ಫೇಸ್ಬುಕ್ ನಲ್ಲಿ ಕಡಿಮೆಯಾಗುತ್ತಿದೆ ಮಹಿಳೆಯರ ಸಂಖ್ಯೆ: ಭಾರತದಲ್ಲಿ ಫೇಸ್ಬುಕ್ ನಲ್ಲಿ ಹಿಂದೆ ಸರಿಯುತ್ತಿರುವ ಮಹಿಳೆಯರು. ಯಾಕೆ ಗೊತ್ತೇ?

ಫೇಸ್ ಬುಕ್ ಎನ್ನುವುದು ಬಹಳ ಫೇಮಸ್ ಆಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಒಂದು. ಈ ಅಪ್ಲಿಕೇಶನ್ ಅನ್ನು ಕಂಡು ಹಿಡಿದವರು ಬೇರೆ ದೇಶದವರೆ ಆಗಿದ್ದರು, ಫೇಸ್ಬುಕ್ ಬಳಕೆದಾದರು ಹೆಚ್ಚಾಗಿರುವುದು ಭಾರತ ದೇಶದಲ್ಲಿ. ಭಾರತ ದೇಶ ಫೇಸ್ಬುಕ್ ಗೆ ಅತಿದೊಡ್ಡ ಮಾರುಕಟ್ಟೆ ಎಂದರೆ ತಪ್ಪಾಗುವುದಿಲ್ಲ. ಪ್ರಪಂಚದ ಬೇರೆ ಎಲ್ಲಾ ದೇಶಗಳಿಗಿಂತಲೂ ಭಾರತದಲ್ಲಿ ಅತಿಹೆಚ್ಚು ಸಂಖ್ಯೆಯ ಜನರು ಫೇಸ್ಬುಕ್ ಬಳಕೆ ಮಾಡುತ್ತಾರೆ. ಆದರೆ ಈಗ ಫೇಸ್ಬುಕ್ ಸಂಸ್ಥೆ ನೀಡಿರುವ ವರದಿಯ ಪ್ರಕಾರ, ಭಾರತದಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆ ಇಳಿಮುಖ ಕಾಣುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಇದರಿಂದಾಗಿ ಫೇಸ್ಬುಕ್ ಸಂಸ್ಥೆಗೆ ದೊಡ್ಡ ಹೊಡೆತ ಬೀಳುವುದಂತೂ ಖಂಡಿತ. ಭಾರತವೇ ಫೇಸ್ಬುಕ್ ನ ದೊಡ್ಡ ಮಾರುಕಟ್ಟೆ ಆಗಿದ್ದು, ಇಲ್ಲಿಯೇ ಈ ರೀತಿ ಬಳಕೆದಾರರ ಸಂಖ್ಯೆ ಕಡಿಮೆ ಆಗುವುದು ನಿಜಕ್ಕೂ ದೊಡ್ಡ ವಿಷಯ ಆಗಿದೆ. ಫೇಸ್ಬುಕ್ ನ ಹಣಕಾಸಿನ ವಿಭಾಗ ತಿಳಿಸಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಇಂಟರ್ನೆಟ್ ದರ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಭಾರತದಲ್ಲಿ ದಿನೇ ದಿನೇ ಇಂಟರ್ನೆಟ್ ಪ್ಲಾನ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಷ್ಟೇ ಅಲ್ಲದೆ, ಮಹಿಳೆಯರು ಹೆಚ್ಚಾಗಿ ಫೇಸ್ಬುಕ್ ಇಂದ ಹೊರಬರುತ್ತಿದ್ದಾರೆ ಎಂದು ವರದಿಯ ಪ್ರಕಾರ ತಿಳಿದುಬಂದಿದೆ.

ಅದಕ್ಕೂ ಕಾರಣ ದೊರಕಿದ್ದು, ಫೇಸ್ಬುಕ್ ನಲ್ಲಿ ಸುರಕ್ಷತೆ ಇಲ್ಲ, ಪರಿಚಯ ಇಲ್ಲದ, ಗೊತ್ತಿಲ್ಲದ ಪುರುಷರು ರಿಕ್ವೆಸ್ಟ್ ಕಳಿಸುತ್ತಾರೆ, ಮೆಸೇಜ್ ಮಾಡುತ್ತಾರೆ, ಫೋಟೋ ಅಪ್ಲೋಡ್ ಮಾಡಿದಾಗಲೂ ಸುರಕ್ಷತೆ ಇರುವುದಿಲ್ಲ, ಯಾರಾದರೂ ಫೋಟೋ ತೆಗೆದುಕೊಳ್ಳಬಹುದು. ಈ ರೀತಿಯ ತೊಂದರೆ ಇರುವುದರಿಂದ ಹೆಣ್ಣುಮಕ್ಕಳು ಫೇಸ್ಬುಕ್ ಬಳಸುವುದನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕುಟುಂಬದಲ್ಲಿ ಫೇಸ್ಬುಕ್ ಬಳಸಲು ಅನುಮತಿ ನೀಡುವುದಿಲ್ಲ, ಫೇಸ್ಬುಕ್ ಸೇಫ್ ಇಲ್ಲ ಎಂದು ಮನೆಯವರು ಫೇಸ್ಬುಕ್ ಬಳಸುವುದು ಬೇಡ ಎನ್ನುತ್ತಾರೆ ಎನ್ನುವ ಮಾಹಿತಿ ಸಹ ಸಿಕ್ಕಿದೆ. ಈ ಕಾರಣಗಳಿಂದ ಹೆಣ್ಣುಮಕ್ಕಳು ಫೇಸ್ಬುಕ್ ಬಳಸುವುದು ಕಡಿಮೆ ಆಗುತ್ತಿದೆ.