ನೀವು ಒಂದು ವೇಳೆ ಫೋನ್ ಖರೀದಿ ಮಾಡುವ ಆಲೋಚನೆ ಇದ್ದರೇ ಈಗಲೇ ಖರೀದಿಸಿ, ಯಾಕೆ ಗೊತ್ತೇ?? ಹಿಂದಿರುವ ಬಲವಾದ ಕಾರಣವೇನು ಗೊತ್ತೇ??

ನಿಮಗೆ ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡುವ ಪ್ಲಾನ್ ಹೊಂದಿದ್ದರೆ, ಈಗಲೇ ಖರೀದಿ ಮಾಡುವುದು ಒಳ್ಳೆಯದು. ಯಾಕಂದರೆ ಈ ವರ್ಷದ ದ್ವಿತೀಯಾರ್ಧದಲ್ಲಿ ಸ್ಮಾರ್ಟ್ ಫೋನ್ ಬೆಲೆಗಳು ಹೆಚ್ಚಾಗಲಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಮೊಬೈಲ್ ಫೋನ್ ಗಳ ಬೆಲೆಯಲ್ಲಿ ಶೇ.15 ರಿಂದ 20 ರಷ್ಟು ಏರಿಕೆಯಗಲಿದೆ ಎಂದು ಸಧ್ಯಕ್ಕೆ ಮಾಹಿತಿ ಸಿಕ್ಕಿದೆ. ಸ್ಮಾರ್ಟ್ ಫೋನ್ ಗಳನ್ನು ತಯಾರು ಮಾಡಲು ಮುಖ್ಯವಾಗಿ ಬೇಕಾಗಿರುವ ಪ್ರೊಸೆಸರ್ ಚಿಪ್ ಬೆಲೆಯಲ್ಲಿ ಏರಿಕೆ ಆಗಲಿದೆಯಂತೆ. ಪ್ರೊಸೆಸರ್ ಗಳನ್ನು ತಯಾರಿಸುವ ದೈತ್ಯ ಕಂಪನಿ ಸ್ಯಾಮ್ ಸಂಗ್ ನ ಸ್ಯಾಮ್ ಸಂಗ್ ಫೌಂಡ್ರಿ ಕಂಪನಿಯು ಚಿಪ್ ಪ್ರೊಸೆಸರ್ ಗಳ ತಯಾರಿಕೆಯಲ್ಲಿ ಶೇ.15 ರಿಂದ 20 ರಷ್ಟು ಬೆಲೆಯನ್ನು ಹೆಚ್ಚಿಸಲಿದ್ದು, ಇದರಿಂದಾಗಿ ಮೊಬೈಲ್ ಫೋನ್ ಗಳ ಬೆಲೆಯಲ್ಲಿ ಸಹ ಇಷ್ಗೆ ಹೆಚ್ಚಳವಾಗಲಿದೆ.

2021ರಲ್ಲಿ ಜಾಗತಿಕ ಮಟ್ಟದಲ್ಲಿ ಚಿಪ್ ಗಳ ಕೊರತೆ, ಪೂರೈಕೆ ಸರಪಳಿಯ ನಿರ್ಬಂಧನೆ ಇದ್ದರೂ ಸಹ, ಸ್ಯಾಮ್ ಸಂಗ್ ಸಂಸ್ಥೆ ಚಿಪ್ ತಯಾರಿಕೆಯ ಬೆಲೆಯಲ್ಲಿ ಬದಲಾವಣೆ ಮಾಡಿರಲಿಲ್ಲ. ಪ್ರೊಡಕ್ಷನ್ ನಲ್ಲೂ ನಿಖರತೆ ಹೊಂದಿತ್ತು. ಆದರೆ ಈಗ ಹಣದುಬ್ಬರ, ಬಡ್ಡಿದರಗಳ ಏರಿಕೆ, ಕಾರ್ಮಿಕರ ವೆಚ್ಚಗಳು, ಉಕ್ರೇನ್ ಯುದ್ಧದಿಂದ ಆರ್ಥಿಕ ತೊಂದರೆಗಳು, ಇದೆಲ್ಲವೂ ಇದ್ದರೂ ಸಹ ಸ್ಯಾಮ್ ಸಂಗ್ ಸಂಸ್ಥೆ ಬೆಲೆಯಲ್ಲಿ ಬದಲಾವಣೆಗಳನ್ನು ಮಾಡಿರಲಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಪ್ರೊಸೆಸರ್ ಚಿಪ್ ತಯಾರಿಕೆಗೆ ಹಣ ಹೆಚ್ಚಿಸಲಾಗುತ್ತದೆ. ಇದರ ಬಗ್ಗೆ ಗ್ರಾಹಕರ ಜೊತೆಗೆ ಸ್ಯಾಮ್ ಸಂಗ್ ಸಂಸ್ಥೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಬೇಡಿಕೆ ಹೆಚ್ಚಾಗಿದ್ದರೂ, Global Foundries, TSMC, SMIC, UMC ಕಂಪನಿಗಳ ಎದುರು, ಸ್ಯಾಮ್ ಸಂಗ್ ಫೌಂಡ್ರಿ ಸಂಸ್ಥೆಯು ನಿಖರವಾದ ಬೆಲೆ ಇಟ್ಟು ನೈತಿಕತೆ ಮೆರೆದಿತ್ತು.

