ಮನೆಯಲ್ಲಿಯೇ ಕುಳಿತು ಯಾವುದೇ ಗ್ಯಾರಂಟಿ ಇಲ್ಲದೇ, ಬರೋಬ್ಬರಿ 5 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ?? ಅದು ಕೇವಲ ಮೊಬೈಲ್ ನಲ್ಲಿ.

ನಮಸ್ಕಾರ ಸ್ನೇಹಿತರೇ, ಕೆಲವೊಮ್ಮೆ ನಮಗೆ ತುರ್ತು ಹಣದ ಅವಶ್ಯಕತೆ ಇರುತ್ತದೆ. ಆದರೆ ಅಷ್ಟು ಬೇಗ ಸಾಲ ಸಿಗುವುದೂ ಸುಲಭವಲ್ಲ, ಬ್ಯಾಂಕ್ ಗಳಲ್ಲಿ ಅವರು ಕೇಳುವ ದಾಖಲೆಗಳನ್ನು ಸಲ್ಲಿಸಿ ಸಾಲಪದೆಯುವವರೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಅಥವಾ ಕೆಲವೊಮ್ಮೆ ಸಾಲ ಸಿಗುವುದೂ ಇಲ್ಲ. ಆದರೆ ಚಿಂತೆ ಬೇಡ. ಇದೀಗ ನೀವು ನಿತ್ಯವೂ ಹಣ ವರ್ಗಾವಣೆ ಮಾಡಲು ಬಳಸುವ ಪೆಟಿಎಂ ಮೂಲಕವೂ ಸಾಲ ಪಡೆಯಬಹುದು. ಹೇಗೆಅಂತಾನಾ! ಬನ್ನಿ ನೋಡೋಣ.

ಹೌದು, ಇತ್ತೀಚಿಗೆ ಡಿಜಿಟಲ್ ಹಣ ಪಾವತಿ ವೇದಿಕೆಯಿಂದ ವಿವಿಧ ಸಾಲ ಸೌಲಭ್ಯಗಳನ್ನು ಕೂಡ ಒದಗಿಸಲಾಗುತ್ತಿದೆ. ಪೆಟಿಎಂ ಸಣ್ಣ ಉದ್ಯಮಿಗಳಿಗೆ ಉತ್ತಮ ಸಾಲ ಸೌಲಭ್ಯವನ್ನು ನೀಡುತ್ತದೆ. ಸಣ್ಣ ವ್ಯಾಪಾರಿಗಳಿಗಾಗಿ ಪೆಟಿಎಂ ಸುಮಾರು 5 ಲಕ್ಷದವರೆಗಿನ ಸಾಲವನ್ನು ನೀಡುತ್ತದೆ. ಮುಖ್ಯವಾಗಿ ನೀವು ಸಾಲ ತೆಗೆದುಕೊಳ್ಳಲು ಇಲ್ಲಿ ಯಾವುದೇ ಗ್ಯಾರಂಟಿ ಅಡಮಾನ ಬೇಕಾಗಿಲ್ಲ. ಜೊತೆಗೆ ನೀವು ಈ ಸಾಲವನ್ನು ಈಎಂಐ ಮೂಲಕ ಪಾವತಿಸಬಹುದು.

ಗ್ರಾಹಕರಿಗೆ ಈ ಸೌಲಭ್ಯವನ್ನು ಒದಗಿಸಲು ಪೆಟಿಎಂ ವಾಣಿಜ್ಯ ಬ್ಯಾಂಕುಗಳು ಮತ್ತು ಎನ್ ಬಿ ಎಫ್ ಸಿಗಳು ಪಾಲುದಾರಿಕೆಯನ್ನು ಹೊಂದಿದೆ. ಸಣ್ಣ ವ್ಯಾಪಾರಕ್ಕಾಗಿ ಸಾಲದ ಅಗತ್ಯವಿದ್ದರೆ, ಪೆಟಿಎಂ ಅಪ್ಲಿಕೇಶನ್‌ನಲ್ಲಿ ‘ಮರ್ಚೆಂಟ್ ಲೆಂಡಿಂಗ್ ಪ್ರೋಗ್ರಾ’ಗೆ ಹೋಗಬೇಕು. ಅಲ್ಲಿ ಪೆಟಿಎಂ ದೈನಂದಿನ ವಹಿವಾಟಿನ ಆಧಾರದ ಮೇಲೆ ವ್ಯಾಪಾರಿಯ ಕ್ರೆಡಿಟ್ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ದೈನಂದಿನ ಪೇಮೆಂಟ್ ಮೂಲಕ ನೀವು ಸಾಲವನ್ನು ಮರುಪಾವತಿ ಮಾಡಬೇಕಗುತ್ತದೆ. ಸಾಲಕ್ಕಾಗಿ ನೀವು ಎಲ್ಲಿಯೂ ಅಲೆಯುವ ಅಗತ್ಯವಿಲ್ಲ. ನೇರವಾಗಿ ಆನ್ ಲೈನ್ ಮೂಲಕವೇ ಸಂಪೂರ್ಣ ಪ್ರಕ್ರಿಯೆಯನ್ನು ಮುಗಿಸಬಹುದು. ಇನ್ನು ಸಾಲವನ್ನು ಅವಧಿಗಿಂತ ಮೊದಲೇ ಮುಗಿಸುವುದಿದ್ದರೂ ನಿಮಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ.

