ಒಂದಕ್ಕಿಂತ ಹೆಚ್ಚು ಗ್ಯಾಸ್ ಕನೆಕ್ಷನ್ ಹೊಂದುವುದು ಹೇಗೆ ಗೊತ್ತಾ. ಇದು ಸಾಧ್ಯನಾ?? ಬೇಕು ಎಂದರೆ ನೀವೇನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದ ಪ್ರತಿಯೊಂದು ಮನೆಯಲ್ಲಿ ಕೂಡ ಗ್ಯಾಸ್ ಕನೆಕ್ಷನ್ ಇದ್ದೆ ಇದೆ. ಅದರಲ್ಲೂ ಹೆಚ್ಚಿನ ಮನೆಗಳಲ್ಲಿ ಎಲ್ ಪಿ ಜಿ ಗ್ಯಾಸ್ ಕನೆಕ್ಷನ್ ಇದ್ದೇ ಇರುತ್ತದೆ. ಹೆಚ್ಚಿನ ಜನರ ಮನೆಯಲ್ಲಿ ಇರುವುದೇ ಎಲ್ ಪಿ ಜಿ ಗ್ಯಾಸ್. ಇಂಧನದ ವ್ಯವಸ್ಥೆಯಿಂದಾಗಿ ಪರ್ಯಾವರಣದ ಮಾಲಿನ್ಯತೆ ಕೂಡ ಕಡಿಮೆಯಾಗುತ್ತದೆ. ಇಷ್ಟು ಮಾತ್ರವಲ್ಲದೆ ಎಲ್ ಪಿ ಜಿ ಗ್ಯಾಸ್ ಬಳಕೆಯಿಂದಾಗಿ ಹಲವಾರು ಉಪಯೋಗಗಳು ಕೂಡ ಇವೆ.vಇಂದಿನ ದಿನಗಳಲ್ಲಿ ಭಾರತದ ಪ್ರತಿಯೊಂದು ಅಡುಗೆಮನೆಗಳಲ್ಲಿ ಗ್ಯಾಸ್ ಕನೆಕ್ಷನ್ ಇದೆ. ಆದರೆ ಒಂದು ಕಾಲದಲ್ಲಿ ಅಡುಗೆ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಹಾಕಿಸುವುದು ಸಾಕಷ್ಟು ಕಷ್ಟಕರವಾದ ಕೆಲಸವಾಗಿತ್ತು. ಇಂದು ಪ್ರತಿಯೊಂದು ಮನೆಗಳಲ್ಲಿ ಕೂಡ ನೀವು ಸುಲಭವಾಗಿ ಗ್ಯಾಸ್ ಕನೆಕ್ಷನ್ ಅನ್ನು ಹಾಕಿಸಬಹುದು ಆಗಿದೆ. ಇಷ್ಟು ಮಾತ್ರವಲ್ಲದೆ ಗ್ಯಾಸ್ ಕಂಪನಿಗಳಿಂದ ಇದರ ಕುರಿತು ಹಲವಾರು ಸ್ಕೀಮ್ಗಳು ಕೂಡ ನಿಮಗಾಗಿ ಕಾದಿವೆ.

ಆನ್ಲೈನ್ ಟ್ರಾನ್ಸ್ಫರ್ ಮಾಡಬಹುದಾದಂತಹ ಸುಲಭ ವಿಧಾನಗಳು ಕೂಡ ಇಲ್ಲಿವೆ. ಈಗಾಗಲೇ ನಿಮ್ಮ ಮನೆಯಲ್ಲಿ ಯಾರೊಬ್ಬರ ಹೆಸರಿನಲ್ಲಿ ಮೊದಲೇ ಗ್ಯಾಸ್ ಕನೆಕ್ಷನ್ ಇದ್ದು ಮತ್ತೊಂದು ಗ್ಯಾಸ್ ಕನೆಕ್ಷನ್ ಪಡೆಯಬೇಕೆಂಬ ಇಚ್ಛೆ ನಿಮಗಿದ್ದರೆ, ಇದು ನಿಮಗೆ ಸುಲಭವಾಗಿ ದೊರೆಯಲಿದೆ. ಈಗಾಗಲೇ ಗ್ಯಾಸ್ ಕನೆಕ್ಷನ್ ಹೊಂದಿರುವವರ ಗ್ಯಾಸ್ ಕನೆಕ್ಷನ್ ದಾಖಲೆಗಳ ಜೊತೆಗೆ ನಿಮ್ಮ ಆಧಾರ್ ಕಾರ್ಡನ್ನು ಗ್ಯಾಸ್ ಏಜೆನ್ಸಿಗೆ ಸಬ್ಮಿಟ್ ಮಾಡಬೇಕಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಪ್ರಕಾರ ನೋಡುವುದಾದರೆ ನೀವು ದೇಶದ ಯಾವುದೇ ಮೂಲೆಯಲ್ಲಿದ್ದರೂ ಕೂಡ ನಿಮ್ಮ ಕುಟುಂಬದವರಿಗೆ ಮತ್ತೊಂದು ಗ್ಯಾಸ್ ಕನೆಕ್ಷನ್ ಅನ್ನು ಮಾಡಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಈಗಾಗಲೇ ನಿಮ್ಮ ಗ್ಯಾಸ್ ಕನೆಕ್ಷನ್ ಗೆ ಹೇಗೆ ನಿಮಗೆ ಸಬ್ಸಿಡಿ ಸಿಗುತ್ತದೆಯೋ ಅದೇ ರೀತಿ ಹೊಸ ಗ್ಯಾಸ್ ಕನೆಕ್ಷನ್ ಗೆ ಕೂಡ ನಿಮಗೆ ಸಬ್ಸಿಡಿ ಸಿಗುವಂತೆ ಮಾಡಬಹುದಾಗಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಗ್ಯಾಸ್ ಕನೆಕ್ಷನ್ ಗೆ ಆಧಾರ್ ಕಾರ್ಡ್ ಪ್ರಮುಖವಾಗಿರುತ್ತದೆ. ಹೀಗಾಗಿ ಈ ಪ್ರಕ್ರಿಯೆಯಲ್ಲಿ ಯಾವುದೇ ಅಚಾತುರ್ಯ ನಡೆಯುವ ಯಾವುದೇ ನಿರೀಕ್ಷೆ ಇರುವುದಿಲ್ಲ. ಒಂದೇ ಅಡ್ರೆಸ್ಸಿಗೆ ಹಲವಾರು ಗ್ಯಾಸ್ ಕನೆಕ್ಷನ್ ಪಡೆಯುವಂತಹ ಅವಕಾಶಗಳು ಕೂಡ ಇಂದಿನ ಸ್ಥಿತಿಯಲ್ಲಿ ಉಪಲಬ್ಧವಿದೆ. ನಿಮ್ಮ ತಂದೆ-ತಾಯಿ ಅಣ್ಣ-ತಂಗಿ ಅಥವಾ ಸಂಬಂಧಿಕರ ಹೆಸರಿನಲ್ಲಿ ಈಗಾಗಲೇ ಗ್ಯಾಸ್ ಕನೆಕ್ಷನ್ ಇದ್ದರೆ ಇದರ ಆಧಾರದ ಮೇಲೆ ಇನ್ನೊಂದು ಗ್ಯಾಸ್ ಕನೆಕ್ಷನ್ ಕೂಡ ಪಡೆಯಬಹುದಾಗಿದೆ. ಈಗಾಗಲೇ ಗ್ಯಾಸ್ ಕನೆಕ್ಷನ್ ಹೊಂದಿರುವ ಕಂಪನಿಯಲ್ಲಿ ದಸ್ತಾವೇಜುಗಳನ್ನು ಜಮೆ ಮಾಡಬೇಕಾಗುತ್ತದೆ.

ನಂತರ ನಿಮ್ಮ ಅಡ್ರೆಸ್ ವೆರಿಫಿಕೇಶನ್ ಗಾಗಿ ಬರುತ್ತಾರೆ. ನಂತರವೇ ನಿಮಗೆ ಇನ್ನೊಂದು ಗ್ಯಾಸ್ ಕನೆಕ್ಷನ್ ದೊರೆಯುತ್ತದೆ. ಇನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕೂಡ ನಿಮಗೆ ಹೊಸ ಗ್ಯಾಸ್ ಕನೆಕ್ಷನ್ ದೊರೆಯುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ನೀವು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ನೀವು ಹೊಸ ಗ್ಯಾಸ್ ಕನೆಕ್ಷನ್ ಗಾಗಿ ಆಯಿಲ್ ಕಂಪನಿಯಲ್ಲಿ ರಿಕ್ವೆಸ್ಟ್ ಮಾಡಿದಾಗ ನಿಮ್ಮ ವೆರಿಫಿಕೇಶನ್ ಮಾಡುತ್ತಾರೆ. ನಂತರವೇ ನಿಮಗೆ ಹೊಸ ಗ್ಯಾಸ್ ಕನೆಕ್ಷನ್ ದೊರೆಯಲಿದೆ. ಈ ವಿಚಾರಗಳು ನಿಮ್ಮ ದೈನಂದಿನ ಜೀವನದಲ್ಲಿ ನಿಮಗೆ ಉಪಯುಕ್ತಕರ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಪ್ಪದೇ ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.