ಮಧ್ಯಮ ವರ್ಗದವರಿಗೆ ಇದಕ್ಕಿಂತ ಬೆಸ್ಟ್ ಯೋಜನೆ ಮತ್ತೊಂದಿಲ್ಲ: ಕಡಿಮೆ ಹಣದಲ್ಲಿ ಕೋಟಿ ಪಡೆಯುವುದು ಹೇಗೆ ಗೊತ್ತೇ??

ನಿವೃತ್ತಿ ಪಡೆಯುವ ಸಮಯದಲ್ಲಿ ಉತ್ತಮ ಮೊತ್ತದ ಹಣ ಪಡೆದು, ಒಳ್ಳೆಯ ರೀತಿಯಲ್ಲಿ ಜೀವನ ನಡೆಸಬೇಕು ಎನ್ನುವುದು ಎಲ್ಲರ ಆಸೆ. ಅದಕ್ಕಾಗಿ ನೀವು ಕಡಿಮೆ ಹಣ ಹೂಡಿಕೆ ಮಾಡಿ, ದೀರ್ಘಕಾಲದ ಬಳಿಕ ದೊಡ್ಡ ಕಾರ್ಪಸ್ ಪಡೆಯುವ ಯೋಜನೆಯೊಂದರ ಬಗ್ಗೆ ಇಂದು ತಿಳಿಸುತ್ತೇವೆ. ಇದು ಪಿಪಿಎಫ್ ಹೂಡಿಕೆ. ಈ ಯೋಜನೆ ಮೂಲಕ ಸರ್ಕಾರ ಜನರಿಗೆ ಆರ್ಥಿಕ ಭದ್ರತೆ ನೀಡುತ್ತದೆ. ಈ ಯೋಜನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದು ವರ್ಷಕ್ಕೆ 46,800 ವರೆಗೂ ತೆರಿಗೆ ವಿನಾಯಿತಿ ಪಡೆಯಬಹುದು. ಶೇ.30ರಷ್ಟು ಆದಾಯ ತೆರಿಗೆ ದರದ ಸ್ಕ್ಯಾಬ್ ನಲ್ಲಿ ಇಷ್ಟು ತೆರಿಗೆ ವಿನಾಯಿತಿ ಸಿಗುತ್ತದೆ.

ಪಿಪಿಎಫ್ ಖಾತೆಯನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ತೆರೆಯಬಹುದು. ಈ ಯೋಜನೆಯು 500 ರೂಪಾಯಿ ಇಂದ ಶುರುಮಾಡಿ, ವಾರ್ಷಿಕವಾಗಿ 1.5ಲಕ್ಷ ರೂಪಾಯಿ ವರೆಗೂ ಇಡಬಹುದು. ಪಿಪಿಎಫ್ ನ ಮೆಚ್ಯುರಿಟಿ ಸಮಯ 15 ವರ್ಷಗಳು, ಆದರೆ ಇದನ್ನು 5 ವರ್ಷಗಳ ವರೆಗೂ ಎಷ್ಟು ಸಾರಿ ಬೇಕಾದರೂ ವಿಸ್ತರಿಸಬಹುದು. ಉದಾಹರಣೆಗೆ ನೀವು 25ನೇ ವಯಸ್ಸಿನಲ್ಲಿ ಪಿಪಿಎಫ್ ಹೂಡಿಕೆ ಶುರು ಮಾಡಿದರೆ, 60ನೇ ವಯಸ್ಸಿಗೆ ಕಾಲಿಡುವ ವರೆಗೂ 2.26ಕೋಟಿ ರೂಪಾಯಿ ನಿವೃತ್ತ ನಿಧಿಯ ಕಾರ್ಪಸ್ ನಿಮಗೆ ಸಿಗುತ್ತದೆ. ಈ ಯೋಜನೆಯಲ್ಲಿ ಗರಿಷ್ಠ ಕೊಡುಗೆ ಠೇವಣಿ ಮಾಡಿದ ನಂತರ ಇದು ಸಾಧ್ಯವಾಗುತ್ತದೆ.

ಪಿಪಿಎಫ್ ನಲ್ಲಿ ನೀವು 1.15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ ನಿಮಗೆ 10,650 ರೂಪಾಯಿ ಲಾಭ ಸಿಗುತ್ತದೆ. ಪ್ರತಿ ವರ್ಷ ನೀವು 1.50 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 15 ವರ್ಷಗಳ ಬಳಿಕ, 40,68,209 ರೂಪಾಯಿ ಸಿಗುತ್ತದೆ. ಇಲ್ಲಿ ನೀವು ಹೂಡಿಕೆ ಮಾಡಿರುವುದು 22.5 ಲಕ್ಷ, ಇದರ ಬಡ್ಡಿ ಆದಾಯ 18,18,209 ಲಕ್ಷ ರೂಪಾಯಿ ಆಗಿರುತ್ತದೆ. 25 ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ, 40ನೇ ವಯಸ್ಸಿನಲ್ಲಿ ಇಷ್ಟು ಹಣ ಸಿಗುತ್ತದೆ. ಪಿಪಿಎಫ್ ಇನ್ನೇನು ಮುಕ್ತಾಯವಾಗಲಿದೆ ಎನ್ನುವ ಸಮಯದಲ್ಲಿ ನೀವು 5 ವರ್ಷಗಳ ವರೆಗೂ ವಿಸ್ತರಣೆ ಮಾಡಬಹುದು. ಮೊದಲ ವಿಸ್ತರಣೆ ಸಮಯಕ್ಕೆ, 45ನೇ ವಯಸ್ಸಿನಲ್ಲಿ ನಿಮ್ಮ ಖಾತೆಯಲ್ಲಿ 66,58,288 ರೂಪಾಯಿಗಳು ಇರುತ್ತದೆ. ಇಲ್ಲಿ ನಿಮ್ಮ ಹೂಡಿಕೆ 30 ಲಕ್ಷ, 36,58,288 ಬಡ್ಡಿ ಆದಾಯ ಆಗಿರುತ್ತದೆ. ಹೀಗೆ ಮೂರು ಸಾರಿ ವಿಸ್ತರಣೆ ಮಾಡಿದರೆ, ನಿಮಗೆ 60 ವರಹ ಆಗುವ ಸಮಯಕ್ಕೆ, ನಿಮ್ಮ ಪಿಪಿಎಫ್ ಖಾತೆಯಲ್ಲಿ ₹2,26,97,857 ರೂಪಾಯಿಗಳು ಇರುತ್ತದೆ.