ಮದುವೆಯಾಗುವಾಗ ವರದಕ್ಷಿಣೆಯಲ್ಲಿ ಕೇವಲ ಮೂರು ಗ್ರಾಂ ಚಿನ್ನ ಕಡಿಮೆಯಾಗಿತ್ತು, ಆದರೆ ಕೊನೆಗೆ ಏನಾಗಿದೆ ಗೊತ್ತೇ??

ಮದುವೆಯಾದ ಮೂರು ತಿಂಗಳಲ್ಲೇ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಿಯಾಪುರದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ವರ್ಷದ ಗೃಹಿಣಿ ರೂಪಾಬಾಯಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ರೂಪಾಬಾಯಿ ಸಾವು ಖಂಡಿತ ಕೊಲೆ ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ. ಆಕೆಯ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದು, ಇದನ್ನು ನೋಡಿ ಆಕೆಯನ್ನು ಕೊಂದಿದ್ದಾರೆ ಎನ್ನಲಾಗಿದೆ.

ರೂಪಾಬಾಯಿ ಮೂರು ತಿಂಗಳ ಹಿಂದೆ 32 ವರ್ಷದ ಗಂಗಾಧರ್ ಅವರೊಡನೆ ಮದುವೆಯಾಗಿದ್ದರು. ರೂಪಾಬಾಯಿ ಅವರ ಪೋಷಕರು ವರದಕ್ಷಿಣೆ ಕೊಟ್ಟು ಮದುವೆ ಮಾಡಿದರು. ಆದರೆ ಗಂಗಾಧರ್ ಅವರ ಪೋಷಕರು ರೂಪಾಗೆ 3 ಗ್ರಾಂ ಕಡಿಮೆ ಚಿನ್ನ ನೀಡಿರುವ ಕಾರಣ ಕಿರುಕುಳ ನೀಡುತ್ತಿದ್ದರು. ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದರೂ ಗಂಡನ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ಪತಿಯ ಮನೆಯವರು ರೂಪಾಬಾಯಿ ಮೇಲೆ ಹಲ್ಲೆ ನಡೆಸಿ ವಿಷ ಸೇವಿಸಿದ್ದಾರೆ ಎಂದು ರೂಪಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ರೂಪಾಬಾಯಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಆಸ್ಪತ್ರೆ ಮುಂದೆ ರೂಪಾ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಈ ಘಟನೆ ಕುರಿತು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದ್ಧೂರಿಯಾಗಿ ಮದುವೆಯಾಗಿ ಮೂರು ತಿಂಗಳಾಗುವಷ್ಟರಲ್ಲಿ ಇಂತಹ ಘಟನೆ ನಡೆದಿರುವುದಕ್ಕೆ ಕುಟುಂಬಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ರೂಪಾ ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.