ಹೊಸ ಉದ್ಯಮ ಆರಂಭ ಮಾಡಲು ಯೋಚನೆ ಮಾಡುತ್ತಿದ್ದೀರಾ?? ಹಾಗಿದ್ದರೆ ಈ ಉದ್ಯಮ ಯಾಕೆ ಟ್ರೈ ಮಾಡಬಾರದು??

ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸುವ ಯೋಚನೆ ಇದೆಯೇ? ಲಾಭದಾಯಕ, ಸದಾ ಬೇಡಿಕೆ ಇರುವ ವ್ಯಾಪಾರವನ್ನು ಹುಡುಕುತ್ತಿದ್ದೀರಾ? ಹಾಗಿದ್ರೆ ಈ ಬ್ಯುಸಿನೆಸ್ ನಿಮಗೆ ಉಪಯೋಗಕಾರಿ ಆಗಿರುತ್ತದೆ. ಲ್ಯಾಪ್‌ ಟಾಪ್ ಮತ್ತು ಮೊಬೈಲ್‌ಗಳು ಇಂದು ಅತ್ಯಗತ್ಯ ವಸ್ತುಗಳಾಗಿವೆ. ಇತ್ತೀಚಿನ ಕಾರ್ಪೊರೇಟ್ ಹಗರಣಗಳ ಪರಿಣಾಮವಾಗಿ ಈ ವಿಶೇಷತೆಯ ಬೇಡಿಕೆಯು ಹೆಚ್ಚಾಗಿ ಬೆಳೆದಿದೆ. ಹಾಗಿದ್ದರೂ ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಇವುಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಇದಕ್ಕಾಗಿ ನೀವು ಮೊದಲು ಲ್ಯಾಪ್‌ಟಾಪ್, ಮೊಬೈಲ್ ರಿಪೇರಿ ಕೋರ್ಸ್ ಮಾಡಬೇಕು. ದೇಶದ ಅನೇಕ ಸಂಸ್ಥೆಗಳು ಈ ಕೋರ್ಸ್ ಹೇಳಿಕೊಡುತ್ತದೆ. ಇದಲ್ಲದೇ ಲ್ಯಾಪ್ ಟಾಪ್, ಮೊಬೈಲ್ ರಿಪೇರಿ ಕಲಿಯುವ ಅವಕಾಶವೂ ಇದೆ. ಇದನ್ನು ಇನ್ಸ್ಟಿಟ್ಯೂಟ್ ಗೆ ಹೋಗಿ ಕಲಿಯುವುದು ಉತ್ತಮ. ಕೋರ್ಸ್ ಮಾಡಿದ ನಂತರ ಕೇಂದ್ರದಲ್ಲಿ ಸ್ವಲ್ಪ ಸಮಯ ಕೆಲಸ ಮಾಡುವುದು ಪ್ರಯೋಜನ ನೀಡುತ್ತದೆ.

ಕೋರ್ಸ್ ಮುಗಿದ ನಂತರ ನೀವು ರಿಪೇರಿ ಅಂಗಡಿಯನ್ನು ತೆರೆಯಬಹುದು. ಲ್ಯಾಪ್‌ ಟಾಪ್ ರಿಪೇರಿ ಮಾಡಿಕೊಡುವ ಅಂಗಡಿಯನ್ನು ಸಾರ್ವಜನಿಕರಿಗೆ ತೆರೆಯಬೇಕು. ನೀವು ಕೇಂದ್ರ ಶುರುಮಾಡುವ ಕಡೆ ಈಗಾಗಲೇ ಕಂಪ್ಯೂಟರ್ ರಿಪೇರಿ ಕೇಂದ್ರಗಳು ಇರಬಾರದು. ನಿಮ್ಮ ಕೇಂದ್ರವನ್ನು ಪ್ರಚಾರ ಮಾಡಲು ನೀವು ಸಾಮಾಜಿಕ ಮಾಧ್ಯಮದ ಸಹಾಯವನ್ನು ತೆಗೆದುಕೊಳ್ಳಬಹುದು. ಹೆಚ್ಚಿನ ಜನರಿಗೆ ತಮಗೆ ಹತ್ತಿರ ಆಗುವ ಹಾಗೆ ರಿಪೇರಿ ಅಂಗಡಿಯನ್ನು ತೆರೆಯಲಾಗಿದೆ ಎಂದು ಗೊತ್ತಾಗುತ್ತದೆ. ಅಂಗಡಿ ತೆರೆಯುವ ಮುನ್ನ ರಿಪೇರಿ ಮಾಡಲು ಬೇಕಾದ ಸಾಧನಗಳಜನು ಇಟ್ಟುಕೊಳ್ಳಬೇಕು. ಮೊದಲು ನೀವು ಪಟ್ಟಿಯನ್ನು ತಯಾರಿಸಬೇಕು ಹಾಗೂ ಅವುಗಳನ್ನು ಖರೀದಿಸಬೇಕು. ರಿಪೇರಿ ಸಮಯದಲ್ಲಿ ಬದಲಾಯಿಸಬೇಕಾದ ಸಲಕರಣೆಗಳನ್ನು ಸ್ಥಳದಲ್ಲೇ ಆದೇಶಿಸಬಹುದು ಮತ್ತು ವಿತರಿಸಬಹುದು.

ಇದಕ್ಕೆ ಖರ್ಚಾಗುವ ಹಣವೆಷ್ಟು? 2 ಲಕ್ಷದಿಂದ 4 ಲಕ್ಷದವರೆಗೆ ಕಂಪ್ಯೂಟರ್ ರಿಪೇರಿ ಕೇಂದ್ರ ಆರಂಭಿಸಬಹುದು. ಆರಂಭದಲ್ಲಿ ಸಣ್ಣ ವಸ್ತುಗಳನ್ನು ಇರಿಸುವ ಮೂಲಕ ಕೆಲಸ ಮಾಡಬಹುದು. ಕೆಲಸ ಹೆಚ್ಚಾದಂತೆ ಹೂಡಿಕೆಯೂ ಹೆಚ್ಚಾಗುತ್ತದೆ. ರಿಪೇರಿ ಬ್ಯುಸಿನೆಸ್ ಕ್ಲಿಕ್ ಆದ ಬಳಿಕ ನೀವು ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು. ಲ್ಯಾಪ್‌ಟಾಪ್ ರಿಪೇರಿ ಶುಲ್ಕ ತುಂಬಾ ಹೆಚ್ಚಾಗಿದೆ. ಆದ್ದರಿಂದ ಈ ವ್ಯವಹಾರದಿಂದ ಉತ್ತಮ ಆದಾಯವನ್ನು ಪಡೆಯುತ್ತೀರಿ..