ರಾತ್ರಿ ಮಲಗುವಾಗ ಲೈಟ್ ಆಫ್ ಮಾಡಬೇಡ ಅಥವಾ ಬೇಡವಾ?? ಕೊಂಚ ಯಾಮಾರಿದರೂ ಏನೆಲ್ಲಾ ಆಗುತ್ತದೆ ಗೊತ್ತೇ?? ತಿಳಿದರೆ ಇಂದೇ ಇದನ್ನು ಫಾಲೋ ಮಾಡುತ್ತೀರಿ.

ನಿದ್ದೆ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಬಹಳ ಮುಖ್ಯವಾದ ಅಂಶ. ಮನುಷ್ಯನು ಪ್ರತಿದಿನ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು, ಚೆನ್ನಾಗಿ ನಿದ್ದೆ ಮಾಡಿದರೆ, ದೇಹಕ್ಕೆ ಬರುವ ಸಮಸ್ಯೆಗಳು ಕಡಿಮೆಯಾಗುತ್ತವೆ. ನಿದ್ದೆ ಚೆನ್ನಾಗಿ ಆದಾಗ, ಮನುಷ್ಯನ ಮಾನಸಿಕ ಸ್ಥಿತಿ ಕೂಡ ಚೆನ್ನಾಗಿಯೇ ಇರುತ್ತದೆ. ಒಳ್ಳೆಯ ನಿದ್ದೆ, ಮೆದುಳು ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ, ದೇಹಕ್ಕೆ ವಿಶ್ರಾಂತಿ ಸಿಕ್ಕಿ, ಸ್ನಾಯುಗಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ಆದರೆ ನಿದ್ದೆ ಮಾಡುವಾಗ ಜನರು ಕೆಲವು ತಪ್ಪುಗಳನ್ನು ಮಾಡುತ್ತಾರೆ, ಆ ರೀತಿ ಮಾಡುವುದರಿಂದ ದೇಹಕ್ಕೆ ಹಾನಿ ಉಂಟಾಗಬಹುದು.

ಸಾಮಾನ್ಯವಾಗಿ ಬಹುತೇಕ ಜನರು ನಿದ್ದೆ ಮಾಡುವ ಮೊದಲು ಕೋಣೆಯ ಲೈಟ್ಸ್ ಆಫ್ ಮಾಡಿ ನಿದ್ದೆ ಮಾಡುತ್ತಾರೆ ಆದರೆ ಇನ್ನೂ ಕೆಲವರು ಕೋಣೆಯ ಲೈಟ್ಸ್ ಆನ್ ಮಾಡಿಯೇ ಮಲಗುತ್ತಾರೆ, ಆದರೆ ಲೈಟ್ಸ್ ಆನ್ ಮಾಡಿ ಮಲಗುವುದು ಆರೋಗ್ಯಕ್ಕೆ ಹಾನಿಕರ, ನಿದ್ದೆ ಮಾಡುವಾಗ ಅಪ್ಪಿ ತಪ್ಪಿ ಕೂಡ ಈ ತಪ್ಪನ್ನು ಮಾಡಬೇಡಿ. ಲೈಟ್ಸ್ ಆನ್ ಮಾಡಿ ಮಲಾಗುವುದರಿಂದ ಈ ತೊಂದರೆಗಳು ನಿಮಗೆ ಉಂಟಾಗಬಹುದು..
*ಮಾನಸಿಕ ಖಿನ್ನತೆ :- ಆರೋಗ್ಯಕ್ಕೆ ಬೆಳಕು ಎಷ್ಟು ಮುಖ್ಯವೋ, ಕತ್ತಲೆ ಕೂಡ ಅಶ್ಟೇ ಮುಖ್ಯ. ಸ್ವೀಡನ್ ಅಂತಹ ಪ್ರದೇಶದಲ್ಲಿ 6 ತಿಂಗಳು ಸೂರ್ಯ ಮುಳುಗುವುದೇ ಇಲ್ಲ, ಅಲ್ಲೆಲ್ಲಾ ಜನರು ಈ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಭಾರತದಲ್ಲಿ ನಾವು ರಾತ್ರಿ ಹೊತ್ತಿನಲ್ಲಿ ಲೈಟ್ಸ್ ಆನ್ ಮಾಡುವುದು ನೀಲಿ ದೀಪಗಳು, ಅವುಗಳಿಂದ ಹೊರಬರುವ ಕಿರಣ ಕಿರಿ ಕಿರಿ ಉಂಟು ಮಾಡುತ್ತದೆ, ಹಾಗಾಗಿ ಲೈಟ್ಸ್ ಆನ್ ಮಾಡಿ ಮಲಗಬಾರದು ಎಂದು ಹೇಳುತ್ತಾರೆ.

*ರೋಗಗಳು ಶುರುವಾಗುತ್ತದೆ :- ಸದಾ ಲೈಟ್ಸ್ ಆನ್ ಮಾಡಿ ಮಲಗುವುದರಿಂದ ಶಾಂತಿಯುತ ನಿದ್ರೆಗೆ ತೊಂದರೆ ಆಗುತ್ತದೆ. ಇದರಿಂದ ಹೈದ್ರೋಗ, ಬಿಪಿ ಅಂತಹ ಸಮಸ್ಯೆಗಳು ಶುರುವಾಗಬಹುದು, ಇನ್ನು ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು. ಹಾಗಾಗಿ ಲೈಟ್ಸ್ ಆನ್ ಮಾಡಿ ಮಲಗಬೇಡಿ.
*ದಣಿವು :- ಸಾಮಾನ್ಯವಾಗಿ ಲೈಟ್ಸ್ ಆನ್ ಮಾಡಿ ನಿದ್ದೆ ಮಾಡುವುದರಿಂದ ಸರಿಯಾಗಿ ನಿದ್ದೆ ಬರುವುದಿಲ್ಲ, ಇದರ ಪರಿಣಾಮ ಕಂಡುಬರುವುದು ಮರುದಿನ. ನಿದ್ದೆ ಸರಿಯಾಗಿ ಮಾಡದೆ ಇದ್ದರೆ, ಮರುದಿನ ಕೆಲಸ ಮಾಡಲು ಕಷ್ಟವಾಗುತ್ತದೆ. ನಿಮಗೆ ಇದರಿಂದ ಆಲಸ್ಯ ಮತ್ತು ಆಯಾಸ ಆಗುತ್ತದೆ.