ಬ್ಯಾಂಕ್ ನಲಿ ಹಣವಿಡುವ ಬದಲು, ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯಲ್ಲಿ ಇಟ್ಟು ನೋಡಿ, ಬ್ಯಾಂಕ್ ಗಿಂತ ಹೆಚ್ಚು ಲಾಭ. ಯಾವ ಯೋಜನೆ ಗೊತ್ತೇ??

ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡುವುದು ಬ್ಯಾಂಕ್ ಗಳಿಗಿಂತ ಹೆಚ್ಚಿನ ಸುರಕ್ಷತೆ ಮತ್ತು ಲಾಭ ನೀಡುತ್ತದೆ ಎಂದು ಹೇಳುತ್ತಾರೆ. ನೀವು ಕೂಡ ಹೂಡಿಕೆ ಮಾಡುವ ಪ್ಲಾನ್ ನಲ್ಲಿದ್ದರೆ, ಹೂಡಿಕೆಯ ಮೇಲೆ ಹೆಚ್ಚಿನ ಲಾಭ ಸಿಗುವಂಥಗ ಫಿಕ್ಸ್ಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ನಲ್ಲಿ ಎಫ್.ಡಿ ಮಾಡುವುದರಿಂದ ನೀವು ಬೇರೆ ರೀತಿಯ ಲಾಭಗಳನ್ನು ಸಹ ಪಡೆಯುತ್ತೀರಿ. ಈ ಎಫ್.ಡಿಯಲ್ಲಿ ನಿಮಗೆ ಸರ್ಕಾರದ ವತಿಯಿಂದ ಗ್ಯಾರಂಟಿ ಸಿಗುತ್ತದೆ, ಹಾಗೂ ಇದರಲ್ಲಿ ನೀವು ತ್ರೈಮಾಸಿಕ ಆಧಾರದ ಅಡಿಯಲ್ಲಿ 2022ರ ಬಡ್ಡಿ ದರ
ಲಾಭವನ್ನು ಪಡೆಯುತ್ತೀರಿ..

ಪೋಸ್ಟ್ ಆಫೀಸ್ ನಲ್ಲಿ ಎಫ್.ಡಿ ಅಕೌಂಟ್ ಶುರುಮಾಡುವುದು ಬಹಳ ಸುಲಭ. ಪೋಸ್ಟ್ ಆಫೀಸ್ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 1, 2, 3 ಅಥವಾ 5 ವರ್ಷಗಳ ಯಾವುದಾದರೊ ಒಂದು ಅವಧಿಯಲ್ಲಿ ನೀವು ಹೂಡಿಕೆ ಮಾಡಬಹುದು. ಈ ಯೋಜನೆಯ ಲಾಭ ಮತ್ತು ಪ್ರಯೋಜನವೇನು ಎಂದು ತಿಳಿಸುತ್ತೇವೆ ನೋಡಿ..
1.ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದರಿಂದ ಸರ್ಕಾರ ನಿಮಗೆ ಗ್ಯಾರಂಟಿ ನೀಡುತ್ತದೆ.
2.ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
3.ಇಲ್ಲಿ ನೀವು ಎಫ್.ಡಿ ಅನ್ನು ಆನ್ ಲೈನ್ ಅಥವಾ ಆಫ್ ಲೈನ್ ಎರಡು ರೀತಿಯಲ್ಲಿ ಮಾಡಬಹುದು.
4.ಪೋಸ್ಟ್ ಆಫೀಸ್ ನಲ್ಲಿ ಒಂದಕ್ಕಿಂತ ಹೆಚ್ಚು ಎಫ್.ಡಿ ಮಾಡಬಹುದು.

5.ಎಫ್.ಡಿ ಖಾತೆಯನ್ನು ಜಂಟಿ ಖಾತೆಯನ್ನಾಗಿ ಸಹ ಮಾಡಬಹುದು.
6.ಪೋಸ್ಟ್ ಆಫೀಸ್ ನಲ್ಲಿ 5 ವರ್ಷಗಳು ಎಫ್.ಡಿ ಮಾಡುವುದರಿಂದ ITR ಸಲ್ಲಿಸುವ ಸಮಯದಲ್ಲಿ ತೆರಿಗೆ ವಿನಾಯತಿ ಪಡೆಯುತ್ತೀರಿ.
7.ಒಂದು ಪೋಸ್ಟ್ ಆಫೀಸ್ ಇಂದ ಮತ್ತೊಂದು ಪೋಸ್ಟ್ ಆಫೀಸ್ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು.
ಎಫ್.ಡಿ ಖಾತೆ ತೆರೆಯುವುದು ಹೇಗೆ :- ಚೆಕ್ ಅಥವಾ ನಗದು ಹಣವನ್ನು ನೇರವಾಗಿ ಪಾವತಿಸುವ ಮೂಲಕ ಪೋಸ್ಟ್ ಆಫೀಸ್ ನಲ್ಲಿ ಎಟ್.ಡಿ ಖಾತೆ ಆರಂಭಿಸಬಹುದು. ಖಾತೆ ತೆರೆಯಲು ಕನಿಷ್ಠ ಮೊತ್ತ ₹1000 ರೂಪಾಯಿಗಳು, ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ.
ಎಫ್.ಡಿ ಮೇಲೆ ಸಿಗುವ ಹೆಚ್ಚಿನ ಬಡ್ಡಿ :- ದರಗಳು ಹೇಗಿವೆ ಅಂದ್ರೆ, 7 ದಿನಗಳಿಂದ ಒಂದು ವರ್ಷದ ವರೆಗಿನ ಎಫ್.ಡಿ ಗೆ ಶೇ.5.50 ರಾಷ್ತ್ ಬಡ್ಡಿ ಸಿಗುತ್ತದೆ. ಒಂದು ವರ್ಷದಿಂದ ಎರಡು ವರ್ಷದವರೆಗೂ, ಎರಡರಿಂದ ಮೂರು ವರ್ಷಗಳ ಎಫ್.ಡಿ ಗು ಇದೇ ಬಡ್ಡಿ ದರ ಇರುತ್ತದೆ. 3 ವರ್ಷದ ಒಂದು ದಿನದಿಂದ 5 ವರ್ಷಗಳ ವರೆಗೆ ಎಫ್.ಡಿ ಮೇಲೆ ಶೇ.6.70 ಅಷ್ಟು ಬಡ್ಡಿ ದರ ಇರುತ್ತದೆ. ಇದರ ಮೂಲಕ ನೀವು ಉತ್ತಮ ಲಾಭ ಪಡೆಯಬಹುದು.