಹೆಂಡತಿಯ ನಡುವೆ ಮಗುವಿಗಾಗಿ ಜಗಳ ನಡೆಯುತ್ತದೆ. ಕರುಣಿಶಾ ಮತ್ತೆ ತನ್ನ ಗಂಡನ ಬಳಿ ಮಗುವನ್ನು ಕರೆತರಲು ಕೇಳಿದ್ದಾಳೆ. ಇದಕ್ಕೆ ಅಬ್ದುಲ್ ಸಲಾಂ ನಿರಾಕರಿಸಿದ್ದು ಹೆಂಡತಿಯ ಕೋಪಕ್ಕೆ ಕಾರಣವಾಗಿದ್ದು ಆಕೆ ಪೊಲೀಸ್ ಠಾಣೆಗೆ ಹೋಗಿ ಗಂಡನ ವಿರುದ್ಧ ದೂರನ್ನು ದಾಖಲಿಸಿದ್ದಾಳೆ. ಇದರ ಹಿನ್ನೆಲೆಯಲ್ಲಿ ಅಬ್ದುಲ್ ಸಲಾಂ ಆರೋಖಿರಾಜ್ ಹಾಗೂ ಆತನ ಸಂಬಂಧಿ ಆಗಿರುವ ಹೊನ್ನೂರ್ ಹಾಗೂ ಮತ್ತೆ ಮೂವರು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಘಟನೆಯನ್ನು ಕೇಳಿದಾಗ ನಿಮಗೆ ಏನು ಅನ್ನಿಸುತ್ತಿದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.