ಗಂಡ ಹೆಂಡತಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತ ಎಂಜಾಯ್ ಮಾಡಿಕೊಂಡು ಇರಬೇಕು ಎಂದರೆ ಎಷ್ಟು ವಯಸ್ಸಿನ ಅಂತರ ಇರ್ಬೇಕು ಗೊತ್ತೇ?

ಮದುವೆ ಎನ್ನುವುದು ಒಂದು ಸುಂದರವಾದ ಅನುಬಂಧ. ಗಂಡು ಹೆಣ್ಣು ಇಬ್ಬರ ಮನಸ್ಸುಗಳನ್ನು ಒಂದುಗೂಡಿಸುವ ಬೆಸುಗೆ. ನಾವೆಲ್ಲರೂ ನೋಡಿರುವ ಹಾಗೆ ಪ್ರತಿ ಮದುವೆಯಲ್ಲೂ ಗಂಡು ಮತ್ತು ಹೆಣ್ಣಿನ ನಡುವೆ ವಯಸ್ಸಿನ ವ್ಯತ್ಯಾಸ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಹುಡುಗರಿಗಿಂತ ಹುಡುಗಿಯರು 2 ರಿಂದ 10 ವರ್ಷಗಳು ಚಿಕ್ಕವರಾಗಿರುತ್ತಾರೆ. ಅಷ್ಟು ವಯಸ್ಸಿನ ವ್ಯತ್ಯಾಸ ಇರುವಂತಹ ಹುಡುಗಿಯರನ್ನು ಗಂಡು ಮಕ್ಕಳಿಗೆ ತಂದೆ ತಾಯಿಯರು ಹುಡುಕಿರುತ್ತಾರೆ. ಸಾಮಾನ್ಯವಾಗಿ ಗಂಡು ಹೆಣ್ಣಿನ ನಡುವೆ ಎಷ್ಟು ವಯಸ್ಸಿನ ವ್ಯತ್ಯಾಸ ಇದ್ದರೆ ಇಬ್ಬರ ಜೀವನ ಚೆನ್ನಾಗಿರುತ್ತದೆ ಗೊತ್ತಾ? ತಿಳಿಸುತ್ತೇವೆ ನೋಡಿ..

ಗಂಡು ಹೆಣ್ಣು ಮದುವೆಯಾಗಲು ಸಾಕಷ್ಟು ಕಾರಣಗಳಿರುತ್ತವೆ. ಕೆಲವರು ಪ್ರೀತಿಸಿ ಮದುವೆಯಾದರೆ, ಇನ್ನು ಕೆಲವರು ತಂದೆ ತಾಯಿ ನೋಡಿ ಒಪ್ಪಿದವರ ಜೊತೆ ಮದುವೆಯಾಗುತ್ತಾರೆ. ಸಾಮಾನ್ಯವಾಗಿ ನೀವು ಗಮನಿಸಿದರೆ, ಗಂಡ ಹೆಂಡತಿಯರಲ್ಲಿ ಹುಡುಗಿ ಚಿಕ್ಕವಳಾಗಿದ್ದರು, ಬಹಳ ಮೆಚೂರ್ ಆಗಿ ಯೋಚನೆ ಮಾಡುವ ಸ್ವಭಾವ ಹೊಂದಿರುತ್ತಾಳೆ. ಹೆಣ್ಣಿನ ಯೋಚನಾ ಶಕ್ತಿ ಹಾಗಿರುತ್ತದೆ. ಮದುವೆಯಾಗಿ ಗಂಡ, ಸಂಸಾರ ಎನ್ನುವ ಜವಾಬ್ದಾರಿ ಬಂದರೆ, ಹೆಣ್ಣು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಪಕ್ವತೆ ಪಡೆದುಕೊಳ್ಳುತ್ತಾಳೆ. ತನ್ನ ಗಂಡನನ್ನು ಸರಿದಾರಿಗೆ ಕರೆದುಕೊಂಡು ಬರುತ್ತಾಳೆ. ಹುಡುಗರ ಸ್ವಭಾವ ಸ್ವಲ್ಪ ಬೇರೆಯದೇ ರೀತಿ. ಮದುವೆಗಿಂತ ಮೊದಲು, ಎಷ್ಟೇ ಪೋಲಿಯಾಗಿದ್ದರೂ ಸಹ ಮದುವೆ ನಂತರ ಹೆಂಡತಿ ಬರುತ್ತಾಳೆ..

ಹೆಂಡತಿ ಬಂದ ಮೇಲೆ ಹುಡುಗರ ಮೇಲಿರುವ ಜವಾಬ್ದಾರಿ ಹೆಚ್ಚಾಗುತ್ತದೆ. ಜವಾಬ್ದಾರಿ ಹೆಚ್ಚಾಗಿ, ಅವರಲ್ಲಿ ಸಹ ಜಾಣ್ಮೆ ಶುರುವಾಗುತ್ತದೆ. ಹುಡುಗ ಹುಡುಗಿಯ ನಡುವೆ ಸಾಮಾನ್ಯವಾಗಿ, 3 ರಿಂದ 5 ವರ್ಷಗಳ ವಯಸ್ಸಿನ ವ್ಯತ್ಯಾಸ ಇದ್ದರೆ ಉತ್ತಮವಾಗಿರುತ್ತದೆ, ಇಬ್ಬರ ನಡುವೆ ಸಾಮರಸ್ಯ ಚೆನ್ನಾಗಿರುತ್ತದೆ, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಹುಡುಗನಿಗಿಂತ ಹುಡುಗಿ ತುಂಬಾ ಚಿಕ್ಕ ವಯಸ್ಸಿನವರಾದರೆ ಅಥವಾ ಹುಡುಗನಿಗಿಂತ ಹುಡುಗಿ ವಯಸ್ಸಿನಲ್ಲಿ ದೊಡ್ಡವರಾದರೆ  ಅಷ್ಟೇನು ಚೆನ್ನಾಗಿರುವುದಿಲ್ಲ ಎಂದು ಹೇಳಲಾಗುತ್ತದೆ. ನೀವು ಮದುವೆಯಾಗುವ ಮೊದಲು, ಈ ಅಂಶಗಳನ್ನು ತಲೆಯಲ್ಲಿಟ್ಟುಕೊಂಡು ಯೋಚನೆ ಮಾಡಿ.