ಸರ್ಕಾರದ ಸಹಾಯದಿಂದ ಈ ಉದ್ಯಮ ಮಾಡಿ, ಈ ಬಿಸಿನೆಸ್ ನಿಂದ ಲಕ್ಷಾಂತರ ರೂಪಾಯಿ ಗಳಿಸಿ. ಹಳ್ಳಿಯಲ್ಲಿದ್ದರೂ ಸುಲಭ ಆದಾಯ ಫಿಕ್ಸ್. ಏನು ಮಾಡ್ಬೇಕು ಗೊತ್ತೇ??

ನೀವು ಬ್ಯುಸಿನೆಸ್ ಮಾಡಲು ಬಯಸುತ್ತಿದ್ದರೆ ಇಂದು ನಿಮಗೆ ಯಾವುದೇ ಕಾರಣಕ್ಕೂ ಲಾಸ್ ಆಗದ ವ್ಯವಹಾರದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಬ್ಯುಸಿನೆಸ್ ಯಾವಾಗಲೂ ಬೇಡಿಕೆಯಲ್ಲಿರುತ್ತದೆ. ಇದರಲ್ಲಿ ನಷ್ಟ ಆಗುವುದು ಬಹಳ ಕಡಿಮೆ. ನಾವು ಹೇಳುತ್ತಿರುವುದು ಡೈರಿ ಉತ್ಪನ್ನಗಳ ಬ್ಯುಸಿನೆಸ್ ಬಗ್ಗೆ. ಈ ಬ್ಯುಸಿನೆಸ್ ಅನ್ನು ನೀವು 5 ಲಕ್ಷ ರೂಪಾಯಿ ಹೂಡಿಕೆಯಲ್ಲಿ ಶುರು ಮಾಡಿ, ಪ್ರತಿತಿಂಗಳು 70 ಸಾವಿರ ರೂಪಾಯಿವರೆಗೂ ಲಾಭ ಪಡೆಯಬಹುದು. ಡೈರಿ ಉತ್ಪನ್ನಗಳ ಬ್ಯುಸಿನೆಸ್ ಗೆ ಸರ್ಕಾರದಿಂದ ಸಹ ಸಾಲ ಸಿಗುತ್ತದೆ. ವರ್ಷದ ಎಲ್ಲಾ ಸಮಯದಲ್ಲೂ ಡಲ್ ಆಗದೆ ಇರುವ ಎವರ್ ಗ್ರೀನ್ ವ್ಯವಹಾರ ಇದಾಗಿದೆ. ಸಣ್ಣ ವ್ಯಾಪಾರ ಮಾಡಲು ಇರುವ, ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಡೈರಿ ಉತ್ಪನ್ನಗಳ ವ್ಯಾಪಾರ ಮಾಡಲು ಸಾಲ ನೀಡಲಾಗುತ್ತದೆ. ಈ ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸರ್ಕಾರ ಸಾಲವನ್ನು ಸಹ ನೀಡುತ್ತದೆ.

ಈ ಬ್ಯುಸಿನೆಸ್ ಶುರು ಮಾಡಲು 16.5 ಲಕ್ಷ ರೂಪಾಯಿ ಬೇಕಾಗುತ್ತದೆ, ಆದರೆ ನೀವು 5 ಲಕ್ಷ ರೂಪಾಯಿಗಳನ್ನು ಒದಗಿಸಿದರೆ ಸಾಕು, ಶೇ.70ರಷ್ಟು ಹಣವನ್ನು ಸರ್ಕಾರ ನೀಡುತ್ತದೆ, 4 ಲಕ್ಷ ರೂಪಾಯಿಯನ್ನು ಬಂಡವಾಳ ಆಗಿ, 7.5 ಲಕ್ಷ ರೂಪಾಯಿಯನ್ನು ಅವಧಿ ಸಾಲವಾಗಿ ನೀಡಲಾಗುತ್ತದೆ. ಪ್ರಧಾನಮಂತ್ರಿಯವರ ಯೋಜನೆಯ ಅಡಿಯಲ್ಲಿ ಈ ಬ್ಯುಸಿನೆಸ್ ಶುರು ಮಾಡಿದರೆ, 75 ಸಾವಿರ ಲೀಟರ್ ಹಾಲು ಮಾರಾಟ ಮಾಡಬಹುದು. 36 ಸಾವಿರ ಲೀಟರ್ ಮೊಸರು, 90 ಸಾವಿರ ಲೀಟರ್ ಬೆಣ್ಣೆ, 4500 ಕೆಜಿ ತುಪ್ಪ ತಯಾರಿಸಿ ಮಾರಾಟ ಮಾಡಬಹುದು. ಇಷ್ಟರಿಂದ 82ಲಕ್ಷದ 50 ಸಾವಿರ ರೂಪಾಯಿಯ ವಹಿವಾಟು ನಡೆಯುತ್ತದೆ. ಇದಕ್ಕೆ 74 ಲಕ್ಷ ರೂಪಾಯಿ ವೆಚ್ಚವಾಗುತ್ತದೆ, ಶೇ.14 ರಷ್ಟು ಬಡ್ಡಿ ಎಂದುಕೊಂಡರು ಸಹ, ನಿಮಗೆ 8 ಲಕ್ಷ ರೂಪಾಯಿ ಲಾಭ ಆಗುತ್ತದೆ.

ಡೈರಿ ವ್ಯವಹಾರ ಶುರು ಮಾಡಲು, 1000 ಅಡಿ ಚದರಗಳಷ್ಟು ಜಾಗ ಬೇಕಾಗುತ್ತದೆ, ಇದರಲ್ಲಿ 500 ಅಡಿ ಚದರ ಸಂಸ್ಕರಣಾ ಪ್ರದೇಶ, 150 ಅಡಿ ಪ್ರದೇಶ ರೆಫ್ರಿಜಿರೇಷನ್ ಕೊಠಡಿ, 150 ಅಡಿ ತೊಳೆಯುವ ಜಾಗ, 100 ಅಡಿ ಚದರದಲ್ಲಿ ಕಚೇರಿ, ಶೌಚಾಲಯ ಹಾಗೂ ಬೇರೆ ಜಾಗಗಳು. ಪ್ರತಿತಿಂಗಳು ನಿಮಗೆ 12,500 ಲೀಟರ್ ಹಸಿ ಹಾಲು, 1000ಕೆಜಿ ಸಕ್ಕರೆ, 200 ಕೆಜಿ ಫ್ಲೇವರ್ಸ್, 625 ಕೆಜಿ ಮಸಾಲೆ ಖರೀದಿ ಮಾಡಬೇಕಾಗುತ್ತದೆ. ಇದಕ್ಕೆ 4 ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. 75,000 ಲೀಟರ್ ಹಾಲು, 36,000 ಲೀಟರ್ ಮೊಸರು, 90,000 ಲೀಟರ್ ಬೆಣ್ಣೆ ಹಾಗೂ 4500 ಲೀಟರ್ ತುಪ್ಪ ಮಾರಾಟ ಮಾಡುವ ಮೂಲಕ ವರ್ಷಕ್ಕೆ 82.5ಲಕ್ಷ ರೂಪಾಯಿ ಸಂಪಾದನೇ ಆಗುತ್ತದೆ. ಇದರಲ್ಲಿ ವಾರ್ಷಿಕ ಹೂಡಿಕೆ 74.40 ಲಕ್ಷ ರೂಪಾಯಿ, ಇದರಲ್ಲಿ 14% ಬಡ್ಡಿಯಾದರೆ, ನಿಮಗೆ 8.10 ಲಕ್ಷ ರೂಪಾಯಿ ಲಾಭ ಬರುತ್ತದೆ.