ಆಫರ್ ಗಳ ಸುರಿ ಮಳೆಯನ್ನೂ ಸುರಿಸುತ್ತಿರುವ ಜಿಯೋ: ರಿಚಾರ್ಜ್ ಪ್ಲಾನ್ ನಲ್ಲಿ ಬಹುತೇಕ OTT ಗಳು ಫ್ರೀ. ಅದು ಚಿಲ್ಲರೆ ಹಣಕ್ಕೆ. ಎಷ್ಟು ರೀಚಾರ್ಜ್ ಮಾಡಿಸಿದರೆ ಏನು ಸಿಗುತ್ತದೆ ಗೊತ್ತೇ??

ಭಾರತದಲ್ಲಿ ಬಜೆಟ್ ಫ್ರೆಂಡ್ಲಿ ಟೆಲಿಕಾಂ ಸಂಸ್ಥೆ ಎಂದರೆ ನೆನಪಾಗುವುದು ಜಿಯೋ. ಗ್ರಾಹಕರು ಅತಿಹೆಚ್ಚು ಇಷ್ಟಒಡವ, ಗ್ರಾಹಕರ ಬಜೆಟ್ ಅನ್ನು ಸಹ ಗಮನದಲ್ಲಿ ಇಟ್ಟುಕೊಂಡು ಪ್ಲಾನ್ ಗಳನ್ನು ನೀಡುವ ಟೆಲಿಕಾಂ ನೆಟ್ವರ್ಕ್ ಗಳಲ್ಲಿ ಜಿಯೋ ಸಂಸ್ಥೆ ಅಗ್ರಸ್ಥಾನದಲ್ಲಿದೆ. ಕಡಿಮೆ ಹಣದಲ್ಲಿ ಒಳ್ಳೆಯ ಪ್ಲಾನ್ ಗಳು ಜೊತೆಗೆ, ಹಲವು ಹೆಚ್ಚುವರಿ ಯೋಜನೆಗಳನ್ನು ಸಹ ಜಿಯೋ ಸಂಸ್ಥೆ ನೀಡುತ್ತದೆ. ನಿಮಗೆ ಹೆಚ್ಚಿನ ಪ್ರಯೋಜನ ನೀಡುವ ಇಂಥದ್ದೇ ಜಿಯಿ ಪ್ಲಾನ್ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಆ ಪ್ಲಾನ್ ಯಾವುದು ಎಂದು ಈಗ ತಿಳಿಸುತ್ತೇವೆ ನೋಡಿ..

ಇದು ಜಿಯೋ ನ ₹1,499 ರೂಪಾಯಿಯ ಪ್ರೀಪೇಯ್ಡ್ ಯೋಜನೆ ಆಗಿದೆ. ಇದರಲ್ಲಿ ಸಾಮಾನ್ಯವಾಗಿ ಪ್ಲಾನ್ ಗಳ ಜೊತೆಗೆ ಸಿಗುವ ಪ್ರಯೋಜನಗಳ ಜೊತೆಗೆ, ಇನ್ನು ಕೆಲವು ಹೆಚ್ಚುವರಿ ಲಾಭ ಸಿಗಲಿದ್ದು, ಇದು ಗ್ರಾಹಕರಿಗೆ ಬಹಳ ಇಷ್ಟವಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾದರೆ ಇದು 30 ದಿನಗಳ ಪ್ಲಾನ್ ಆಗಿದ್ದು, 300 ಎಂಬಿಪಿಎಸ್ ಸ್ಪೀಡ್ ನಲ್ಲಿ ಡೇಟಾ ಇಂಟರ್ನೆಟ್ ಸಿಗುತ್ತದೆ. ಹಾಗೂ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಹಾಗೂ ಪ್ರತಿದಿನ ಅನಿಯಮಿತ ಕರೆಗಳು ಸಹ ಸಿಗುತ್ತದೆ.

ಇದಷ್ಟೇ ಅಲ್ಲದೆ ಈ ಪ್ಲಾನ್ ನಲ್ಲಿ ಮತ್ತೊಂದು ವಿಶೇಷವಾದ ಯೋಜನೆ ಇದೆ. ಈ ಯೋಜನೆಯು ಬೇರೆ ಸಂಸ್ಥೆಗಳ ಯೋಜನೆಗಳಿಗಿಂತ ಭಿನ್ನವಾಗಿದೆ. ಈ ಪ್ಲಾನ್ ನಲ್ಲಿ ಓಟಿಟಿ ಚಂದಾದಾರಿಕೆ ಸಹ ಸಿಗುತ್ತದೆ, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಗೂ ಇನ್ನು ಹಲವು ಓಟಿಟಿ ಪ್ಲಾಟ್ ಫಾರ್ಮ್ ಗಳ ಚಂದಾದಾರಿಕೆ ಸಹ ಈ ಪ್ಲಾನ್ ನಲ್ಲಿ ಸಿಗಲಿದೆ. ಗ್ರಾಹಕರಿಗೆ ಮನರಂಜನೆ ಮುಖ್ಯ ಎನ್ನುವ ಉದ್ದೇಶದಿಂದ ಈ ಪ್ಲಾನ್ ಮಾಡಲಾಗಿದೆ, ಓಟಿಟಿ ಎಂದರೆ ಈಗ ಜನರಿಗೂ ಆಕರ್ಷಣೆ ಹೆಚ್ಚು ಹಾಗಾಗಿ ಈ ಪ್ಲಾನ್ ನೀಡಲಾಗಿದೆ.