ಹತ್ತು ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿರುವ ಮನೆಯವರು ಇದೊಂದು ಖಾತೆ ತೆಗೆದರೆ ಸಾಕು, ತಿಂಗಳಿಗೆ ಹುಡುಕಿಕೊಂಡು ಬರಲಿ 2500 ರೂಪಾಯಿ. ಹೇಗೆ ಗೊತ್ತೇ??

ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಲು ಬಯಸುವವರಿಗೆ ಪೋಸ್ಟ್ ಆಫೀಸ್ ಉತ್ತಮವಾದ ಆಯ್ಕೆ ಆಗಿದೆ. ಪೋಸ್ಟ್ ಆಫೀಸ್ ನ ಎಂಐಎಸ್ ಉಳಿತಾಯ ಯೋಜನೆಯ ಅಡಿಯಲ್ಲಿ ನೀವು ಒಂದು ಸಾರಿ ಹಣ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಬಡ್ಡಿ ರೀತಿಯಲ್ಲಿ ಲಾಭ ಪಡೆಯುತ್ತೀರಿ. ಇದರಲ್ಲಿ ಹಲವು ರೀತಿಯ ಪ್ರಯೋಜನ ಇದೆ, ನಿಮ್ಮ ಮಕ್ಕಳು 10 ವರ್ಷಕ್ಕಿಂತ ದೊಡ್ಡವರಾದರೆ ಅವರ ಹೆಸರಿನಲ್ಲಿ ಖಾತೆ ತೆರೆಯಬಹುದು. ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆದರೆ, ಬರುವ ಬಡ್ಡಿ ಹಣದಿಂದ ಅವರ ವಿದ್ಯಾಭ್ಯಾಸ ಖರ್ಚುಗಳನ್ನು ನೋಡಿಕೊಳ್ಳಬಹುದು. ಈ ಯೋಜನೆಯ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಸುತ್ತೇವೆ ನೋಡಿ..

*ನಿಮಗೆ ಹತ್ತಿರದ ಯಾವುದೇ ಪೋಸ್ಟ್ ಆಫೀಸ್ ನಲ್ಲಿ ಈ ಖಾತೆ ತೆರೆಯಬಹುದು.
*ಈ ಖಾತೆಯಲ್ಲಿ ಕನಿಷ್ಠ ₹1000 ರೂಪಾಯಿ ಹಾಗೂ ಗರಿಷ್ಠ ₹4.5 ಲಕ್ಷ ರೂಪಾಯಿ ಠೇವಣಿ ಮಾಡಬಹುದು.
*ಸಧ್ಯಕ್ಕೆ ಈ ಯೋಜನೆಯ ಅಡಿಯಲ್ಲಿ ಶೇ.6.6 ರಷ್ಟು ಬಡ್ಡಿ ಸಿಗಲಿದೆ.
*ಮಗುವಿನ ವಯಸ್ಸು 10 ವರ್ಷಕ್ಕಿಂತ ಹೆಚ್ಚಿದ್ದರೆ, ಮಗುವಿನ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದು. ಒಂದು ವೇಳೆ ಕಡಿಮೆ ವಯಸ್ಸು ಇದ್ದಲ್ಲಿ, ತಂದೆ ತಾಯಿ ಹೆಸರಿನಲ್ಲಿ ಖಾತೆ ತೆರೆಯಬಹುದು. ಈ ಯೋಜನೆಯ ಮುಕ್ತಾಯದ ಸಮಯ 5 ವರ್ಷಗಳು. ನಂತರ ನಿಲ್ಲಿಸಬಹುದು.

ಉದಾಹರಣೆಗೆ, ನಿಮ್ಮ ಮಗು 10 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ನೀವು ಮಗುವಿನ ಹೆಸರಿನಲ್ಲಿ 2 ಲಕ್ಷ ಠೇವಣಿ ಮಾಡಿದರೆ, ಶೇ.6.6 ರಷ್ಟು ಬಡ್ಡಿ ಬರುತ್ತದೆ ಎನ್ನುವುದಾದರೆ, ₹1100 ರೂಪಾಯಿ ಬಡ್ಡಿ ಬರುತ್ತದೆ. ಐದು ವರ್ಷಕ್ಕೆ ₹66,000 ಸಾವಿರ ರೂಪಾಯಿ ಬಡ್ಡಿ ಬರುತ್ತದೆ, ಹಾಗೂ 2 ಲಕ್ಷ ರೂಪಾಯಿಯನ್ನು ಸಹ ಪಡೆಯುತ್ತೀರಿ. ಮಗುವಿನ ಶಿಕ್ಷಣಕ್ಕೆ ಬಳಸುವ ಹಾಗೆ, 1100 ರೂಪಾಯಿಗಳನ್ನು ಪಡೆಯುತ್ತೀರಿ. ಇದು ತಂದೆ ತಾಯಿಗೆ ಸಹಾಯ ಮಾಡುತ್ತದೆ. ಇಲ್ಲಿ ಮತ್ತೊಂದು ವಿಶೇಷತೆ ಇದೆ, ಮೂರು ವಯಸ್ಕರ ಜೊತೆಗೆ ಜಂಟಿ ಖಾತೆ ತೆರೆಡಿ, 3.50 ಲಕ್ಷ ರೂಪಾಯಿ ಠೇವಣಿ ಮಾಡಿದರೆ, ₹1925 ರೂಪಾಯಿಗಳು ಸಿಗುತ್ತದೆ, ಶಾಲೆಯ ಮಕ್ಕಳಿಗೆ ಇದು ಒಳ್ಳೆಯ ಮೊತ್ತ ಆಗಿದೆ. ಈ ಯೋಜನೆಯಲ್ಲಿ 4.5ಲಕ್ಷ ರೂಪಾಯಿ ಠೇವಣಿ ಮಾಡಿದರೆ, ₹2475 ರೂಪಾಯಿ ಬಡ್ಡಿ ಹಣ ಬರುತ್ತದೆ. ಈ ಹಣದಿಂದ ನೀವು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಬೋಧನೆ ಶುಲ್ಕ, ಪೆನ್ ಪೇಪರ್ ಇತ್ಯಾದಿಗಳಿಗೆ ಬಳಸಿಕೊಳ್ಳಬಹುದು.