ಆಫ್ರಿಕನ್ನರ ನಾಡಿನಲ್ಲಿ ಭಾರತೀಯ ಸೈನಿಕರ ಶೌರ್ಯ ಪ್ರದರ್ಶನ. ಅಖಾಡಕ್ಕೆ ಇಳಿದ ಭಾರತೀಯ ಸೇನೆ ವಿಶ್ವವನ್ನೇ ಬೆರಗು ಗೊಳಿಸಿದ್ದು ಹೇಗೆ ಗೊತ್ತೇ??

ನಮ್ಮ ಭಾರತೀಯ ಸೈನಿಕರು ಆಫ್ರಿಕಾ ನಾಡಿನಲ್ಲಿ ಆಗಿರುವ ದಾಳಿಯಿಂದ ಅಲ್ಲಿನ ಸೈನಿಕರನ್ನು ಮತ್ತು ಜನರನ್ನು ರಕ್ಷಿಸಿದೆ. ಕಾಂಗೋ ದೇಶದ ಸೈನಿಕರ ಮೇಲೆ ಸಶಸ್ತ್ರರಾಗಿಡಸ ಗುಂಪೊಂದು ದಾಳಿ ನಡೆಸಿತ್ತು, ಈ ದಾಳಿಯ ವಿರುದ್ಧ ಭಾರತದ ಸೈನಿಕಎಸ್ ಹೋರಾಡಿ, ದಾಳಿ ಮಾಡಿದವರ ವಿರುದ್ಧ ಶೌರ್ಯ ಪ್ರದರ್ಶನ ಮಾಡಿದ್ದಾರೆ. ಈ ಘಟನೆ ಮೇ 22ರಂದು ನಡೆದಿದ್ದು, ತಡವಾಗಿ ತಿಳಿದುಬಂದಿದೆ. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಸೈನಿಕರು ಈ ದಾಳಿಯನ್ನು ಬೇಧಿಸಿದ್ದಾರೆ. ಕಾಂಗೋದಲ್ಲಿ ನಡೆದಿರುವ ಈ ದಾಳಿಯ ಬಗ್ಗೆ ವಿಶ್ವಸಂಸ್ಥೆ ಖಡಕ್ ಆದ ಮಾತುಗಳನ್ನಾಡಿದೆ.

“ಶಾಂತಿಪಾಲಕರನ್ನು ಗುರಿಯನ್ನಾಗಿ ಮಾಡಿ ನಡೆಸಿರುವ ಈ ದಾಳಿ ಖಂಡನೀಯವಾದದ್ದು. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಇಂತಹ ದಾಳಿಗಳನ್ನು ಯುದ್ಧಾಪರಾಧ ಎಂದು ಪರಿಗಣಿಸಲಾಗುತ್ತದೆ..” ಎಂದು ವಿಶ್ವಸಂಸ್ಥೆ ತಿಳಿಸಿದೆ. ಕಾಂಗೋ ದೇಶದಲ್ಲಿ ವಾಸ ಮಾಡುತ್ತಿರುವ ಸಾಮಾನ್ಯ ಜನರಿಗೆ ಭದ್ರತೆಯ ಸಮಸ್ಯೆಗಳು ಉಂಟಾಗುತ್ತಿದೆ. ಸಶಸ್ತ್ರ ಗುಂಪುಗಳು ಆಗಾಗ ಇವರ ಮೇಲೆ ದಾಳಿ ಮಾಡುತ್ತಿವೆ. ಅದರಲ್ಲೂ ಪೂರ್ವ ಭಾಗದ ಕಾಂಗೋದಲ್ಲಿ ಇಂತಹ ದಾಳಿಗಳು ಹೆಚ್ಚಾಗುತ್ತಿವೆ, ಇದರಿಂದಾಗಿ ಅನೇಕ ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಭಯಾನಕ ದಾಳಿಗಳು ನಡೆಯುತ್ತಿರುವುದರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸದಸ್ಯರಾಗಿರುವ ದೇಶಗಳಿಗೆ ಆತಂಕ ಶುರುವಾಗಿದೆ.

“ಕಾಂಗೋ ದೇಶವು ಪ್ರಜಾತಂತ್ರ ಗಣರಾಜ್ಯ ಹೊಂದಿರುವ ದೇಶ ಹಾಗಾಗಿ ಆ ದೇಶದ ಜೊತೆಗಿರುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳು, ಈ ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಕೂಡಲೇ ಬರಬೇಕು. ಸಹಾಯ ಮಾಡಬೇಕು, ಎಂದು ಭದ್ರತಾ ಮಂಡಳಿಯಲ್ಲಿ ಸದಸ್ಯತ್ವ ಹೊಂದಿರುವ ದೇಶಗಳು ಒತ್ತಾಯ ಮಾಡುತ್ತಿದೆ. ” ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿಕೆ ನೀಡಿದೆ. ಕಾಂಗೋ ದೇಶದಲ್ಲಿರುವ ವಿಶ್ವಸಂಸ್ಥೆಯ ಪೀಸ್ ಕೀಪಿಂಗ್ ಸೈನ್ಯದಲ್ಲಿ ಭಾರತದ ಸೈನಿಕರು ಸಹ ಇದ್ದು, ಇನ್ನಿತರ ಬೇರೆ ದೇಶಗಳ ಸೈನಿಕರು ಸಹ ಇದ್ದಾರೆ. ಯಾವುದೇ ದೇಶದಲ್ಲಿ ಈ ರೀತಿಯ ಸಮಸ್ಯೆ ಬಂದಾಗ, ವಿಶ್ವಸಂಸ್ಥೆಯ ಈ ಪಡೆಗಳು ಸಹಾಯಕ್ಕೆ ಬರುತ್ತವೆ.