ಪ್ರಸ್ತುತ ಶೇ.100 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಫ್ಯಾಬ್ ಬಳಕೆಯ ದರಗಳಿಂದ ಪ್ರೊಸೆಸರ್ ಚಿಪ್ ತಯಾರಿಸುವ ಎಲ್ಲಾ ಕಂಪನಿಗಳು ಅಪಾಯ ಅನುಭವಿಸುತ್ತಿದೆ. ವಿದ್ಯುತ್, ಎಲ್ಲ ಉಪಕರಣ, ಸಲಕರಣೆಗಳ, ಸಾಮಗ್ರಿಗಳು, ಸಾಗಣಿಕೆ ಎಲ್ಲದರ ಖರ್ಚು ಹೆಚ್ಚಾಗಿರುವ ಕಾರಣ ಸ್ಯಾಮ್ ಸಂಗ್ ಕಂಪನಿ ಬೆಲೆ ಏರಿಸುವುದು ಅನಿವಾರ್ಯ ಆಗಿದೆ.. ಎಂದು ಬ್ಲೂಮ್ ಬರ್ಗ್ ಇಂಟೆಲಿಜೆನ್ಸ್ ನ ವಿಶ್ಲೇಷಕರು ಮಸಾಹಿರೋ ವಕಾಸುಗಿ ಅವರು ತಿಳಿಸಿದ್ದಾರೆ. ಚೈನಾದಲ್ಲಿ ಹೇರಲಾದ ಲಾಕ್ ಡೌನ್, ಕೋವಿಡ್ ಕೇಸ್ ಗಳು, ಆರ್ಥಿಕ ಬಿಕ್ಕಟ್ಟು ಇದೆಲ್ಲದರಿಂದ, ಸೆಮಿ ಕಂಡಕ್ಟರ್ ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಹಾಗಾಗಿ ಇದು ಸ್ಮಾರ್ಟ್ ಫೋನ್ ಗಳ ಬೆಲೆಯ ಮೇಲು ಪರಿಣಾಮ ಬೀರಲಿದೆ. ಈಗಿನ ಪರಿಸ್ಥಿತಿಯಲ್ಲಿ ಪ್ರೊಸೆಸರ್ ಚಿಪ್ ತಯಾರಿಸುವ ಕಂಪನಿಗಳು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಎಲೆಕ್ಟ್ರಾನಿಕ್ಸ್ ಗ್ಯಾಗ್ಡೆಟ್ ಗಳು, ಕಂಪ್ಯೂಟರ್, ಗೆಮಿಂಗ್, ಸ್ಮಾರ್ಟ್ ಫೋನ್ ಪೂರೈಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಚಿಪ್ ಬೆಲೆಯನ್ನು ಹೆಚ್ಚಿಸಬೇಕೆ, ಕಡಿಮೆ ಸಾಧನಗಳನ್ನು ಮಾರಾಟ ಮಾಡಬೇಕೇ, ಅಥವಾ ಬೆಲೆಗಳನ್ನು ನಿರ್ವಹಿಸಬೇಕೆ ಎನ್ನುವ ಪರಿಸ್ಥಿತಿಯಲ್ಲಿದೆ ಸ್ಯಾಮ್ ಸಂಗ್ ಸಂಸ್ಥೆ.