ಹಾಗಾದರೆ ಪೆಟಿಎಂನಿಂದ ಸಾಲ ಪಡೆಯುವುದು ಹೇಗೆ? ಮೊದಲು, ವ್ಯಾಪಾರಕ್ಕಾಗಿ ಪೆಟಿಎಂ ನಿಂದ ಸಾಲ ಬೇಕಿದ್ದರೆ ಪೆಟಿಎಂ ಅಪ್ಲಿಕೇಶನ್‌ನ ಹೋಮ್ ಸ್ಕ್ರೀನ್‌ನಲ್ಲಿ ಕಾಣುವ ‘ಬಿಸಿನೆಸ್ ಲೋನ್’ ಐಕಾನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಬೇಕಾದ ಲೋನ್ ಆಯ್ಕೆಯನ್ನು ಮಾಡಬೇಕು. ಸಾಲದ ಮೊತ್ತವನ್ನು ಆಯ್ಕೆ ಮಾಡಿದ ನಂತರ ನೀವು ವಿತರಣಾ ಮೊತ್ತ, ಪಾವತಿಸಬೇಕಾದ ಒಟ್ಟು ಮೊತ್ತ, ದೈನಂದಿನ ಕಂತು ಇತ್ಯಾದಿಗಳ ಮಾಹಿತಿಯನ್ನು ಪರಿಶೀಲಿಸಿ. ಇಲ್ಲಿ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ ನಂತರ, ‘Get Started’ ಬಟನ್ ಒತ್ತಿ.

ಸಾಲದ ಅರ್ಜಿಯನ್ನು ಪೂರ್ಣಗೊಳಿಸಲು ಸಿಕೆವಾಯ್ ಸಿ ಯೊಂದಿಗೆ ನಿಮ್ಮ ಕೆ ವಾಯ್ ಸಿ ಡೇಟಾವನ್ನು ಸಲ್ಲಿಸಬೇಕು. ನಂತರ ನಿಮ್ಮ ಪ್ಯಾನ್ ನಂ., ಹುಟ್ಟಿದ ದಿನಾಂಕ ಮತ್ತು ಇ-ಮೇಲ್ ಮುಂತಾದ ಮಾಹಿತಿಯನ್ನು ಇಲ್ಲಿ ನಮೂದಿಸಬೇಕು. ಕೆ ವಾಯ್ ಸಿ ಪರಿಶೀಲನೆಯ ನಂತರ ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿ. ಸಾಲದ ಅನುಮೋದನೆ ಪಡೆದ ನಂತರ ಹಣ ಕೂಡಲೇ ನಿಮ್ಮ ಖಾತೆಗೆ ಬರುತ್ತದೆ. ಹೌದು ಈಗ ಸಾಲ ಪಡೆಯಲು ಎಲ್ಲೆಲ್ಲೋ ಅಡ್ಡಾಡಬೇಕಿಲ್ಲ, ಕಷ್ಟಪಡಬೇಕಿಲ್ಲ, ನಿಮ್ಮ ವ್ಯಾಪಾರಕ್ಕಾಗಿ ಸುಲಭವಾಗಿ ಪೆಟಿಎಂ ನಂಥ ವೇದಿಕೆಗಳು ಸಾಲ ಸೌಲಭ್ಯಗಳನ್ನು ನೀಡುತ್ತವೆ. ಅಗತ್ಯವಿದ್ದಲ್ಲಿ ಇದರ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದು.