ಕೇವಲ 20 ಸಾವಿರ ಹೂಡಿಕೆ ಮಾಡಿ ವರ್ಷಕ್ಕೆ ನಾಲ್ಕು ಲಕ್ಷ ಗಳಿಸುವ ಉದ್ಯಮವನ್ನು ಹೇಗೆ ಮಾಡಬೇಕು ಗೊತ್ತೇ??

ಬ್ಯುಸಿನೆಸ್ ವ್ಯವಹಾರ ಮಾಡಬೇಕು ಎನ್ನುವ ಪ್ಲಾನ್ ಬಹುಶಃ ಪ್ರತಿಯೊಬ್ಬರಿಗು ಇರುತ್ತದೆ. ಆದರೆ ಬಂಡವಾಳ ಹಾಕಲು ಹಣ ಇಲ್ಲದೆ ಹಿಂದಕ್ಕೆ ಹೆಜ್ಜೆ ಇಡುತ್ತಾರೆ. ಇಂದು ನಾವು ಹೇಳುವ ವ್ಯವಹಾರಕ್ಕೆ ನಿಮಗೆ ಹೆಚ್ಚಿನ ಹಣ ಬೇಕಾಗಿಲ್ಲ, ಸ್ವಲ್ಪ ವ್ಯವಸಾಯ ಭೂಮಿ ಇದ್ದರೆ ಸಾಕು. ಗ್ರಾಮದಲ್ಲಿ ವಾಸ ಮಾಡುವವರಿಗೆ ವ್ಯವಸಾಯ ಮಾಡಲು ಭೂಮಿ ಇದ್ದೆ ಇರುತ್ತದೆ, ಒಂದು ವೇಳೆ ನಿಮ್ಮ ಬಳಿ ಭೂಮಿ ಇಲ್ಲದೆ ಹೋದರೆ, ಭೋಗ್ಯಕ್ಕೆ ನೀವು ಭೂಮಿಯನ್ನು ತೆಗೆದುಕೊಳ್ಳಬಹುದು. ಈ ಲಾಭ ತರುವ ವ್ಯವಹಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಹ ಕೆಲವು ಪ್ರಸಂಗಗಳಲ್ಲಿ ತಿಳಿಸಿದ್ದಾರೆ.

ಇಂದು ನಾವು ನಿಮಗೆ ತಿಳಿಸುವುದು ಲೆಮನ್ ಗ್ರಾಸ್ ಸಾಗುವಳಿ ಮಾಡುವ ಬಗ್ಗೆ. ಒಂದು ಹೆಕ್ಟರ್ ಭೂಮಿಯಲ್ಲಿ ಲೆಮನ್ ಗ್ರಾಸ್ ಬೆಳೆಸುವುದರಿಂದ ಒಂದು ವರ್ಷಕ್ಕೆ ಸುಲಭವಾಗಿ 4 ಲಕ್ಷ ರೂಪಾಯಿ ಗಳಿಸಬಹುದು. ಲೆಮನ್ ಗ್ರಾಸ್ ಬೆಳೆಸುವುದರಿಂದ ಸುಲಭವಾಗಿ ನೀವು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಲೆಮನ್ ಗ್ರಾಸ್ ಗಿಡ ಒಂದು ರೂಪಾಯಿಗೆ ಸಿಗುತ್ತದೆ, ಇವುಗಳನ್ನು ಜಂತು ಹುಳಗಳು ತಿನ್ನುವುದಿಲ್ಲ. ಹುಳಗಳು ಹಿಡಿಯುವುದಿಲ್ಲ ಎನ್ನುವುದು ಇದರ ವಿಶಿಷ್ಟತೆಯಾಗಿದೆ. ಮಾರುಕಟ್ಟೆಯಲ್ಲಿ ಲೆಮನ್ ಗ್ರಾಸ್ ಗೆ ಬಹಳ ಬೇಡಿಕೆ ಇದೆ.

ಬ್ಯೂಟಿ ಪ್ರಾಡಕ್ಟ್ಸ್, ಸೋಪ್ ಗಳು, ಎಣ್ಣೆ ಮತ್ತು ಇನ್ನಿತರ ವಸ್ತುಗಳನ್ನು ತಯಾರಿಸಲು ಲೆಮನ್ ಗ್ರಾಸ್ ಬಳಸುತ್ತಾರೆ ಹಲವು ಕಂಪನಿಗಳು. ಬರಪೀಡಿತ ಪ್ರದೇಶಗಳಲ್ಲಿ ಸಹ ಲೆಮನ್ ಗ್ರಾಸ್ ಗಿಡಗಳನ್ನು ನೆಡಬಹುದು. ಈ ಗಿಡಗಳಿಗೆ ಫರ್ಟಿಲೈಜರ್ ಗಳ ಅವಶ್ಯಕತೆ ಇಲ್ಲ. ಒಂದು ಸಾರಿ ನಾಟಿ ಮಾಡಿದರೆ, 5 ರಿಂದ 6 ವರ್ಷಗಳ ವರೆಗೂ ಈ ಬೆಳೆ ಇರುತ್ತದೆ. ಲೆಮನ್ ಗ್ರಾಸ್ ನೆಡಲು ಅನುಕೂಲವಾದ ಸಮಯ ಫೆಬ್ರವರಿಯಿಂದ ಜುಲೈವರೆಗೂ ಚೆನ್ನಾಗಿರುತ್ತದೆ. ಒಂದು ವರ್ಷಕ್ಕೆ 3 ರಿಂದ 4 ಸಾರಿ ಲೆಮನ್ ಗ್ರಾಸ್ ಗಿಡವನ್ನು ನೆಡಲಾಗುತ್ತದೆ. ನಾಟಿ ಮಾಡಿ ಮೂರರಿಂದ ನಾಲ್ಕು ತಿಂಗಳ ನಂತರ ಮೊದಲ ಕೊಯ್ಲು ಬರುತ್ತದೆ. ಇದರ ಪರಿಣಾಮದ ತೈಲದ ಬೆಲೆ, ಒಂದು ಕೆಜಿಗೆ 1,000 ರೂಪಾಯಿಯಿಂದ 1,500 ರೂಪಾಯಿ ವರೆಗೆ ಇರುತ್ತದೆ. ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಲಿ ಲೆಮನ್ ಗ್ರಾಸ್ ಬೆಳೆಯುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಲೆಮನ್ ಗ್ರಾಸ್ ಕೃಷಿ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ನೀವು ಸಹ ಪ್ರಾರಂಭಿಸಬಹುದು.