ನಿಮಗೆ ನೀವೇ ಬಾಸ್ ಆಗಿ: ಸಾಕು ಸಾಕು ಎನ್ನುವಷ್ಟು ದುಡ್ಡು ಮಾಡೋ ಬಿಸಿನೆಸ್ ಯಾವುದು ಗೊತ್ತೇ?? ಎಷ್ಟು ಆಗುತ್ತೋ ಅಷ್ಟೇ ಬಂಡವಾಳ ಹಾಕಿ.

ಈಗಿನ ಕಾಲದಲ್ಲಿ ಖರ್ಚುಗಳು ಹೆಚ್ಚಾಗುತ್ತಲೇ ಇದೆ, ಇಂತಹ ಸಮಯದಲ್ಲಿ ಕೆಲಸ ಒಂದನ್ನೇ ನಂಬಿಕೊಂಡು ಇರಲು ಆಗುವುದಿಲ್ಲ. ಕೆಲಸದ ಜೊತೆಗೆ ಹೆಚ್ಚಿನ ಆದಾಯ ಗಳಿಸಲು ಬ್ಯುಸಿನೆಸ್ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಬ್ಯುಸಿನೆಸ್ ಬಗ್ಗೆ ಸರಿಯಾಗಿ ತಿಳಿದುಕೊಂಡು, ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಮಾಡುವುದೇ ಎಲ್ಲರ ಆಸೆ ಆಗಿರುತ್ತದೆ, ಅಂತಹ ಜನರಿಗೆ ಇಂದು ನಾವು ಕೆಲವು ಬ್ಯುಸಿನೆಸ್ ಐಡಿಯಾಗಳನ್ನು ತಿಳಿಸುತ್ತೇವೆ. ನೀವು ಈ ಬ್ಯುಸಿನೆಸ್ ಗಳನ್ನು ಟ್ರೈ ಮಾಡುವ ಮೂಲಕ ಕಡಿಮೆ ಹಣದಲ್ಲಿ ಹೆಚ್ಚು ಲಾಭ ಪಡೆಯಬಹುದು.

ವಾಲ್ ಪೇಂಟಿಂಗ್ ಬ್ಯುಸಿನೆಸ್ :- ಈಗ ಇದು ಟ್ರೇಡಿಂಗ್ ಆಗಿರುವ ಬ್ಯುಸಿನೆಸ್. ಮನೆಗಳಲ್ಲಿಜ್ ಕಚೇರಿಗಳಲ್ಲಿ ಎಲ್ಲಾ ಕಡೆ, ಗೋಡೆಗಳು ಸುಂದರವಾಗಿ ಕಾಣಲು, ಕ್ರಿಯಾಶೀಲವಾಗಿ ಪೇಂಟಿಂಗ್ ಮಾಡಿಸುತ್ತಾರೆ. ನಿಮಗೆ ಪೇಂಟಿಂಗ್ ಮಾಡಲು ಚೆನ್ನಾಗಿ ಬರುವುದಾದರೆ, ಈ ಬ್ಯುಸಿನೆಸ್ ಶುರು ಮಾಡಬಹುದು. ಇದರ ಬಗ್ಗೆ ಆನ್ ಲೈನ್ ನಲ್ಲಿ ಹೆಚ್ಚಿನ ಮಾಹಿತಿ ಸಿಗುತ್ತದೆ. ಜನರಿಗೆ ಅಲಂಕಾರ ಎನ್ನುವುದು ಬಹಳ ಪ್ರಿಯವಾಗಿರುವ ಕಾರಣ, ವಾಲ್ ಪೇಂಟಿಂಗ್ ಬ್ಯುಸಿನೆಸ್ ಗೆ ಬೇಡಿಕೆ ಹೆಚ್ಚಿದೆ.

ಆಟಿಕೆಗಳ ವ್ಯಾಪಾರ :- ಈಗಿನ ಕಾಲಾದಲ್ಲಿ ಆಟಿಕೆಗಳಿಗೂ ಬೇಡಿಕೆ ಹೆಚ್ಚು. ಜನರು ಪುಟ್ಟ ಮಕ್ಕಳಿಗೆ ಉಡುಗೊರೆ ಕೊಡಲು ಆಟಿಕೆಗಳು ಒಳ್ಳೆಯ ಆಯ್ಕೆ ಎಂದು ಅವುಗಳನ್ನು ಹೆಚ್ಚು ಖರೀದಿ ಮಾಡುತ್ತಿದ್ದಾರೆ. ಮಕ್ಕಳಿಗೆ ಮಾತ್ರವಲ್ಲದೆ, ಮನೆಯನ್ನು ಅಲಂಕಾರ ಮಾಡಲು ಕೂಡ ಆಟಿಕೆಗಳನ್ನು ಬಳಸಲಾಗುತ್ತಿದೆ. ಈ ಬ್ಯುಸಿನೆಸ್ ಅನ್ನು ಕಡಿಮೆ ಹೂಡಿಕೆಯಲ್ಲಿ ಶುರು ಮಾಡಬಹುದು. ಹಾಗೂ ಆನ್ ಲೈನ್ ನಲ್ಲಿ ಈ ಬ್ಯುಸಿನೆಸ್ ಪ್ರೊಮೋಟ್ ಮಾಡಿ, ಕ್ಲಿಕ್ ಆದರೆ ಹೆಚ್ಚು ಲಾಭವನ್ನು ಗಳಿಸಬಹುದು .

ರಂಗೋಲಿ ವ್ಯಾಪಾರ :- ರಂಗೋಲಿ ಹಾಕದ ಮನೆಗಳು ಅಪೂರ್ಣ ಎನ್ನಿಸುತ್ತದೆ ಎಂದರೆ ತಪ್ಪಲ್ಲ. ಪ್ರತಿಯೊಂದು ಮನೆಯ ಮುಂದೆ ರಂಗೋಲಿ ಹಾಕುತ್ತಾರೆ, ಅದರಲ್ಲೂ ಹಬ್ಬ ಹರಿದಿನಗಳ ಸಮಯದಲ್ಲಿ ರಂಗೋಲಿ ಹಾಕಿ, ಬಣ್ಣಗಳಿಂದ ಅಲಂಕಾರ ಮಾಡುತ್ತಾರೆ. ದೀಪಾವಳಿ ಮತ್ತು ಇನ್ನಿತರ ಎಲ್ಲಾ ಹಬ್ಬಗಳಲ್ಲೂ ರಂಗೋಲಿ ವ್ಯಾಪಾರಕ್ಕೆ ಬೇಡಿಕೆ ಹೆಚ್ಚು, ಹಾಗಾಗಿ ರಂಗೋಲಿ ವ್ಯಾಪಾರ ಶುರು ಮಾಡುವ ಮೂಲಕ ನೀವು ಲಾಭ ಗಳಿಸಬಹುದು.