ಕೊನೆಗೂ ಬಯಲಾಯಿತು 26 ವರ್ಷದ ಉಪನ್ಯಾಸಕಿಯ ಆತ್ಮಹತ್ಯೆಗೆ ಕಾರಣ. ಏನು ಗೊತ್ತೇ?? ಪಾತ್ರದಲ್ಲಿ ತಂಗಿಗೆ ತಿಳಿಸಿರುವುದೇನು ಗೊತ್ತೇ?

ಆಕೆ ಹಲವು ಮಕ್ಕಳ ಜೀವನವನ್ನು ಬೆಳಗಿಸಬೇಕಿದ್ದ ಟೀಚರ್, ಶಾಲೆಯಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಾ, ವಿದ್ಯಾರ್ಥಿಗಳ ಜೊತೆಗೆ ಹಾಗೂ ತನ್ನ ಜೊತೆಗಿದ್ದ ಎಲ್ಲರ ಜೊತೆಯಲ್ಲೂ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದರು. ಆದರೆ ಇದ್ದಕಿದ್ದ ಹಾಗೆ ಈಕೆ ತನ್ನ ಜೀವನದಲ್ಲಿ ಕಠಿಣವಾದ ನಿರ್ಧಾರ ತೆಗೆದುಕೊಂಡು, ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಉಪನ್ಯಾಸಕಿಯ ಸಾವು ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ.

ಈಕೆಯ ಹೆಸರು ಚಂದನ, ಈಕೆಯ ವಯಸ್ಸು 26. ಯಳಂದೂರಿನ ಅಂಬಳೆ ಗ್ರಾಮದ ನಿವಾಸಿಯಾಗಿದ್ದ ಚಂದನ, ಚಾಮರಾಜನಗರದ ಜೆ.ಎಸ್.ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಜೆ.ಎಸ್.ಎಸ್ ಹಾಸ್ಟೆಲ್ ನಲ್ಲೇ ವಾಸ ಮಾಡುತ್ತಿದ್ದರು. ಆಕೆಯ ಹುಟ್ಟುಹಬ್ಬದ ದಿನವೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹುಟ್ಟುಹಬ್ಬದ ದಿನ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಚಂದನರಿಗೆ ವಿಶ್ ಮಾಡಿದ್ದು, ಎಲ್ಲರ ಜೊತೆಗೂ ಚೆನ್ನಾಗಿದ್ದ ಚಂದನ, ತರಗತಿ ಮುಗಿಸಿ, ಹಾಸ್ಟೆಲ್ ಗೆ ಬಂದು, ತಮ್ಮ ಸ್ನೇಹಿತರು ರೂಮ್ ಇಂದ ಹೊರಹೋಗುವವರೆಗೂ ಕಾದಿದ್ದು, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದುಕೊಂಡಿದ್ದು, ಪ್ರಾಣ ಕಳೆದುಕೊಂಡಿದ್ದು, ಒಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

ನನ್ನನ್ನು ಯಾರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಲೆಟರ್ ನಲ್ಲಿ ಶುರುವಾಗಿ, ತನ್ನ ಅಕ್ಕ ಹಾಗೂ ತಂಗಿಗೆ ಕ್ಷಮೆ ಕೇಳಿದ್ದಾರೆ. ನೀನು ಯಾವುದೇ ಕಾರಣಕ್ಕೂ ಉಪನ್ಯಾಸಕಿ ಆಗಬೇಡ ಎಂದು ತಂಗಿಗೆ ಸಲಹೆ ನೀಡಿದ್ದಾರೆ. ಹುಟ್ಟುಹಬ್ಬದ ಹಿಂದಿನ ಚಂದನ ತಂದೆ ಮಗಳ ಜೊತೆಗೆ ಪಾನಿಪೂರಿ ತಿಂದು, ಹುಟ್ಟುಹಬ್ಬದ ದಿನ ಮನೆಗೆ ಬರಬೇಕು ಎಂದು ಹೇಳಿ, ಕೇಕ್ ಕಟ್ ಮಾಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು, ಆದರೆ ಮಗಳಿಗೆ ಕರೆಮಾಡಿದಾಗ, ಸ್ವಿಚ್ ಆಫ್ ಬಂದ ಕಾರಣ, ಹಾಸ್ಟೆಲ್ ನವರಿಗೆ ಕರೆಮಾಡಿದ್ದು, ಅವರು ಹೋಗಿ ಚಂದನ ರೂಮ್ ನೋಡಿದಾಗ, ಈ ರೀತಿ ಮಾಡಿಕೊಂಡಿರುವ ವಿಚಾರ ತಿಳಿದುಬಂದಿದೆ. ತನ್ನ ಸಾವಿಗೆ ಇನ್ಯಾರು ಕಾರಣವಲ್ಲ, ತಾನೇ ಕಾರಣ ಎಂದು ಬರೆದುಕೊಂಡಿದ್ದಾರೆ ಚಂದನ. ಬದುಕಿ ಬಾಳಬೇಕಿದ್ದ ಹುಡುಗಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