ಉದ್ಯೋಗ ಹುಡುಕುತ್ತಿರುವವರಿಗೆ ಸಿಕ್ತು ಭರ್ಜರಿ ಸಿಹಿ ಸುದ್ದಿ: ಅಂಚೆ ಇಲಾಖೆಯಲ್ಲಿ ಒಂದು ಲಕ್ಷ ಹುದ್ದೆಗಳು ಖಾಲಿ. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕೇಂದ್ರ ಸರ್ಕಾರ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಾರ ಮಾಡಿದೆ. ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಕೆಲಸಗಳು ಖಾಲಿ ಇದ್ದು, ಅವುಗಳು ಭರ್ತಿ ಆಗಬೇಕಿದ್ದು, ನಿರುದ್ಯೋಗಿಗಳಿಗೆ ಇದು ಒಳ್ಳೆಯ ಅವಕಾಶ ಆಗಿದೆ. ಅಂಚೆ ಇಲಾಖೆಯ 23 ವೃತ್ತಗಳಲ್ಲಿ, ಯಾವ ವೃತ್ತದಲ್ಲಿ ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಎಂದು ತಿಳಿಸುತ್ತೇವೆ ನೋಡಿ..

ದೇಶದ ಎಲ್ಲಾ ಅಂಚೆ ಇಲಾಖೆಗಳಲ್ಲು ಖಾಲಿ ಇರುವ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮೇಲ್ ಮೋಟಾರ್ ಸೇವೆ, ಅಂಚೆ ಸೇವೆಗಳ ಗುಂಪು ಬಿ ಪೋಸ್ಟ್ ಗಳು, ಸಹಾಯಕ ಸೂಪರಿಂಡೆಂಟ್ ಪೋಸ್ಟ್, ಇನ್ಸ್ಪೆಕ್ಟರ್ ಮತ್ತು ಪೋಸ್ಟಲ್ ಆಪರೇಟಿವ್ ಸೈಡ್ ನ ಪೋಸ್ಟ್ ಗಳು ಖಾಲಿ ಇದೆ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್, ಸ್ಟೆನೋಗ್ರಾಫರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸೇವಿಂಗ್ ಬ್ಯಾಂಕ್ ಕಂಟ್ರೋಲ್ ಆರ್ಗನೈಜೇಶನ್ ಗೆ ಸಂಬಂಧಿಸಿದ ಕೆಲಸಗಳು, ರೈಲ್ವೆ ಮೇಲ್ ಸೇವೆಗಳು, ಇವುಗಳ ಕೇಡರ್ ಗೆ ಸಂಬಂಧಿಸಿದ ಹಾಗೆ ಯಾವುದಕ್ಕೆ ಎಷ್ಟು ಹುದ್ದೆಗಳು ಖಾಲಿ ಇದೆ ಎಂದು ತಿಳಿಸಿದ್ದಾರೆ.

ದೇಶಾದಲ್ಲಿ 23 ವೃತ್ತಗಳ ಖಾಲಿ ಹುದ್ದೆ ಇದ್ದು, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್ ಮತ್ತು ಎಂಟಿಎಸ್ ಹುದ್ದೆಗಳಲ್ಲಿ 59,099 ಪೋಸ್ಟ್‌ಮ್ಯಾನ್ ಹುದ್ದೆ, 1445 ಮೇಲ್ ಗಾರ್ಡ್ ಹುದ್ದೆ ಮತ್ತು 37,539 ಮಲ್ಟಿ ಟಾಸ್ಕಿಂಗ್ ಹುದ್ದೆಗಳು ಖಾಲಿ ಇದೆ. ಇದರ ಜೊತೆಗೆ ಸ್ಟೆನೋಗ್ರಾಫರ್‌ ಗೆ ಹುದ್ದೆ ಸಹ ಮಂಜೂರು ಮಾಡಲಾಗಿದೆ. ಇದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆ ನೋಡುವುದಾದರೆ, ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ಇಂಟರ್ ಆಗಿರಬೇಕು, ಹಾಗೂ ಎಂಟಿಎಸ್ ಗೆ 10ನೇ ತರಗತಿ ಪಾಸ್ ಆಗಿರಬೇಕು. ವಯಸ್ಸು 18 ರಿಂದ 25ರ ಒಳಗೆ ಇರಬೇಕು. ಕೆಲವು ಹುದ್ದೆಗಳಿಗೆ ವಯಸ್ಸಿನ ಮಿತಿ 30 ಇರುತ್ತದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ. ನೇರ ನೇಮಕಾತಿ ಮತ್ತು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಅನುಸಾರ ಇವುಗಳನ್ನು ಬದಲಾವಣೆ ಮಾಡಲಾಗುತ್ತದೆ. ಪೂರ್ತಿ ವಿವರ ಪಡೆಯಲು, https://www.indiapost.gov.in/vas/Pages/IndiaPostHome.aspx ಈ ವೆಬ್ಸೈಟ್ ಗೆ ಭೇಟಿ ನೀಡಿ.