ತಮ್ಮ ಆಸೆ ತೀರಿಸಕೊಳ್ಳಲು 16 ವರ್ಷದ ಹುಡುಗಿ 14 ವರ್ಷದ ಬಾಲಕ ಮಾಡಿಕೊಂಡ ಎಡವಟ್ಟು ಏನು ಗೊತ್ತೇ?? ಕೊನೆಗೆ ಯಾವ ಪರಿಸ್ಥಿತಿಗೆ ತಂದಿದ್ದಾರೆ ಗೊತ್ತೇ??

ಶಾಲಾ ಮಕ್ಕಳಿಗೆ ಸರಿಯಾದ ತಿಳುವಳಿಕೆ ಇಲ್ಲದೆ, ಏನೆಲ್ಲಾ ತೊಂದರೆಗಳು ನಡೆದು ಹೋಗುತ್ತದೆ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿ ಕಡಲೂರಿನಲ್ಲಿ ನಡೆದಿದೆ. ಕಡಲೂರು ಜಿಲ್ಲೆಯ ಹಳ್ಳಿಯೊಂದರಲ್ಲಿ 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿ, ಮಗುವನ್ನು ಶಾಲೆಯ ಪೊದೆಯೊಂದರ ಬಳಿ ಎಸೆದು ಹೋಗಿದ್ದಾಳೆ, ಮಗುವನ್ನು ನೋಡಿದ ಶಾಲೆಯ ವಿದ್ಯಾರ್ಥಿನಿ ಕೂಡಲೇ ಸಹಾಯಕ ಮುಖ್ಯೋಪಾಧ್ಯಾಯಿನಿಯವರಿಗೆ ವಿಚಾರ ತಿಳಿಸಿದ್ದಾರೆ.

ಅವರು ಕೂಡಲೇ ಪೊಲೀಸರಿಗೆ ಕರೆ ಮಾಡಿ, ಈ ವಿಚಾರ ತಿಳಿಸಿದ್ದು, ಪೊಲೀಸರು ಬಂದು ಸ್ಥಳವನ್ನು ನೋಡಿ, ಮಗು ಸತ್ತು ಹೋಗಿರುವುದನ್ನು ನೋಡಿ, ಬಹುಶಃ ಶಾಲೆಯ ವಿಶ್ರಾಂತಿ ಕೊಠಡಿಯಲ್ಲಿ ಯಾವುದಾದರೂ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿರಬಹುದು ಎಂದು ಶಂಕಿಸಿಡಿದ್ದಾರೆ. ಮಗುವನ್ನು ಮರಣೋತ್ತರ ಪರೀಕ್ಷೆ ಮಾಡಿಸಲು ಕಾಮರಾಜ್ ಆಸ್ಪತ್ರೆಗೆ ಕಳಿಸಿದ್ದಾರೆ. ಶಾಲೆಯಲ್ಲಿ ವಿಚಾರಿಸಿದ ಬಳಿಕ ಒಬ್ಬ ವಿದ್ಯಾರ್ಥಿನಿ ಆ ರೀತಿ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾಳೆ. ಬಳಿಕ ಪೊಲೀಸರು ಆಕೆಯ ಬಳಿ ಎಲ್ಲವನ್ನು ವಿಚಾರಿಸಿದ್ದಾರೆ.

ಆಕೆ ನೀಡಿರುವ ಮಾಹಿತಿಯ ಪ್ರಕಾರ, ಅದೇ ಊರಿನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿಯ ಗೆಳೆಯನೇ ಇದಕ್ಕೆ ಕಾರಣ ಎಂದು ಆಕೆ ತಿಳಿಸಿದ್ದು, ಪೊಲೀಸರು ಆ ಹುಡುಗನನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯ ಅಡಿ ಹಾಗೂ ಇನ್ನಿತರ ಕಾಯ್ದೆಯ ಅಡಿ ಹುಡುಗನ ಮೇಲೆ ಕೇಸ್ ಹಾಕಿ, ಆತನನ್ನು ಬಂಧಿಸಿದ್ದಾರೆ. ಬಾಲಕನನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಿ, ನಂತರ ವೀಕ್ಷಣಾಲಯಕ್ಕೆ ಕಳಿಸಲಾಗಿದೆ. ಜೊತೆಗೆ ಹುಡುಗಿಯನ್ನು ಕಾಮರಾಜ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ.