ಒಂದಲ್ಲ ಎರಡಲ್ಲ ಐದು ವರ್ಷ ಪ್ರೀತಿಸಿ ಮದುವೆಯಾದ.. ಸುಮ್ಮನಿರದೆ ಕಷ್ಟ ಎಂದ ಸ್ನೇಹಿತನಿಗೆ ಮನೆಯಲ್ಲಿಯೇ ಜಾಗ ಕೊಟ್ಟ, ಆದರೆ ಕೊನೆಗೆ ಏನಾಯಿತು ಗೊತ್ತೆ?

ಪ್ರಪಂಚದಲ್ಲಿ ಈಗ ಒಳ್ಳೆಯ ಭಾವನೆಗಳು, ಸಹಾಯ ಮಾಡಿದವರಿಗೆ ಋಣಿಯಾಗಿರಬೇಕು ಎನ್ನುವ ಭಾವನೆ ಇಲ್ಲದೆ, ಪ್ರಪಂಚ ಸ್ವಾರ್ಥದತ್ತ ಸಾಗುತ್ತಿದೆ. ಒಬ್ಬ ವ್ಯಕ್ತಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸು ಬರುವುದು ಒಳ್ಳೆಯ ಮನಸ್ಸಿರುವವರಿಗೆ ಮಾತ್ರ, ಸ್ನೇಹಿತರು ಎಂದು ನಂಬಿ ಸಹಾಯ ಮಾಡಿದರೆ, ನಂಬಿದ್ದ ಸ್ನೇಹಿತರಿಂದಲೇ ಮೋಸವಾದರೆ ಏನು ಮಾಡಬೇಕು? ಇಂಥದ್ದೇ ಒಂದು ಕಥೆಯನ್ನು ಇಂದು ನಿಮಗೆ ತಿಳಿಸುತ್ತೇವೆ.. ಸ್ನೇಹಿತನಿಗೆ ಮನೆಯಲ್ಲಿ ಸ್ಥಾನ ಕೊಟ್ಟ ಈ ವ್ಯಕ್ತಿ, ಆದರೆ ಆ ಸ್ನೇಹಿತ ಮಾಡಿದ್ದೇನು ಗೊತ್ತಾ?

ಈಗಿನ ಕಾಲದಲ್ಲಿ ಲವ್ ಮ್ಯಾರೇಜ್ ಎನ್ನುವುದು ಕಾಮನ್. ಹುಡುಗಿ ಹುಡುಗ ಒಬ್ಬರನ್ನೊಬ್ಬರು ಪ್ರೀತಿಸಿ, ತಂದೆ ತಾಯಿಯ ಒಪ್ಪಿಗೆ ಪಡೆದು, ಅಥವಾ ಪಡೆಯದೆಯು ಮದುವೆ ಆಗುತ್ತಾರೆ. ಅದೇ ರೀತಿ ಒಂದಲ್ಲ, ಎರಡಲ್ಲ ಐದು ವರ್ಷಗಳ ಕಾಲ ಪ್ರೀತಿಸಿ, ನಿನ್ನ ಜೊತೆಯಲ್ಲ ಬದುಕಬೇಕು ಎಂದು ಮದುವೆಯಾದ ಜೋಡಿ ಕಾರ್ತಿಕ್ ಮತ್ತು ರಂಜಿತಾ. ಇವರಿಬ್ಬರು ಮದುವೆ ಬಳಿಕ ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದ ಬಳಿ ಒಂದು ಮನೆ ಮಾಡಿಕೊಂಡು, ಸುಖವಾದ ಸಂಸಾರ ನಡೆಸುತ್ತಿದ್ದರು. ಕಾರ್ತಿಕ್ ಅವರಿಗೆ ಒಳ್ಳೆಯ ಕೆಲಸ ಇತ್ತು, ಜೊತೆಗೆ ಒಳ್ಳೆಯ ಸಂಬಳ ಸಹ ಸಿಗುತ್ತಿತ್ತು. ಹೆಂಡತಿಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಕಾರ್ತಿಕ್. ಆದರೆ ಇವರ ಜೀವನಕ್ಕೆ ಕುತ್ತು ಬಂದಿದ್ದು, ಕಾರ್ತಿಕ್ ತನ್ನ ಸ್ನೇಹಿತ, ಸಂಜೀವನಿಗೆ ತನ್ನ ಮನೆಯಲ್ಲಿರಲು ಅವಕಾಶ ನೀಡಿದಮೇಲೆ.

ತನ್ನ ಸ್ನೇಹಿತನಿಗೆ ಎಲ್ಲಿಯೂ ಇರಲು ಜಾಗ ಇಲ್ಲ ಎಂದು ಗೊತ್ತಾದ ನಂತರ ಕಾರ್ತಿಕ್, ತನ್ನ ಸ್ನೇಹಿತನಿಗೆ ತನ್ನ ಮನೆಯಲ್ಲೇ ಇರಲು ಜಾಗ ನೀಡುತ್ತಾನೆ. ಸ್ನೇಹಿತ ಎಂದು ನಂಬಿಕೆ ಇಟ್ಟು, ಮನೆಯಲ್ಲಿರಲು ಜಾಗ ಕೊಟ್ಟರೆ, ಇತ್ತ ಸಂಜೀವ್ ರಂಜಿತಾಳ ಮೇಲೆ ಪ್ರೀತಿ ಬೆಳೆಸಿಕೊಂಡು, ಆಕೆಯನ್ನು ತನ್ನ ಬಲೆಗೆ ಬೀಳಸಿಕೊಳ್ಳುತ್ತಾನೆ. ರಂಜಿತಾ ಸಹ ಸಂಜೀವನನ್ನು ಪ್ರೀತಿಸಲು ಶುರು ಮಾಡುತ್ತಾಳೆ. ಇವರಿಬ್ಬರ ಸಲುಗೆ, ಮುಂದುವರೆದು, ಕಾರ್ತಿಕ್ ಇಲ್ಲದ ಸಮಯದಲ್ಲಿ ಇಬ್ಬರು ಜೊತೆಯಾಗಿರಲು ಶುರು ಮಾಡುತ್ತಾರೆ. ಆದರೆ ಈ ವಿಚಾರದ ಬಗ್ಗೆಕಾರ್ತಿಕ್ ಗೆ ಒಂದು ಸಣ್ಣ ಸುಳಿವು ಸಹ ಇರುವುದಿಲ್ಲ. ಕೊನೆಗೆ ಕಾರ್ತಿಕ್ ತಮ್ಮಿಬ್ಬರಿಗೂ ಅಡ್ಡವಾಗಿರುತ್ತಾನೆ ಎಂದು ಭಾವಿಸಿ, ಅವನನ್ನು ಮುಗಿಸಲು ಪ್ಲಾನ್ ಮಾಡುತ್ತಾರೆ. ಕಾರ್ತಿಕ್ ಮನೆಗೆ ಬಂದಾಗ, ಆತನಿಗೆ ಚೆನ್ನಾಗಿ ಕುದಿಸಿ, ಚೆನ್ನಪಟ್ಟಣದ ಬಳಿ ಇರುವ ಒಂದು ಮೋರಿಗೆ ಎಸೆದು ಬಿಡುತ್ತಾರೆ. ಸ್ನೇಹಿತ ಎಂದು ನಂಬಿ ಜಾಗ ಕೊಟ್ಟ ಕಾರ್ತಿಕ್ ಗೆ, ತಮ್ಮ ಸ್ವಾರ್ಥದಿಂದ ಇವರಿಬ್ಬರು ಮಾಡಿದ ಕೆಲಸ ಇದು..