ವಿಶೇಷ ಎಲೆಕ್ಟ್ರಿಕ್ ಸ್ಕೂಟರ್: ಒಮ್ಮೆ ಚಾರ್ಜ್ ಮಾಡಿದ್ರೆ ಮೈಲೇಜ್ ಎಷ್ಟು ಗೊತ್ತೇ? ಇದರ ಬೆಲೆಯೂ ಕಡಿಮೇನೆ. ಎಷ್ಟೆಲ್ಲಾ ವಿಶೇಷತೆಗೆ ಬೆಲೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಇಂಧನ ವಾಹನಗಳಿಗಿಂತ ಇ ವಾಹನಗಳಿಗೆ ಅಂದರೆಎ ಇಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸರ್ಕಾರವೂ ಕೂಡ ಇಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರಲು ಅವಕಾಶ ಮಾಡಿಕೊಡುತ್ತಿದೆ. ಹಾಗಾಗಿ ಈಗಾಗಲೇ ಇಲೆಕ್ಟ್ರಿಕ್ ದ್ವಿಚಕ್ರವಾಹನಗಳಲ್ಲಿ ನಿಮಗೆ ಸಾಕಷ್ಟು ಆಯ್ಕೆಗಳೂ ಲಭ್ಯ. ನಾವಿಂದು ಹೇಳುತ್ತಿರುವುದು ಓಕಿನಾವಾ ಕಂಪನಿಯ ಎಲೆಕ್ಟ್ರಿಕ್ ವಾಹನದ ಬಗ್ಗೆ!

ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಎಲೆಕ್ಟ್ರಿಕ್ ವಾಹನ ತಯಾರಿಕ ಕಂಪನಿಯಾಗಿರುವ ಒಕಿನೊವಾ ಗ್ರಾಹಕರಿಗೆ ಕೈಗೆಟುಕುವ ಮತ್ತು ದೀರ್ಘ-ಶ್ರೇಣಿಯ ಆಯ್ಕೆಗಳುಳ್ಳ ಸ್ಕೂಟರ್ ಗಳನು ಒದಗಿಸುತ್ತಿದೆ. ಈಗ ಕಂಪನಿಯು ಒಕಿ90 ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ. ಮುಂದಿನ ತಿಂಗಳು ಅಂದರೆ 24 ಮಾರ್ಚ್ 2022 ರಂದು ಭಾರತದಲ್ಲಿ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಲಭ್ಯವಾಗಲಿದೆ.

ಒಕಿನೊವಾ 90 ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಗ್ರಾಹಕರಿಗೆ ಎರಡು ಬಗೆಯ ಆಯ್ಕೆಯನ್ನು ನೀಡಲಿದೆ. ಓಕಿನಾವಾ ಪೋರ್ಟ್ಪೊಲಿಯೊದಲ್ಲಿ ಕಡಿಮೆ-ವೇಗ ಮತ್ತು ಹೆಚ್ಚಿನ ವೇಗದ ಸ್ಕೂಟರ್ಗಳಾಗಿ ತಯಾರಿಸಲಾಗಿದೆ. ಈಗಾಗಲೇ ಈ ಸ್ಕೂಟರ್ನ ಪರೀಕ್ಷೆ ನಡೆಸಲಾಗಿದ್ದು, ಆಕರ್ಷಕ ಮಾದರಿಯಲ್ಲಿ ಸ್ಕೂಟರ್ ಬಿಡುಗಡೆಯಾಗಿದೆ. ಓಕಿನಾವಾ ಈ ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಯತೆಯನ್ನು ನೋಡುವುದಾದರೆ, ವಿಶಾಲವಾದ ಮುಂಭಾಗದ ಕಾಯಿಲ್ ಮತ್ತು ಎಲ್ ಇ ಡಿ ಸೂಚಕಗಳು, ಎಲ್ ಇ ಡಿ ಹೆಡ್ ಲ್ಯಾಂಪ್ ಗಳು ಮತ್ತು ಎಲ್ ಇ ಡಿ ಡೇಟೈಮ್ ರನ್ನಿಂಗ್ ಲೈಟ್ ಗಳನ್ನು ಹೊಂದಿದೆ. ಎತ್ತರಿಸಿದ ಹಿಂಬದಿ ಸೀಟಿನ ಜೊತೆಗೆ ದಪ್ಪನಾದ ಗ್ರಾಬ್ ರೈಲ್, ಅಲಾಯ್ ವೀಲ್ ಗೌ ಜನರಿಗೆ ಉತ್ತಮ ರೈಡಿಂಗ್ ಅನುಭವವನ್ನು ಕೊಡಲಿದೆ.

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗ್ರಾಹಕರಿಗೆ ಸುಲಭ ಪ್ರಯಾಣಕ್ಕೆ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಬ್ಯಾಟರಿ ಚಾರ್ಜ್ ವ್ಯವಸ್ಥೆಯೂ ಉತ್ತಮವಾಗಿದೆ ಎಂದು ಹೇಳಿದ್ ಕಂಪನಿ.
ಹೊಸ ಇ-ಸ್ಕೂಟರ್ ಇ-ಸಿಮ್ ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಸಂಪರ್ಕಿತ ವೈಶಿಷ್ಟ್ಯಗಳನ್ನು ಗ್ರಾಹಕರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದು. ಇದರ ಮೂಲಕ, ಟರ್ನ್-ಬೈ-ಟರ್ನ್ ನೇವಿಗೇಷನ್, ವೆಹಿಕಲ್ ಅಲರ್ಟ್, ಜಿಯೋ ಫೆನ್ಸಿಂಗ್, ಇ-ಕಾಲ್, ಡಯಾಗ್ನೋಸ್ಟಿಕ್ಸ್ ಮತ್ತು ರೈಡ್ ಬಿಹೇವಿಯರ್ ಅನಾಲಿಸಿ ಮೊದಲಾದ ಸೌಲಭ್ಯಗಳು ಲಭ್ಯ.

ಇನ್ನು ಈ ಸ್ಕೂಟರ್ ನ ಸಾಮರ್ಥ್ಯದ ಬಗ್ಗೆ ಕಂಪನಿಯು ಯಾವುದೇ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ, ಇದು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಕೊಂಡಿದೆ. ಇದರ ಗರಿಷ್ಠ ವೇಗ ಗಂಟೆಗೆ 80 ಕಿಮೀ ಆಂದಾಜಿಸಲಾಗಿದ್ದು, ಒಂದು ಬಾರಿ ಚಾರ್ಜ ನಲ್ಲಿ 150 ಕಿಮೀ ವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ. ಆದರೆ ಒಕಿ 90 ಇತರ ಇಲೆಕ್ಟ್ರಿಕ್ ಸ್ಕೂಟರ್ ಗೆ ಉತ್ತಮ ಪೈಪೋಟಿ ನೀಡಲಿದೆ ಎನ್ನುವುದರಲ್ಲಿ ನೋ ಡೌಟ್!