ನಿಮಗೆ ತಿಂಗಳಿಗೆ ಆರಂಭದಲ್ಲಿಯೇ ತಿಂಗಳಿಗೆ 60 ಸಾವಿರ ಸಂಬಳ ಬೇಕು ಎಂದರೆ ಮಾಡಬೇಕಾದ ಕೋರ್ಸ್ ಯಾವುದು ಗೊತ್ತೇ?? ಬೆಸ್ಟ್ ಕೆರಿಯರ್ ಆಯ್ಕೆ ಯಾವುದು ಗೊತ್ತೇ??

10ನೇ ತರಗತಿ ಮತ್ತು ಪಿಯುಸಿ ಮುಗಿದ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೂ ಕಾಡುವ ಪ್ರಶ್ನೆ ಯಾವ ಕೋರ್ಸ್ ಮಾಡಿದರೆ ಒಳ್ಳೆಯ ಕೆಲಸ ಸಿಗುತ್ತದೆ ಎನ್ನುವುದು. ಸರಿಯಾದ ಗೈಡೆನ್ಸ್ ಇಲ್ಲದೆ ಕೆಲವೊಮ್ಮೆ ಯಾವುದೋ ಕೋರ್ಸ್ ಗಳಿಗೆ ಸೇರಿ, ಸರಿಯಾದ ಕೆಲಸ ಸಿಗದೆ ಕಷ್ಟಪಡುವ ಹಾಗೆ ಆಗುತ್ತದೆ. ಭಾರತದಲ್ಲಿ ಉತ್ತಮವಾದ ಕೆಲಸ ಸಿಗುವ, ಸಂಬಳ ಸಿಗುವ ಕೋರ್ಸ್ ಗಳು ಯಾವುವು ಎಂದು ಇಂದು ನಿಮಗೆ ತಿಳಿಸುತ್ತೇವೆ. ನಿಮಗೆ ಯಾವ ಫೀಲ್ಡ್ ನಲ್ಲಿ ಆಸಕ್ತಿ ಇದೆಯೋ ಆ ಕೋರ್ಸ್ ಆಯ್ಕೆ ಮಾಡಿಕೊಳ್ಳಿ, ಕೆರಿಯರ್ ಗೆ ಸಹಾಯ ಮಾಡುವ ಆ ಕೋರ್ಸ್ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

*ಮರ್ಚೆಂಟ್ ನೇವಿ :- ಸಂಬಳದ ದೃಷ್ಟಿಯಲ್ಲಿ ನೋಡುವುದಾದರೆ ಇದು ಉತ್ತಮವಾದ ಕೆಲಸ. ವಿಜ್ಞಾನ ಓದಿರುವವರು ಈ ಕ್ಷೇತ್ರಕ್ಕೆ ಸೇರಬಹುದು, ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಮ್ಯಾತ್ಸ್ ನಲ್ಲಿ ಶೇ.55ರಷ್ಟು ಅಂಕ ಪಡೆದಿರಬೇಕು. ಈ ಕ್ಷೇತ್ರದಲ್ಲಿ ಕ್ಯಾಪ್ಟನ್, ಮೆರೈನ್ ಇಂಜಿನಿಯರಿಂಗ್, ನ್ಯಾವಿಗೇಶನ್ ಇಂಜಿನಿಯರಿಂಗ್ ಇವುಗಳಿಗೆ ಅಪ್ಲಿಕೇಶನ್ ಹಾಕಬಹುದು. ಆರಂಭದಲ್ಲಿ 50 ರಿಂದ 60ಸಾವಿರ ಸಂಬಳ ಸಿಗುತ್ತದೆ, ಅನುಭವ ಶ್ರೇಣಿ ಹೆಚ್ಚಾದ ಹಾಗೆ ಸಂಬಳ ಹೆಚ್ಚಾಗುತ್ತದೆ.
