ಕೈಗೆ ಏಟಾಗಿದೆ ಎಂದು ಆಸ್ಪತ್ರೆಗೆ ಹೋದ ಈಕೆಗೆ ಆಸ್ಪತ್ರೆಯವರು ಎಂತಹ ಸ್ಥಿತಿಗೆ ತಂದು ಇಟ್ಟಿದ್ದಾರೆ ಗೊತ್ತೇ? ಅಷ್ಟಕ್ಕೂ ಆಗಿದ್ದೇನು ಗೊತ್ತೇ??

ಮರಣ ಎನ್ನುವುದು ಯಾವಾಗ ಹೇಗೆ ಸಂಭವಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರೇ ಒಂದಲ್ಲ ಒಂದು ಕಾರಣದಿಂದ ಪ್ರಾಣ ಕಳೆದುಕೊಳ್ಳುವ ಹಾಗೆ ಆಗಿದೆ. ಕೆಲವೊಮ್ಮೆ ಅವರೇ ಆ ರೀತಿ ಮಾಡಿಕೊಳ್ಳುತ್ತಾರೆ, ಇನ್ನು ಕೆಲವು ಸಾರಿ ಬೇರೆ ಕಾರಣಗಳಿಂದ ಹಾಗೆ ಆಗಿರುತ್ತದೆ. ಇಂದು ನಾವು ನಿಮಗೆ ಈ ರೀತಿ ಬೇರೆಯವರ ಅಂದರೆ ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿರುವ ಹುಡುಗಿಯ ಬಗ್ಗೆ ತಿಳಿಸುತ್ತೇವೆ. ಈ ಹುಡುಗಿಯ ಹೆಸರು ತೇಜಸ್ವಿನಿ. ಕೇವಲ 21 ವರ್ಷ ವಯಸ್ಸಿನ ಹುಡುಗಿ ತೇಜಸ್ವಿನಿ, ಕೈ ನೋವು ಎಂದು ಆಸ್ಪತ್ರೆಗೆ ಹೋಗಿ, ಮೃತ ಸ್ಥಿತಿಯಲ್ಲಿ ಮನೆಯವರಿಗೆ ಸಿಕ್ಕಿದ್ದಾಳೆ..

ತೇಜಸ್ವಿನಿ ಇನ್ನು ಓದುತ್ತಿದ್ದ ಹುಡುಗಿ, ಇವರ ಕುಟುಂಬ ಮೂಲತಃ ಬಾಗೇಪಲ್ಲಿಯವರು. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ತೇಜಸ್ವಿನಿ ಇಂಜಿನಿಯರಿಂಗ್ ಓದುತ್ತಿದ್ದರು. ಪಿಜಿಯೊಂದರಲ್ಲಿ ಉಳಿದುಕೊಂಡಿದ್ದ ತೇಜಸ್ವಿನಿ, ತಂದೆ ತಾಯಿಯ ಸಹಾಯದಿಂದ ಚೆನ್ನಾಗಿ ಓದುತ್ತಿದ್ದ ಹುಡುಗಿ. ಪಿಜಿಯಲ್ಲಿದ್ದಾಗ, ಬಾತ್ ರೂಮ್ ನಲ್ಲಿ ಬಿದ್ದು ಕೈಗೆ ಪೆಟ್ಟು ಮಾಡಿಕೊಂಡಿದ್ದಳು. ಆ ನೋವು ಜಾಸ್ತಿಯಾಯಿತು ಎಂದು, ಹತ್ತಿರದಲ್ಲಿದ್ದ ಜೀವಿಕಾ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯ ಸಿಬ್ಬಂದಿಗಳು ಕೈನೋವು ಎಂದು ಬಂದ ಹುಡುಗಿಯ ಕೈಗೆ ಸರ್ಜರಿ ಮಾಡಬೇಕು ಎಂದು, ಆಕೆಗೆ ಸರ್ಜರಿ ಮಾಡಿದ್ದಾರೆ. ಆದರೆ ಸರ್ಜರಿ ನಡೆದ ಕೆಲವೇ ಗಂಟೆಗಳಲ್ಲಿ ಹುಡುಗಿ ವಿಧಿವಶವಾಗಿದ್ದಾಳೆ.

ತೇಜಸ್ವಿನಿಯ ತಂದೆ ತಾಯಿಯರು, ಆಸ್ಪತ್ರೆಯೇ ತಮ್ಮ ಮಗಳ ಮರಣಕ್ಕೆ ಹೊಣೆ ಎಂದು ಆಸ್ಪತ್ರೆಯ ವಿರುದ್ಧ ದೂರು ನೀಡಿದ್ದಾರೆ . ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯ ಮಾಡಿದ ಕಾರಣರಿಂದಲೇ ತೇಜಸ್ವಿನಿಗೆ ಹೀಗಾಗಿದೆ ಎಂದು ಹೇಳಲಾಗುತ್ತಿದೆ. ಬೆಳಗ್ಗಿನ ಜಾವ 4 ಗಂಟೆಗೆ ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಸರ್ಜರಿ ನಡೆದಿದೆ. ಸಂಜೆ 4 ಗಂಟೆಗೆ ತೇಜಸ್ವಿನಿ ಕೊನೆಯುಸಿರೆಳೆದಿದ್ದಾಳೆ. ತೇಜಸ್ವಿನಿಗೆ ಅನಸ್ತಿಶಿಯ ನೀಡಿದ್ದ ವೈದ್ಯ ಡಾ.ಅಶೋಕ್ ಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದ್ದು, HAL ಪೊಲೀಸರು ಡಾ.ಶಶಾಂಕ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಚಿಕ್ಕ ವಯಸ್ಸಿನ ಬದುಕಿ ಬಾಳಬೇಕಿದ್ದ ಆ ಹುಡುಗಿಯ ಜೀವ, ಯಾರದ್ದೋ ನಿರ್ಲಕ್ಷ್ಯದಿಂದ ಹೀಗಾಯಿತು.. ತೇಜಸ್ವಿನಿ ವಿಧಿವಶವಾಗಲು ನಿಜವಾದ ಕಾರಣ ಏನು ಎನ್ನುವುದು, ಪೊಲೀಸರ ತನಿಖೆಯಲ್ಲಿ ಗೊತ್ತಾಗಲಿದೆ.