ಬಿಗ್ ನ್ಯೂಸ್: ಬರೋಬ್ಬರಿ 25 ಲಕ್ಷದ ವರೆಗೂ ಸುಲಭ ಲೋನ್ ನೀಡಲು ಮುಂದಾದ SBI. ಲೋನ್ ಪಡೆಯಲು ನೀವೇನು ಮಾಡಬೇಕು ಗೊತ್ತೆ??

ನೀವು ಈಗ ಬ್ಯುಸಿನೆಸ್ ಮಾಡುತ್ತಿದ್ದು, ಅದನ್ನು ವಿಸ್ತರಿಸಲು ಬಯಸಿದರೆ, ಬ್ಯುಸಿನೆಸ್ ಗಾಗಿ ನಿಮ್ಮ ಕೈಯಲ್ಲಿ ಹೆಚ್ಚಿನ ಹಣ ಇಲ್ಲದೆ ಹೋದರೆ, ಎಸ್.ಬಿ.ಐ ನಿಮಗಾಗಿ ಒಂದು ಒಳ್ಳೆಯ ಅವಕಾಶ ತಂದಿದೆ. ಎಸ್.ಬಿ.ಐ ಇಂದ ಬ್ಯುಸಿನೆಸ್ ನಲ್ಲಿ ಮುಂದುವರೆಯಲು ದುಡಿಯುವ ಬಂಡವಾಳಕ್ಕಾಗಿ ಸಾಲ ಪಡೆಯಬಹುದು. ಸಾಲ ಪಡೆಯಲು ಅರ್ಹರಾಗುವ ವ್ಯಕ್ತಿಗಳಿಗೆ ಎಸ್.ಬಿ.ಐ, ಸರಳೀಕೃತ ಸಣ್ಣ ವ್ಯಾಪಾರ ಸಾಲ (SSBL) ಅನ್ನು ನೀಡುತ್ತದೆ. ಈ ಸಾಲ ಕೊಡುವುದು ಬ್ಯುಸಿನೆಸ್ ನ ಬಂಡವಾಳಕ್ಕಾಗಿ ಮಾತ್ರ.

ಸೇವೆ, ಉತ್ಪಾದನೆ, ಸಗಟು ಅಥವಾ ಚಿಲ್ಲರೆ ವ್ಯಾಪಾರ, ಇಂಥ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಸಾಲ ಸಿಗುತ್ತದೆ. ಎಸ್.ಬಿ.ಐ ವೆಬ್ಸೈಟ್ ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಯೋಜನೆಯಲ್ಲಿ 25 ಲಕ್ಷ ರೂಪಾಯಿ ವರೆಗೂ ಸಾಲ ಪಡೆಯಬಹುದು. 10 ರಿಂದ 25 ಲಕ್ಷ ರೂಪಾಯಿ ವರೆಗೂ ಸಾಲ ಪಡೆಯುತ್ತಿದ್ದರೆ, ಅದಕ್ಕೆ ಅಡಮಾನದ ಅಗತ್ಯ ಇದೆ. ಈ ಸಾಲವನ್ನು 5 ವರ್ಷಗಳಲ್ಲಿ ತೀರಿಸಬಹುದು. ಬಾಡಿಗೆ ರೂಮ್ ಅಥವಾ ಬಾಡಿಗೆ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿರುವವರು, ರೆಂಟ್ ಅಗ್ರಿಮೆಂಟ್ ಕೊಡಬೇಕು. ಇಷ್ಟೇ ಅಲ್ಲದೆ, ಎರಡು ವರ್ಷಗಳಿಂದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಇಲ್ಲದೆ ಹೋದಲ್ಲಿ ಸಾಲ ಪಡೆಯಲು ಸಾಧ್ಯವಿಲ್ಲ.

ಸಾಲ ತೆಗೆದುಕೊಳ್ಳಲು ಬಯಸುವವರು, ಸಾಲದ ಬಡ್ಡಿದರಗಳ ಬಗ್ಗೆ ಸಹ ಯೋಚನೆ ಮಾಡಬೇಕಾಗುತ್ತದೆ. ಬಡ್ಡಿದರದಲ್ಲಿ ಬರುವ ಸಣ್ಣ ವ್ಯತ್ಯಾಸ, ನಂತರದ ದಿನಗಳಲ್ಲಿ ದೊಡ್ಡ ಪರಿಣಾಮ ಬೀರಬಹುದು. ಎಸ್.ಬಿ.ಐ ನ ಬಡ್ಡಿದರಗಳು ಹೇಗಿದೆ ಎಂದು ತಿಳಿಯೋಣ.. ಸರಳೀಕೃತ ಸಣ್ಣ ವ್ಯಾಪಾರ ಸಾಲಕ್ಕೆ ಬಾಹ್ಯ ಬೆಂಚ್ ಮಾರ್ಕ್ ಅಧಿಕೃತ ಸಾಲ ದರವನ್ನು ಲಿಂಕ್ ಮಾಡಿದೆ. ಹಾಗಾಗಿ ಈ ಸಾಲದ ಬಡ್ಡಿದರ, ಕೈಗೆಟುಕುವ ಹಾಗಿದೆ. ಶೇ.8.05 ಅಷ್ಟು ಬಡ್ಡಿ ಹೊಂದಿರುತ್ತದೆ. ಜೊತೆಗೆ ಸಿ.ಆರ್.ಪಿ ಮತ್ತು ಬಿ.ಎಸ್.ಪಿ ಇರುತ್ತದೆ. ಮತ್ತೊಂದು ವಿಚಾರ ಏನೆಂದರೆ, ಈ ಸಾಲದಲ್ಲಿ ಸಂಸ್ಕರಣಾ ಶುಲ್ಕ ಇರುತ್ತದೆ, ಅದು 7500 ರೂಪಾಯಿ ಆಗಿರುತ್ತದೆ. ಇದರಲ್ಲಿ ದಾಖಲಾತಿ ಶುಲ್ಕ, ಪರಿಶೀಲನಾ ಶುಲ್ಕ, ಇನ್ನಿತರ ಶುಲ್ಕಗಳನ್ನು ಒಳಗೊಂಡಿರುತ್ತದೆ.