ಭಾರತಕ್ಕೆ ಹೊಸದಾಗಿ ಲಗ್ಗೆ ಇಟ್ಟಿರುವ ಬೈಕ್ ಬೆಲೆ ಹಾಗೂ ವಿಶೇಷತೆ ತಿಳಿದರೆ ಓಡೋಗಿ ಕೊಂಡಿಕೊಳ್ಳುತ್ತೀರಾ. ಏನೆಲ್ಲಾ ಇದೆ ಗೊತ್ತೇ ಬೈಕ್ ನಲ್ಲಿ.

ವಾಹನಗಳಲ್ಲಿ ಪ್ರತಿದಿನ ಹೊಸ ಮಾಡೆಲ್ ಗಳು ಬರುತ್ತಲಿರುತ್ತದೆ. ಇದೀಗ ಭಾರತಕ್ಕೆ ಹೊಸ ಬೈಕ್ ಲಗ್ಗೆ ಇಟ್ಟಿದೆ. ಹೀರೋ ಮೋಟೋ ಕಾರ್ಪ್ ಮತ್ತು ಹಾರ್ಲಿ ಡೇವಿಡ್ಸನ್ ಸಂಸ್ಥೆಗಳು ಭಾರತದಲ್ಲಿ ಹೊಸದಾಗಿ, Harley Davidson Nightster ಎನ್ನುವ ಹೊಸ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ನ ಬೆಲೆ ಬರೋಬ್ಬರಿ ₹14.99 ಲಕ್ಷ ರೂಪಾಯಿ ಆಗಿದೆ. ಈ ಬೈಕ್ ನಲ್ಲಿ 975 ಸಿಸಿ ಇಂಜಿನ್ ಇದ್ದು, ಬೇರೆ ವಾಹನಗಳಿಗಿಂತ ಇದು ಹೆಚ್ಚು ಶಕ್ತಿಶಾಲಿ ಆಗಿದೆ. ಕಂಪನಿ ಈಗಾಗಲೇ ಬುಕಿಂಗ್ ಶುರುವಾಗಿದೆ.

ಹಾರ್ಲಿ ಡೇವಿಡ್ಸನ್ ಬೈಕ್ ಸಂಸ್ಥೆಯ ಅತ್ಯಂತ ಅಗ್ಗದ ಸ್ಪೋರ್ಟ್ಸ್ ಬೈಕ್ ಇದಾಗಿದೆ. ಬೇರೆಯ ಬಾಬರ್ ಬೈಕ್ ಗಳಿಗೆ ಈ ಬೈಕ್ ಭಾರಿ ಪೈಪೋಟಿ ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಇಂಡಿಯನ್ ಸ್ಸ್ಕೌಟ್ ಬಾಬರ್, ಟ್ರಯಂಫ್ ಬೊನೆವಿಲ್ಲೆ ಬಾಬರ್ ಬೈಕ್ ಗಳಿಗೆ ಇದು ಪೈಪೋಟಿ ನೀಡುತ್ತದೆ. ಅಷ್ಟು ಶಕ್ತಿಶಾಲಿಯಾಗಿದೆ ಈ ಬೈಕ್. ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಬೈಕ್ ಅನ್ನು ಒಂದು ರೂಪಾಂತರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಗನ್ ಶಿಪ್ ಗ್ರೇ, ರೆಡ್ ಲೈನ್ ರೆಡ್ ಪೇಂಟ್ ಇವುಗಳ ಬೆಲೆ 15.13 ಲಕ್ಷ ರೂಪಾಯಿ ಆಗಿದೆ .

ಇನ್ನು ವಿವಿಡ್ ಬ್ಲ್ಯಾಕ್ ಬೈಕ್ ಬಣ್ಣದ ಬೆಲೆ 14.99 ಲಕ್ಷ ರೂಪಾಯಿ ಆಗಿದೆ. ಈ ಬೈಕ್ ನ ಲುಕ್ ಬಗ್ಗೆ ಹೇಳುವುದಾದರೆ, ರೌಂಡ್ ಹೆಡ್ ಲೈಟ್, ತಿರುವು ಸೂಚಕಗಳು ರೌಂಡ್ ಆಕಾರದಲ್ಲಿ, ಬಾರ್ ಎಂಡ್ ಮಿರರ್ ಗಳು, ಹಿಂದಿನ ಫೆಂಡರ್ ಗಳು, ಹಾಗೂ ಸೈಡ್ ಸ್ಲಂಗ್ ಎಕ್ಸ್ ಹಾಸ್ಟರ್ ಗಳನ್ನು ಒಳಗೊಂಡಿದೆ. ಈ ಬೈಕ್ ನ ಇಂಧನ ಟ್ಯಾಂಕ್ 11.7 ಲೀಟರ್ ಇರಲಿದೆ, ಈ ಬೈಕ್ ನ ತೂಕ 218 ಕೆಜಿ ತೂಕ ಆಗಿರಲಿದೆ. ಹಳೆಯ ಸ್ಪೋರ್ಟ್ಸ್ ಬೈಕ್ ಗಳಿಗಿಂತ ಹಗುರವಾಗಿದೆ. ನೈಟ್ ಸ್ಟರ್ ಬೈಕ್ ಸೀಟ್ ನ ಎತ್ತರ 705 ಎಂಎಂ ಆಗಿದೆ. ರೈಡರ್ ಗಳು ಸುಲಭವಾಗಿ ಓಡಿಸಲು ಸುಲಭವಾಗುತ್ತದೆ. 975cc ಲಿಕ್ವಿಡ್ ಕೂಲಿಂಗ್ ಇಂಜಿನ್ ಹೊಂದಿರುವ ಈ ಬೈಕ್, ಕಾರ್ ನಷ್ಟೇ ಶಕ್ತಿ ಹೊಂದಿದೆ. 7500rpm ನಲ್ಲಿ, 89 bhp ಗರಿಷ್ಠ ಶಕ್ತಿ ಒಳಗೊಂಡಿದೆ. 5750 rpm ನಲ್ಲಿ 95bhp ಗರಿಷ್ಠ ಟಾರ್ಕ್ ಒಳಗೊಂಡಿದೆ. ಈ ಬೈಕ್ ನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಇದೆ. ಬ್ರೇಕ್ ವಿಚಾರ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.