*ಸೈಂಟಿಸ್ಟ್ :- ಇದು ಕೂಡ ಹೆಚ್ಚು ಸಂಬಳ ಬರುವ ಕೆಲಸಗಳಲ್ಲಿ ಒಂದು. ವಿಜ್ಞಾನ ಓದಿದವರು ಚಿಕ್ಕ ವಯಸ್ಸಿನಿಂದಲೇ ಈ ಕೆಲಸಕ್ಕೆ ಟ್ರೈ ಮಾಡಬಹುದು. ಆರಂಭದಲ್ಲಿ 40 ರಿಂದ 45 ಸಾವಿರ ಸಂಬಳ ಇರುತ್ತದೆ. ಕೆಲ ಸಮಯದ ಬಳಿಕ ವಾರ್ಷಿಕ ವೇತನ 8 ರಿಂದ 15 ಲಕ್ಷದವರೆಗೂ ಹೋಗಬಹುದು.
*ಚಾರ್ಟೆಡ್ ಅಕೌಂಟೆಂಟ್ :- ಎಲ್ಲಾ ಕಂಪೆನಿಗಳಿಗೂ ಲೆಕ್ಕದ ವ್ಯವಹಾರ ನೋಡಿಕೊಳ್ಳಲು ಚಾರ್ಟೆಡ್ ಅಕೌಂಟೆಂಟ್ ಬೇಕೇ ಬೇಕು. ಈ ಕೆಲಸಕ್ಕೆ ಬೇರೆ ಕೆಲಸಗಳಿಗಿಂತ ಹೆಚ್ಚಿನ ವೇತನ ಇರುತ್ತಡ. ವಾರ್ಷಿಕ 15 ರಿಂದ 20 ಲಕ್ಷದ ಪ್ಯಾಕೇಜ್ ಸಿಗಬಹುದು. ಚಾರ್ಟೆಡ್ ಅಕೌಂಟೆಂಟ್ ಕೋರ್ಸ್ ಓದಿದರೆ ಮಾತ್ರ ಈ ಕೆಲಸ ಸಿಗುತ್ತದೆ.

*ಡೇಟಾ ವಿಜ್ಞಾನಿ :- ಇದು ಐಟಿ ಕ್ಷೇತ್ರದ ಹೊಸ ಉದ್ಯೋಗ, ಭಾರತದಲ್ಲಿ ಇದಕ್ಕೆ ಸ್ಕೋಪ್ ಹೆಚ್ಚಾಗುತ್ತಿದೆ. ಟೆಕ್ನಿಕಲ್ ಕ್ಷೇತ್ರಕ್ಕೆ ಸಂಬಂಧಿಸಿದ ಡೇಟಾ ಪರಿಣಾಮದ ಪೂರ್ತಿ ಅಕೌಂಟ್ಸ್ ಅನ್ನು ಡೇಟಾ ವಿಜ್ಞಾನಿ ನೋಡಿಕೊಳ್ಳುತ್ತಾನೆ. ಡೇಟಾ ವಿಜ್ಞಾನಿ ಟ್ರೈನಿ ಆಗಿ ವಾರ್ಷಿಕವಾಗಿ 3 ರಿಂದ 4 ಲಕ್ಷ ಸಂಬಳ ಸಿಗುತ್ತದೆ. 2 ವರ್ಷಗಳ ಬಳಿಕ ಸಂಬಳ ಹೆಚ್ಚಾಗುತ್ತದೆ, ವಾರ್ಷಿಕ 14 ರಿಂದ 16 ಲಕ್ಷ ಸಂಬಳ ಸಿಗಬಹುದು. ಈ ಕೆಲಸಕ್ಕೆ ಐಟಿ ಕಂಪ್ಯೂಟರ್ ಸೈನ್ಸ್, ಬಿಸಿಎ, ಎಂಸಿಎ, ಅಥವಾ ಬಿಟೆಕ್ ಪದವಿ ಹೊಂದಿರಬೇಕು.
*ಹೂಡಿಕೆ ಬ್ಯಾಂಕರ್ :- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇವರಿಗೆ ಬೇಡಿಕೆ ಹೆಚ್ಚು, ಬ್ಯಾಂಕ್ ಅಥವಾ ಬೇರೆ ಸಂಸ್ಥೆಗೆ ಸಮಯಕ್ಕೆ ಹಣ ಒದಗಿಸುವುದು ಇವರ ಕೆಲಸ, ಇವರ ವಾರ್ಷಿಕ ಆದಾಯ ಬೇರೆ ಕೆಲಸಕ್ಕಿಂತ ದುಪ್ಪಟ್ಟು ಇರುತ್ತದೆ. ಇವರ ವೇತನ 4 ರಿಂದ 40 ಲಕ್ಷದ ವರೆಗೂ ಇರುತ್ತದೆ. ಈ ಕೆಲಸಕ್ಕೆ ಎಕನಾಮಿಕ್ಸ್ ಅಥವಾ ಫೈನಾನ್ಸ್ ವಿಷಯದಲ್ಲಿ ಬಿಬಿಎ ಪದವಿ ಪಡೆದಿರಬೇಕು.

*FMCG ಕ್ಷೇತ್ರ :- ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಲ್ಲಿ ಆಸಕ್ತಿ ಇರುವವರಿಗೆ ಇದು ಒಳ್ಳೆಯ ಕೆಲಸ ಆಗಿದೆ, ಈ ಕೆಲಸಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಉತ್ತಮವಾದ ವೇತನ ಸಹ ಸಿಗುತ್ತದೆ. ಮೂರು ವರ್ಷಗಳ ಅನುಭವದ ನಂತರ, ಕೆಲಸ ಮಾಡುವವರಿಗೆ 11.3 ಲಕ್ಷ ವಾರ್ಷಿಕ ವೇತನ ಇರುತ್ತದೆ. ಇಲ್ಲಿ ಕೆಲಸ ಮಾಡುವವರಲ್ಲಿ ಶೇ.30 ರಷ್ಟು ವೇತನ 10 ಲಕ್ಷಕ್ಕಿಂತ ಹೆಚ್ಚು. ಈ ಕೆಲಸಕ್ಕೆ ಮಾರ್ಕೆಟಿಂಗ್ ಹಾಗೂ ಫೈನಾನ್ಸ್ ನಲ್ಲಿ ಬಿಬಿಎ ಅಥವಾ ಎಂಬಿಎ ಮಾಡಿರಬೇಕು.
*ಮಾಹಿತಿ ತಂತ್ರಜ್ಞಾನ :- ಹೆಚ್ಚು ಸಂಬಳ ನೀಡುವ ಕ್ಷೇತ್ರದಲ್ಲಿ ಐಟಿ ಅಗ್ರಸ್ಥಾನದಲ್ಲಿರುತ್ತದೆ. ಐಪಿ ಕ್ಯಾಪಿಟಲ್ ಎನ್ನಿಸಿಕೊಂಡಿರುವ ಬೆಂಗಳೂರು ದೇಶದಲ್ಲಿ ಹೆಚ್ಚು ಸಂಭಾವನೆ ಪಡೆಯುವ ಸ್ಥಳವಾಗಿದೆ. ವಾರ್ಷಿಕ ವೇತನ 14.6 ಲಕ್ಷ ರೂಪಾಯಿ ಇರುತ್ತದೆ. ಇದಕ್ಕೆ ನೀವು ಐಟಿ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಕ್, ಬಿಸಿಎ, ಬಿಇ ಅಥವಾ ಎಂಸಿಎ ಮಾಡಿದ್ದರೆ ಇಲ್ಲಿ ಕೆಲಸ ಸಿಗುತ್ತದೆ.
*ಟೆಲಿಕಾಂ ಕ್ಷೇತ್ರ :- ಈ ಕ್ಷೇತ್ರ ಹುಡುಗರಿಗೆ ಇಷ್ಟವಾಗುತ್ತದೆ, ಇಲ್ಲಿ ಬೆಳವಣಿಗೆ ಮತ್ತು ಸಂಬಳ ಎರಡು ಸಹ ಚೆನ್ನಾಗಿರುತ್ತದೆ. ಸ್ವಲ್ಪ ಸಮಯ ಕೆಲಸ ಮಾಡಿದ ಬಳಿಕ, ಇಲ್ಲಿ ವಾರ್ಷಿಕ ಆದಾಯ 8.6 ಲಕ್ಷದ ವರೆಗೂ ಪಡೆಯಬಹುದು. ಇದಕ್ಕೆ ನೀವು ಟೆಲಿಕಾಂ ನಲ್ಲಿ ಬಿಬಿಎ ಅಥವಾ ಎಂಬಿಎ ಮಾಡಿರಬೇಕು.